Greater Bengaluru News9 : ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಪರವಾನಿಗೆ ಪಡೆದು, ಪರವಾನಿಗೆಯನ್ನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಟ್ಟಡಗಳಿಗೆ ದಂಡ ವಿಧಿಸಿ, ಪರಿಷ್ಕೃತ ನಕ್ಷೆ ನೀಡುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಆದೇಶ ಮಾಡಲಾಗಿದೆ.
ಸದರಿ ಆದೇಶದ ಅನುಸಾರ ಶಾಶ್ವತ ವಿದ್ಯುತ್ ಸಂಪರ್ಕ ಪಡೆಯಲು ಬಾಕಿ ಇರುವ ಕಡತಗಳ ವಿಲೇವಾರಿ ಮಾಡುವ ಉದ್ದೇಶ ಸರ್ಕಾರದ್ದು. ಮೊದಲ ಹಂತದಲ್ಲಿ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ಪಡೆದ ಕಟ್ಟಡಗಳಿಗೆ ಅನ್ವಯವಾಗಲಿದೆ.
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಕಟ್ಟಡ ಪರವಾನಿಗೆ ಪಡೆದು, ಪರವಾನಿಗೆಯನ್ನು ಉಲ್ಲಂಘನೆ ಮಾಡಿ ನಿರ್ಮಾಣ ಮಾಡಲಾದ ಕಟ್ಟಡಗಳಿಗೆ ಕೆಳಕಂಡಂತೆ ನಿಗಧಿಪಡಿಸಲಾದ ದಂಡವನ್ನು ಪಾವತಿಸಿಕೊಂಡು ಪರಿಷ್ಕೃತ ನಕ್ಷೆಯನ್ನು ನೀಡಲು ಆದೇಶಿಸಿದೆ.
ಕಟ್ಟಡ ಪರವಾನಿಗೆ ಪಡೆದು Set Backs, Coverage ಗಳಲ್ಲಿ ಶೇಕಡ 15 ರ ಮಿತಿಯೊಳಗೆ ಉಲ್ಲಂಘನೆ ಮಾಡಿದ್ದಲ್ಲಿ ಅಂತಹ ಕಟ್ಟಗಳಿಗೆ ನಗರ ಸ್ಥಳೀಯ ಸಂಸ್ಥೆವಾರು ಕೆಳಕಂಡಂತೆ ದಂಡ ಪಾವತಿಸಿಕೊಳ್ಳುವುದು.






