BBMP
Loading ...

Yellow Metro

ನಮ್ಮ ಮೆಟ್ರೋ ಎರಡನೇ ಹಂತದ ಮಾರ್ಗಗಳಲ್ಲಿ ನಿರಂತರ ಮತ್ತು ಸುಗಮ ಮೊಬೈಲ್ ಸಂಪರ್ಕವನ್ನು ಒದಗಿಸುವ ಸಲುವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಎಡ್ಯಾನ್ಸ್ ಕಮ್ಯೂನಿಕೇಶನ್ ಅಂಡ್ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್‌ ಕಂಪನಿ (ACES India Pvt. Ltd) ಸಂಸ್ಥೆಯೊಂದಿಗೆ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಹೆಜ್ಜೆ, ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ಜೊತೆಗೆ ಪ್ರಯಾಣ ದರದ ಹೊರತಾಗಿ ಆದಾಯವನ್ನು ಉತ್ಪಾದಿಸುವ (non-fare box revenue) ಬಿಎಂಆರ್‌ಸಿಎಲ್‌ನ ದೃಢ ನಿಲುವನ್ನು ತೋರಿಸುತ್ತದೆ.

ಈ ಕುರಿತು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಮಹೇಶ್ವರ ರಾವ್ ಮಾತನಾಡಿದ್ದು, ನಾವು ಮುಂದಿನ ಪೀಳಿಗೆಯ ಪ್ರಯಾಣದ ಪರಿಹಾರಗಳನ್ನು ನೀಡಲು ಬದ್ಧರಾಗಿದ್ದೇವೆ. ತಂತ್ರಜ್ಞಾನವನ್ನು ಅಳವಡಿಸುವ ಮೂಲಕ ನಮ್ಮ ಸೇವೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದೇವೆ. ಈ 13 ವರ್ಷಗಳ ಪರವಾನಗಿ ಅವಧಿಯ ಒಪ್ಪಂದದ ಭಾಗವಾಗಿ, ಎಸಿಇಎಸ್ ಇಂಡಿಯಾ ಸಂಸ್ಥೆ ಹಂತ-1 ರ ನಾಲ್ಕು ದಿಕ್ಕು ವಿಸ್ತರಣೆಗಳು ಹಾಗೂ ಹಂತ-11ರ ರೀಚ್-5 ಮತ್ತು ರೀಚ್ -6 ಮಾರ್ಗಗಳ ಮೆಟ್ರೋ ನಿಲ್ದಾಣಗಳಲ್ಲಿ ಟೆಲಿಕಾಂ ಇನ್ಸಾಸ್ಟಕ್ಟರ್ (IBS, BTS, ಸೆಲ್ಯುಲಾರ್ ಟವ‌ರ್ಗಗಳು ಹಾಗೂ ಪೋಲ್‌ಗಳು) ಅನ್ನು ಸ್ಥಾಪಿಸಿ, ಕಾರ್ಯನಿರ್ವಹಿಸಿ, ನಿರ್ವಹಣೆ ಮಾಡಲಿದೆ ಎಂದರು.

ಈ ಮೂಲಸೌಕರ್ಯವು ಅನೇಕ ಮೊಬೈಲ್ ನೆಟ್​ವರ್ಕ್​ ಆಪರೇಟರ್‌ಗಳಿಗೆ ಬೆಂಬಲ ನೀಡುತ್ತದೆ, ಜಾಗದ ಸಮರ್ಪಕ ಬಳಕೆ ಸಾಧ್ಯವಾಗುತ್ತದೆ. ಪುನರಾವೃತ ವ್ಯಯವನ್ನು ತಪ್ಪಿಸಬಹುದು, ಅನುಸ್ಥಾಪನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಹಾಗೂ 4G/5G ಸೇವೆಗಳ ವೇಗದ ರೋಲ್‌ಔಟ್​ಗೂ ದಾರಿ ಮಾಡಿಕೊಡುತ್ತದೆ. ಈ ಮಾರ್ಗಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿರಂತರ ಸಂಪರ್ಕದ ಅನುಭವ ಪಡೆಯಲಿದ್ದಾರೆ ಎಂದು ಹೇಳಿದರು.

ಈ ಒಪ್ಪಂದಕ್ಕೆ ಬಿಎಂಆರ್‌ಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ (ಸಿಸ್ಟಮ್ಸ್) ಎ.ಎಸ್. ಶಂಕರ್ ಮತ್ತು ಎಸಿಇಎಸ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಎನ್. ಮಝರ್ ಸಹಿ ಹಾಕಿದರು. ಈ ಸಂದರ್ಭದಲ್ಲಿ ಬಿಎಂಆರ್‌ಸಿಎಲ್‌ನ ನಿರ್ದೇಶಕರಾದ (ಆರ್‌ಎಸ್‌ಇ ಮತ್ತು ಓ & ಎಂ) ಸುಮಿತ್ ಭಟ್ನಾಗರ್ ಹಾಗೂ ಎಸಿಇಎಸ್ ಗ್ರೂಪ್ ಸಿಇಒ ಡಾ. ಅಕ್ರಮ್ ಅಬುರಾಸ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

1600 ಕೋಟಿ ಆಸ್ತಿಯಲ್ಲಿ ಚಿಕ್ಕಪೇಟೆ ಜನರಿಗೆ ಅರ್ಧ ಪಾಲು ಕೊಡ್ತೀನಿ ಹೊರತು ಮಗನಿಗೆ ಕೊಡಲ್ಲ: ಕೆಜಿಎಫ್​ ಬಾಬು

Leave a Reply

Your email address will not be published. Required fields are marked *