Greater Bengaluru News9 : ರಾಜ್ಯ ಸರ್ಕಾರದ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯ ಮರು ಪರಿಶೀಲನೆ ಅವಧಿಯನ್ನು ವಿಸ್ತರಣೆ ಮಾಡಿ ಇಂಧನ ಇಲಾಖೆಯು ಆದೇಶ ಹೊರಡಿಸಿದೆ. ಮರು ಪರಿಶೀಲನೆ ಅರ್ಜಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ನೀಡಿದ್ದು, ಸೆಪ್ಟೆಂಬರ್ 30 ಅಂತಿಮ ದಿನವಾಗಿದೆ.
ಗೃಹಜ್ಯೋತಿ ಯೋಜನೆ ಆರಂಭವಾಗಿ ಮೂರು ವರ್ಷಗಳಾಗಿದ್ದು, ಅನರ್ಹರ ಕಡಿತಕ್ಕೆ ಸರ್ಕಾರ ಮುಂದಾಗಿ ಫಲಾನುಭವಿಗಳ ಪರಿಶೀಲನೆ ಸೂಚನೆ ನೀಡಿತ್ತು. ಮೊದಲಿಗೆ ಜುಲೈ 31ರವರೆಗೂ ಗಡುವು ನೀಡಿತ್ತು. ಪೂರ್ಣಗೊಳ್ಳದ ಹಿನ್ನೆಲೆ ಆಗಸ್ಟ್‌ವರೆಗೂ ವಿಸ್ತರಣೆ ಮಾಡಲಾಗಿತ್ತು. ಆದರೆ, ಇನ್ನೂ ಸಾಕಷ್ಟು ಫಲಾನಭವಿಗಳು ಅರ್ಜಿ ಸಲ್ಲಿಕೆ ಮಾಡದ ಕಾರಣ ಸೆಪ್ಟೆಂಬರ್ ಅಂತ್ಯದವರೆಗೂ ವಿಸ್ತರಣೆ ಮಾಡಿ ಆದೇಶಿಸಲಾಗಿದೆ.
ಬೆಸ್ಕಾಂನಲ್ಲಿ 22 ಲಕ್ಷ ಫಲಾನುಭವಿಗಳು ಬಾಕಿ
ಬೆಸ್ಕಾಂ ವ್ಯಾಪ್ತಿಯಲ್ಲಿ 68 ಲಕ್ಷ ಫಲಾನುಭವಿಗಳ ಪೈಕಿ ಆಗಸ್ಟ್ ಅಂತ್ಯದವರೆಗೂ 46 ಲಕ್ಷ ಫಲಾನುಭವಿಗಳ ಮರು ಪರಿಶೀಲನೆ ಪೂರ್ಣಗೊಂಡಿದೆ. ಇನ್ನೂ 22 ಲಕ್ಷ ಫಲಾನುಭವಿಗಳು ನಾನಾ ಕಾರಣಗಳಿಂದ ದೂರ ಉಳಿದಿದ್ದಾರೆ. ಸದ್ಯ ಸಿಬ್ಬಂದಿ ಮತ್ತೊಮ್ಮೆ ಮನೆಗಳಿಗೆ ತೆರಳಿ ಖಚಿತಪಡಿಸಿಕೊಳ್ಳಲಿದ್ದಾರೆ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಮರುಪರಿಶೀಲನೆ ಯಶಸ್ವಿಯಾಗಿದೆಯಾ? ಚೆಕ್ ಮಾಡುವುದೇಗೆ?
ಗೃಹಜ್ಯೋತಿ ಮರುಪರಿಶೀಲನೆ ಅರ್ಜಿ ಸಲ್ಲಿಕೆ ಮಾಡಿದ್ದರೆ ಆಗಸ್ಟ್‌ನ ವಿದ್ಯುತ್ ಬಿಲ್‌ನಲ್ಲಿ ಮೇಲ್ಭಾಗದಲ್ಲಿಯೇ ಜೆವೈಸರ್ವ್ಡೇ (GJSURVEYED) ಎಂದು ನಮೂದಾಗಿರುತ್ತದೆ. ಒಂದು ವೇಳೆ ತಡವಾಗಿ ಅರ್ಜಿ ಸಲ್ಲಿಕೆ ಮಾಡಿದ್ದರೆ ಸೆಪ್ಟೆಂಬರ್‌ನ ಬಿಲ್‌ನಲ್ಲಿ ನಮೂದಿಸಲಾಗಿರುತ್ತದೆ.
ಗೃಹ ಜ್ಯೋತಿ ಯೋಜನೆ ಬೆಸ್ಕಾಂ ಸಹಾಯವಾಣಿ ಸಂಖ್ಯೆಗಳು
- 9480816111
- 9480816112
- 9480816113
- 9480816114



