BBMP
Loading ...

Nanjavadhutha Shree

ಬೆಂಗಳೂರು: ನಾಳೆ (ಜುಲೈ 10 ) ಗುರುವಾರದಂದು ಶ್ರೀ ಗುರು ಪೂರ್ಣಿಮಾ ಮಹೋತ್ಸವದ ಪ್ರಯುಕ್ತ ರೈತರ ದೇವರು, ನೀರಾವರಿ ಹಾಕ್ಕೋತ್ತಾಯದ ರೂವಾರಿಗಳು, ಶ್ರೀ ಸ್ಪಟಿಕಪುರಿ ಮಹಾ ಸಂಸ್ಥಾನ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಂಜಾವಧೂತ ಮಹಾ ಸ್ವಾಮೀಜಿಯವರಿಗೆ ಗುರು ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನಾಳೆ ಸಂಜೆ 5 ಗಂಟೆಗೆ ಶ್ರೀಮಠದಲ್ಲಿ ಗುರು ಪೂರ್ಣಿಮಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಭಕ್ತರೆಲ್ಲರೂ ಶ್ರೀಗುರುಗಳ ಕೃಪೆಗೆ ಪಾತ್ರರಾಗಲು ಕೋರಲಾಗಿದೆ.

ಮಠದ ಕುರಿತು : ಪಟ್ಟ ನಾಯಕನಹಳ್ಳಿಯ ಶ್ರೀಮಠ ಅವಧೂತ ಗುರು ಪರಂಪರೆಗೆ ಸೇರಿದ್ದು. 19ನೇ ಶತಮಾನದಲ್ಲಿ ತಮ್ಮ ಗುರುಗಳ ನೆನಪಿನಲ್ಲಿ 1ನೇ ನಂಜಾವಧೂತ ಸ್ವಾಮೀಜಿ ಪೀಠವನ್ನು ಸ್ಥಾಪನೆ ಮಾಡಿದರು. ತಮ್ಮ ಪವಾಡಗಳಿಂದ ಭಕ್ತರ ಮನಗೆದ್ದ ಶ್ರೀಗಳು ಅಂತ್ಯ ಕಾಲದಲ್ಲಿ ಭಕ್ತರ ಮುಂದೆ ನಾನು ಶ್ರೀಮಠದ 7ನೇ ಗುರುವಾಗಿ ಮತ್ತೆ ಪೀಠಾರೋಹಣ ಮಾಡುತ್ತೇನೆ. ಅಂದು ಎಣ್ಣೆಯಿಲ್ಲದ ದೀಪ, ಎತ್ತಿಲ್ಲದ ಗಾಡಿ ಮತ್ತು ಶ್ರೀಮಠದ ಮುಂದೆ ಗಂಗೆ ಹರಿಯುತ್ತಾಳೆ ಎಂಬ ಮಾತನ್ನು ಹೇಳಿ ಲಿಂಗೈಕ್ಯರಾದರು.

ತದನಂತರ ರಂಗಾವಧೂತ ಶ್ರೀ, ಶ್ರೀರಂಗಾವಧೂತ ಶ್ರೀ, ಮುದ್ದರಂಗವಧೂತ ಶ್ರೀ, ಪರಮಹಂಸವಧೂತ ಶ್ರೀಗಳು ಹಾಗೂ ಶ್ರೀ ಗುರುಕುಮಾರವಾಧೂತ ಶ್ರೀಗಳು ಪೀಠವನ್ನು ಅಲಂಕರಿಸಿ, ಮಠದ ಪರಂಪರೆಯನ್ನು ಬೆಳೆಸಿಕೊಂಡು ಬಂದರು. ಪ್ರಸುತ್ತ 7ನೇ ಪೀಠಾಧ್ಯಕ್ಷರಾಗಿರುವ ಶ್ರೀ ನಂಜಾವಧೂತರು ಭಕ್ತರ ಅಪೇಕ್ಷೆಯಂತೆ ಅನೇಕ ಸಮಾಜಸೇವೆಯ ಕೆಲಸಗಳನ್ನು ಮಾಡುತ್ತಾ, ಶ್ರೀಮಠ ವಿಶ್ವ ಪ್ರಸಿದ್ಧಿಯಾಗುವಂತೆ ಮಾಡಿದರು.

ಶೇಂಗಾ, ಸೂರ್ಯಕಾಂತಿ, ರಾಗಿ ಮಾತ್ರ ಬೆಳೆಯುತ್ತಿದ್ದ ತಾಲೂಕಿನ ರೈತರಿಗೆ ಕಡಿಮೆ ನೀರು ಬಳಸಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಬಹುದು ಎಂದು ಅರಿವು ಮೂಡಿಸುವ ಕಾರ್ಯ ಮಾಡಿದ್ದು, ಶ್ರೀಗಳು. ರೈತರಿಗಾಗಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಏರ್ಪಡಿಸುವ ಮೂಲಕ ನೂತನ ತಂತ್ರ ಜ್ಞಾನದ ಪರಿಚಯ ಮಾಡಿಕೊಟ್ಟಿದ್ದು ಶ್ರೀಗಳು. ಎಚ್.ಡಿ. ಕುಮಾರಸ್ವಾಮಿ, ಧರ್ಮಸಿಂಗ್, ಸದಾನಂದಗೌಡ, ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಮುಂತಾದವರು ಶ್ಲಾಘಿಸಿದ್ದಾರೆ.

ಜಲಕ್ಕಾಗಿ ಹಕ್ಕೊತ್ತಾಯ : ಯಾವ ನೀರಿನ ಸೆಲೆಯೂ ಇಲ್ಲದೆ ತತ್ತರಿಸಿರುವ ಬಯಲುಸೀಮೆಗೆ ನೀರನ್ನು ಯಾವ ಮೂಲದಿಂದ ಅದರೂ ಸರಿಯೇ ಕೂಡಿ ಎಂಬ ಹಕ್ಕೋತ್ತಾಯವನ್ನು ಸರ್ಕಾರಕ್ಕೆ ಮುಟ್ಟಿಸುವ ಶ್ರೀಗಳ ಮನದಾಳ ಅರಿತ ಸರ್ಕಾರ ಭದ್ರಾ ಮೇಲ್ಡಂಡೆ ಸೇರಿದಂತೆ ಹಲವು ನೀರಾವರಿ ಯೋಜನೆ ಜಾರಿಗೆ ಮುಂದಾಗಿರುವುದು ಶ್ರೀಗಳ ಹೋರಾಟಕ್ಕೆ ಸಿಕ್ಕ ಯಶಸ್ಸು.

ಕಾಂಗ್ರೆಸ್​ನಲ್ಲಿ ಸೆಪ್ಟೆಂಬರ್ ಕ್ರಾಂತಿ ಹಲ್​ಚಲ್.. ಕುತೂಹಲ ಮೂಡಿಸಿದ ಸಿದ್ದು, ಡಿಕೆಶಿ ನಡೆ..!

Leave a Reply

Your email address will not be published. Required fields are marked *