ಚಿಕ್ಕಬಳ್ಳಾಪುರ: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಂದಿ ಬೆಟ್ಟದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗೇಪಲ್ಲಿ ಹೆಸರು ಮರುನಾಮಕರಣಕ್ಕೆ ಅಸ್ತು ಎಂದಿದೆ. ಇದಲ್ಲದೇ ಇತರೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಆ ಸಚಿವ ಸಂಪುಟ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ.
ಇಂದಿನ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, 2023ರಲ್ಲಿ ಅಧಿಕಾರಕ್ಕೆ ಬಂದಮೇಲೆ ಒಂದು ತೀರ್ಮಾನ ಮಾಡಿದ್ವು. ರೆವಿನ್ಯೂ ವಲಯಗಳಲ್ಲಿ ಕ್ಯಾಬಿನೆಟ್ ಮಾಡಬೇಕಂತ ತೀರ್ಮಾನ ಮಾಡಿದ್ವು. ಗುಲ್ಬರ್ಗ ವಿಭಾಗದಲ್ಲಿ ಮಾಡಿದ್ದೇವೆ. ಮೈಸೂರಿನ ಚಾಮರಾಜನಗರ ಜಿಲ್ಲೆಯಲ್ಲಿ ಮಾಡಲಾಗಿದೆ. ಬೆಳಗಾವಿ ಡಿವಿಜನ್ ಕ್ಯಾಬಿನೆಟ್ ನ ಬಿಜಾಪುರದಲ್ಲಿ ಮಾಡಬೇಕಂತ ತೀರ್ಮಾನ ಮಾಡಲಾಗಿದೆ. ನಾಳೆ ಚಿಕ್ಕಬಳ್ಳಾಪುರದ ಮಂತ್ರಿಗಳು ವಿದೇಶಕ್ಕೆ ಹೋಗ್ತಿದ್ದಾರೆ. ಅದಕ್ಕೆ ಇವತ್ತೆ ಕ್ಯಾಬಿನೆಟ್ ಮಾಡ್ತಿದ್ದೇವೆ. ನಾನು ಹೋಗೊದಕ್ಕೆ ಅನುಮತಿ ಕೊಟ್ಟಿದ್ದೇನೆ ಎಂದರು.
ಇಂದು ನಂದಿಬೆಟ್ಟದಲ್ಲಿ ಬೆಂಗಳೂರು ರವೆನ್ಯೂ ಡಿವಿಜನ್ ಸಭೆ ನಡೆಸಲಾಯಿತು. ಬೆಂಗಳೂರು ಡಿವಿಜನ್ ವಿಚಾರಗಳನ್ನ ಚರ್ಚೆ ಮಾಡಿದ್ದೇವೆ. ಬೇರೆ ಜಿಲ್ಲೆಗಳದ್ದು ತುರ್ತು ಇದ್ರೆ ಚರ್ಚೆ ಮಾಡಲಾಗುತ್ತೆದೆ. 48 ವಿಷಯಗಳನ್ನ ಚರ್ಚೆ ಮಾಡಿದ್ದೇವೆ. ಸುಮಾರು 3400 ಕೋಟಿ ಹಣ ಮಂಜೂರು ಮಾಡಲಾಗಿದೆ. ಬಿಜೆಪಿಯವರು ಪದೇ ಪದೇ ಹೇಳ್ತಾರೆ. ಅದಕ್ಕೆ ಒತ್ತಿ ಒತ್ತಿ ಹೇಳ್ತಿದ್ದೇನೆ. ನಿಮಗೆ ಮನದಟ್ಟು ಆದ್ರೆ ಸಾಕು. ಬೆಂಗಳೂರು ಡಿವಿಜನ್ ಗೆ 2050 ಕೋಟಿ ನೀಡಲಾಗಿದೆ. ಎತ್ತಿನ ಹೊಳೆ ಚರ್ಚೆ ಮಾಡಿದ್ದೇವೆ ಎಂದರು.
ಎತ್ತಿನಹೊಳಿಗೆ ಸಂಬಂಧಿಸಿದಂತೆ ನಾನು ಸಚಿವರು ಮಾತಾಡಿದ್ದೇವೆ. ಎತ್ತಿನ ಹೊಳೆ ಯೋಜನೆಗೆ ಅಂದಾಜು 23,251 ಕೋಟಿ. ಇಲ್ಲಿಯವರೆಗೆ ಖರ್ಚು ಆಗಿರುವ ಹಣ 17 ಸಾವಿರ ಕೋಟಿ ಖರ್ಚಾಗಿದೆ. ಇನ್ನೂ ಆರು ಸಾವಿರ ಕೋಟಿ ಒಳಿದಿದೆ. ಇದು ಮೂಲತಃ ಕುಡಿಯುವ ನೀರಾವರಿ ಯೊಜನೆಯಾಗಿದೆ. ಆದ್ರೆ ಕೆರೆಗಳಿಗೆ 50% ನೀರು ತುಂಬಿಸುತ್ತೇವೆ ಎಂದು ಹೇಳಿದ್ದೇವೆ. ಕುಡಿಯುವ ನೀರು ಕೆರೆ ತುಂಬಿಸೊದಕ್ಕೆ 24.1 ಟಿಎಂಸಿ ನೀರು ಬೇಕಾಗಿದೆ. ಕುಡಿಯುವ ನೀರಿಗೆ 14 ಟಿಎಂಸಿ ಬೇಕಾಗಿದೆ. ಮೊದಲು ಕುಡಿಯುವ ನೀರಿನ ಯೋಜನೆ ಮುಗಿಸುತ್ತೇವೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಜಿಲ್ಲೆಗಳಲ್ಲಿ ಕುಡಿಯುವ ನೀರನ್ನ ಕೊಡ್ತೀವಿ. ಮುನಿಯಪ್ಪನವರು 24 ಗಂಟೆ ರಾಜಕೀಯ ಯೋಚನೆ ಮಾಡ್ತಿರುತ್ತಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಸ್ಯ ಮಾಡಿದರು.

ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯರಿಂದ ಅಪಮಾನ; ಸ್ವಯಂನಿವೃತ್ತಿಗೆ ಮುಂದಾದ ಎಎಸ್ಪಿ!