Greater Bengaluru News9 : ದಶಕಗಳಿಂದ ತಮ್ಮದೇ ಜಮೀನಿನ ಹಕ್ಕು ಪತ್ರಕ್ಕಾಗಿ ಕಾಯುತ್ತಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರಿಗೆ ರಾಜ್ಯ ಕಂದಾಯ ಇಲಾಖೆಯು ದೊಡ್ಡ ಆಸರೆಯಾಗಲು ಮುಂದಾಗಿದೆ. ಸರ್ಕಾರಿ ಜಮೀನು ಮಂಜೂರಾಗಿ 25 ರಿಂದ 50 ವರ್ಷಗಳೇ ಕಳೆದಿದ್ದರೂ, ಈವರೆಗೂ ಪೋಡು ಆಗದ ಮತ್ತು ಮೂಲ ಮಾಲೀಕರ ನಿಧನದ ನಂತರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆಯಾಗದ ಸಾವಿರಾರು ಪ್ರಕರಣಗಳಿಗೆ ಈ ಅಭಿಯಾನದ ಮೂಲಕ ಶಾಶ್ವತ ಪರಿಹಾರ ಸಿಗಲಿದೆ.
ಎಲ್ಲಿ ನಡೆಯಲಿದೆ?
- ಬೆಂಗಳೂರು ಗ್ರಾಮಾಂತರ ಜಿಲ್ಲೆ ಭೂ ಗ್ಯಾರಂಟಿ ಸಮರ್ಪಣೆ –
- 15000 ವಿವಿಧ ಕಂದಾಯ ಸೇವೆಗಳ ಸಮರ್ಪಣಾ ಸಮಾವೇಶ.
- 11 ಗಂಟೆಗೆ, ಮಾರ್ಚ್ 4, ಬುಧವಾರ
- ಚನ್ನ ಬೈರೇಗೌಡ ಸ್ಟೇಡಿಯಂ, ಹೊಸಕೋಟೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಅಭಿಯಾನದ ಪ್ರಮುಖ ಅಂಶಗಳು:
ಮನೆ ಬಾಗಿಲಿಗೆ ಕಂದಾಯ ಇಲಾಖೆ: ಕಂದಾಯ ಇಲಾಖೆಯ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ಜನರ ಮನೆ ಬಾಗಿಲಿಗೆ ತೆರಳಿ, ಬಾಕಿ ಉಳಿದಿರುವ ಕೆಲಸಗಳನ್ನು ಪೂರೈಸುವ ವಿಶಿಷ್ಟ ಅಭಿಯಾನ ಇದಾಗಿದೆ.
ದಶಕಗಳ ಸಮಸ್ಯೆಗೆ ಮುಕ್ತಿ: 30 ವರ್ಷಗಳಿಂದ ಮನೆ ಕಟ್ಟಿಕೊಂಡಿದ್ದರೂ ಹಕ್ಕು ಪತ್ರವಿಲ್ಲದ ಮತ್ತು ಊರಿನ ಕಂದಾಯ ದಾಖಲೆಗಳಲ್ಲಿ ಸೇರದ ಪ್ರಕರಣಗಳನ್ನು ಗುರುತಿಸಿ ವಿಲೇವಾರಿ ಮಾಡಲಾಗುತ್ತಿದೆ.
ಶಾಶ್ವತ ದಾಖಲೆಗಳ ವಿತರಣೆ: ರೈತರು ನೆಮ್ಮದಿಯಿಂದ ಬದುಕಲು ಪಕ್ಕಾ ದಾಖಲೆಗಳನ್ನು ಒದಗಿಸಿ, ಅವರಿಗೆ ‘ಭೂ ಗ್ಯಾರಂಟಿ’ಯನ್ನು ಸಮರ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಕಾರ್ಯಕ್ರಮದ ವಿವರ:
ಈ ವಿಶೇಷ ಕಾರ್ಯಕ್ರಮವು ಬರುವ ಬುಧವಾರ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಇಲಾಖೆಯು ಮನವಿ ಮಾಡಿದೆ. ಇಲಾಖೆಯ ಈ ಜನಪರ ಕೆಲಸಕ್ಕೆ ಸಾರ್ವಜನಿಕರು ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌದ ಅವರು ಕೋರಿದ್ದಾರೆ.


