ಬೆಂಗಳೂರು: ಕಾಮಾಕ್ಷಿ ಪಾಳ್ಯ, ಸುಂಕದಕಟ್ಟೆ, ಸುಮನಹಳ್ಳಿ ಭಾಗದ ಜನತೆ ಬಹಳ ದಿನಗಳಿಂದ ಎದುರು ನೋಡುತ್ತಿದ್ದ ನಮ್ಮ ಮೆಟ್ರೋ 3ನೇ ಹಂತದ ಕಿತ್ತಳೆ ಮಾರ್ಗಕ್ಕೆ ಪ್ರಧಾನಿ ಮೋದಿ ಅವರು ಇಂದು (ಆಗಸ್ಟ್ 10) ಶಂಕುಸ್ಥಾಪನೆ ನೇರವೇರಿಸಿದರು.
ಕೆಎಸ್ಆರ್ ರೈಲು ನಿಲ್ದಾಣದಿಂದ ರಸ್ತೆ ಮಾರ್ಗದ ಮೂಲಕ ಆರ್ವಿ ರಸ್ತೆ (ರಾಗಿಗುಡ್ಡ) ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ 12 ರಿಂದ 12.30 ರ ನಡುವೆ ಹಳದಿ ಮಾರ್ಗಕ್ಕೆ ಚಾಲನೆ ನೀಡಿದರು. ಈ ವೇಳೆ ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಾಥ್ ನೀಡಿದರು. ಆರ್ವಿ ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಾಗಲಿರುವ ಹಳದಿ ಮೆಟ್ರೋ ಮಾರ್ಗ 19.15 ಕಿ.ಮೀ ಉದ್ದವಿದೆ. ಈ ಮಾರ್ಗದ ನಡುವೆ 16 ಸ್ಟೇಷನ್ ಬರಲಿದ್ದು, ಇದನ್ನು 5,056.99 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.
ಇಂದು (ಆಗಸ್ಟ್ 08) ಬೆಳಗ್ಗೆ 10.30ರ ಸುಮಾರಿಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ನಲ್ಲಿ ಬಂದಿಳಿದ ಪ್ರಧಾನಿ ಮೋದಿ, ಬಳಿಕ ಕಾರಿನ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ ಬೆಂಗಳೂರು- ಬೆಳಗಾವಿ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಿದರು. ಹಸಿರು ಬಾವುಟ ಹಾರಿಸುವ ಮೂಲಕ ರೈಲು ಪ್ರಯಾಣಕ್ಕೆ ಚಾಲನೆ ನೀಡಿದರು.
ರಾಗಿಗುಡ್ಡದಲ್ಲಿ ಹಳದಿ ಮೆಟ್ರೋಗೆ ಚಾಲನೆ ನೀಡಿದ ಬಳಿಕ ಮೊದಲ ಹಳದಿ ಮೆಟ್ರೋದಲ್ಲಿ ಪ್ರಧಾನಿ ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ವಿದ್ಯಾರ್ಥಿಗಳು ಪ್ರಯಾಣಿಸಿದರು. ಎಲೆಕ್ಟ್ರಾನಿಕ್ ಸಿಟಿಯವರೆಗೆ ಇದೇ ಮೆಟ್ರೋದಲ್ಲಿ ಸಾಗಿದ ಮೋದಿ, ಐಐಐಟಿ ಆಡಿಟೋರಿಯಂನಲ್ಲಿ ಮೆಟ್ರೋ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಮೆಟ್ರೋ 3ನೇ ಹಂತದ ಯೋಜನೆ ಆರೇಂಜ್ ಲೈನ್ (ಕಿತ್ತಳೆ ಮಾರ್ಗ) ಆಗಿದೆ. ಇದು 44.65 ಕಿ.ಮೀ ದೂರ ಹೊಂದಿದ್ದು, ಇದನ್ನು ಅಂದಾಜು 15,611 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಈ ಮಾರ್ಗದ ರೈಲು ಜೆಪಿ ನಗರ 4ನೇ ಫೇಸ್ನಿಂದ ಕೆಂಪಾಪುರದವರೆಗೆ ಸಾಗಲಿದೆ. ಒಟ್ಟು 31 ನಿಲ್ದಾಣಗಳು ಆರೆಂಜ್ ಲೈನ್ಗೆ ಒಳಪಟ್ಟಿದ್ದು, ಯೋಜನೆ 2030ರೊಳಗೆ ಪೂರ್ಣಗೊಳ್ಳಲಿದೆ.
ಯಾವೆಲ್ಲ ನಿಲ್ದಾಣಗಳು?
1. ಕೆಂಪಾಪುರ
2. ಹೆಬ್ಬಾಳ ರೈಲು ನಿಲ್ದಾಣ
3. ನಾಗಶೆಟ್ಟಿಹಳ್ಳಿ
4. ಬಿಇಎಲ್ ಸರ್ಕಲ್
5. ಮುತ್ಯಾಲನಗರ
6. ಪೀಣ್ಯ
7. ಕಂಠೀರವ ನಗರ
8. ಸ್ವಾತಂತ್ರ್ಯ ಯೋಧರ ಕಾಲೊನಿ
9. ಚಾಡೇಶ್ವರಿನಗರ
20. ನಾಗರಬಾವಿ ಬಿಡಿಎ
11. ಪಾಪರೆಡ್ಡಿಪಾಳ್ಯ
12. ವಿನಾಯಕ ಲೇಔಟ್
13. ನಾಗರಬಾವಿ ವೃತ್ತ
14. ಮೈಸೂರು ರಸ್ತೆ
15. ದ್ವಾರಕಾನಗರ
16. ಹೊಸಹಳ್ಳಿ–ಕಡಬಗೆರೆ ಎರಡನೇ ಕಾರಿಡಾರ್
17. ಹೊಸಹಳ್ಳಿ
18. ಕಾಮಾಕ್ಷಿಪಾಳ್ಯ
19. ಕೆ.ಎಚ್.ಬಿ.ಕಾಲೊನಿ
20. ಸುಮನಹಳ್ಳಿ ಕ್ರಾಸ್
21. ಸುಂಕದಕಟ್ಟೆ
22. ಹೇರೋಹಳ್ಳಿ
23. ಬ್ಯಾಡರಹಳ್ಳಿ
24. ಕಾಮತ್ ಲೇಔಟ್
25. ಕಡಬಗೆರೆ


