BBMP
Loading ...

Gescom

ಕೊಪ್ಪಳ: ಜೆಸ್ಕಾಂ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ವಿದ್ಯುತ್ ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಗಣಿಗೇರದಲ್ಲಿ ನಡೆದಿದೆ.

ಮುನಿರಾಬಾದ್ ಜೆಸ್ಕಾಂ ಅಧಿಕಾರಿಗಳ ಕಿರುಕುಳದಿಂದ ನೊಂದು ವಿದ್ಯುತ್ ಗುತ್ತಿಗೆದಾರ ಡೆತ್ ನೋಟ್ ಬರೆದಿಟ್ಟು ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಯರಾಂ ಆತ್ಮಹತ್ಯೆಗೆ ಯತ್ನಿಸಿರುವ ವಿದ್ಯುತ್ ಗುತ್ತಿಗೆದಾರ.

ವಿಷಯ ತಿಳಿಯುತ್ತಿದ್ದಂತೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸಿಡ್ ಸೇವನೆಗೂ ಮುನ್ನ ಜಯರಾಂ ಬರೆದಿರುವ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ ಮುನಿರಾಬಾದ್ ಜೆಸ್ಕಾಂ ಅಧಿಕಾರಿಗಳು ತನಗೆ ಕಿರುಕುಳ ನೀಡುತ್ತಿರುದಾಗಿ ಉಲ್ಲೇಖಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಜಾಜಿನಗರದ ಅಂಬೇಡ್ಕರ್ ಮೆಮೊರಿಯಲ್ ಸ್ಕೂಲ್​ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಪುಟ್ಟ ಮಗುವಿನ ಕೈ ಮುರಿದ ಕನ್ನಡ ಟೀಚರ್!

Leave a Reply

Your email address will not be published. Required fields are marked *