BBMP
Loading ...

ಬೆಂಗಳೂರು : ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಮಧ್ಯಂತ ಜಾಮೀನನ್ನು ವಿಸ್ತರಣೆಯಾಗಿದೆ. ಇಂದು (ಡಿಸೆಂಬರ್ 9) ಹೈಕೋರ್ಟ್‌ನಲ್ಲಿ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ವಾದ-ಪ್ರತಿ ವಾದಗಳನ್ನು ಆಲಿಸಿದ ಕೋರ್ಟ್‌ ಮಧ್ಯಂತರ ಜಾಮೀನು ವಿಸ್ತರಣೆ ಮಾಡುವ ನಟ ದರ್ಶನ್‌ಗೆ ತಾತ್ಕಾಲಿಕ ರಿಲೀಫ್‌ ನೀಡಿದೆ. ಹಾಗಾದರೆ ಎಲ್ಲಿಯವರೆಗೂ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

 

ಇಂದು (ಡಿಸೆಂಬರ್ 09) ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನಡೆದಿದೆ. ತನಿಖಾಧಿಕಾರಿಗಳ ಪರ ಎಸ್‌ಪಿಪಿ ಪ್ರಸನ್ನ ಕುಮಾರ್‌ ವಾದ ಮಂಡನೆ ಮಾಡಿದ್ದು, ನಟ ದರ್ಶನ್‌ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು ವಾದ ಮಂಡನೆ ಮಾಡಿದರು. ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಅವರು ನಟ ದರ್ಶನ್‌ ಮಧ್ಯಂತ ಜಾಮೀನನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದ್ದಾರೆ.

 

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ಗೆ ಬೆನ್ನು ನೋವು ಹಿನ್ನೆಲೆ ಹೈಕೋರ್ಟ್‌ 6 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಇನ್ನು ನಾಳೆಯೇ ಅಂದರೆ ಡಿಸೆಂಬರ್ 10ಕ್ಕೆ ಮಧ್ಯಂತರ ಜಾಮೀನು ಅವಧಿ ಮುಕ್ತಾಯವಾಗಲಿತ್ತು. ಇದರ ನಡುವೆಯೇ ಡಿಸೆಂಬರ್ 11ಕ್ಕೆ ನಟ ದರ್ಶನ್‌ಗೆ ಸರ್ಜರಿ ಇದೆ ಎಂದು ಸಿ.ವಿ.ನಾಗೇಶ್‌ ವಾದ ಮಂಡನೆ ಮಾಡಿದ್ದರಿಂದ ಕೋರ್ಟ್‌ ಮಧ್ಯಂತರ ಜಾಮೀನನ್ನು ವಿಸ್ತರಣೆ ಮಾಡಿದೆ ಆದೇಶ ಹೊರಡಿಸಿದೆ.

 

ಡಿ.11 ರಂದು ನಟ ದರ್ಶನ್ ಗೆ ಸರ್ಜರಿ ಫಿಕ್ಸ್ : ಹಿರಿಯ ವಕೀಲ ಸಿವಿ ನಾಗೇಶ್ ಮಾಹಿತಿ

 

 

Leave a Reply

Your email address will not be published. Required fields are marked *