BBMP
Loading ...

E Khatha

ಇದೀಗ ಬೆಂಗಳೂರಿನಲ್ಲಿ ಬಿಬಿಎಂಪಿಯು ಇ – ಖಾತಾ ಮೇಳದ ಮೂಲಕ ಆಸ್ತಿದಾರರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಹಾಗಾದರೆ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಇ ಖಾತಾ ಮೇಳ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಿ ಇ – ಖಾತಾ ಮೇಳ ನಡೆಯಲಿದೆ ಎನ್ನುವ ಕಂಪ್ಲೀಟ್‌ ಡೀಟೆಲ್ಸ್‌‌ ಇಲ್ಲಿದೆ.

ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯ 3 ವಲಯಗಳಲ್ಲಿ ಶನಿವಾರ ಇ-ಖಾತಾ ಮೇಳಾವನ್ನು ಆಯೋಜಿಸಲಾಗಿತ್ತು. ಈ ಮೇಳ ಯಶಸ್ವಿಯಾಗಿ ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಥಳಗಳಲ್ಲಿ ಇ – ಖಾತಾ ಮೇಳ ನಡೆಸುವುದಕ್ಕೆ ಬಿಬಿಎಂಪಿಯು ಪ್ಲ್ಯಾನ್‌ ಮಾಡಿಕೊಂಡಿದೆ.

ಬಿಬಿಎಂಪಿಯು ಸಾರ್ವಜನಿಕರ ಅನುಕೂಲಕ್ಕಾಗಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು/ ಸಾರ್ವಜನಿಕ ಗುಂಪುಗಳ ಮೂಲಕ ಇ-ಖಾತಾ ಮೇಳಗಳನ್ನು ಆಯೋಜಿಸುತ್ತಿದೆ. ಶನಿವಾರ ಮಹದೇವಪುರ, ಯಲಹಂಕ ಹಾಗೂ ಪಶ್ಚಿಮ ವಲಯ ಸೇರಿದಂತೆ 3 ವಲಯಗಳಲ್ಲಿ ಇ-ಖಾತಾ ಮೇಳ ನಡೆಸಲಾಗಿದೆ.

ನಗರದಲ್ಲಿ ಆಸ್ತಿದಾರರಿಗೆ ಇ-ಖಾತಾ ಕೊಡುವುದನ್ನು ಇನ್ನಷ್ಟು ಸರಳವಾಗಿಸುವ ಉದ್ದೇಶದಿಂದ ಪಾಲಿಕೆವತಿಯಿಂದ ಹಾಗೂ ಬೆಂಗಳೂರಿನಲ್ಲಿ ಎಲ್ಲೇ ಆಸಕ್ತರು ಇದ್ದರೂ ತಾವೇ ತಮ್ಮ ಹತ್ತಿರದ ಪ್ರದೇಶಗಳಲ್ಲಿ ಇ-ಖಾತಾ ಮೇಳವನ್ನು ಆಯೋಜಿಸಲು ಅವಕಾಶ ಕೊಡಲಾಗಿದೆ. ನಾಗರಿಕ ಗುಂಪುಗಳು ಅಥವಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಈ ಅವಕಾಶವನ್ನು ಕೊಡಲಾಗಿದೆ. ಇದಕ್ಕಾಗಿ ಬಿಬಿಎಂಪಿ ಸಂಪೂರ್ಣ ಸಹಕಾರ ಕೊಡಲಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹದೇವಪುರ ವಲಯ: ಮಹದೇವಪುರ ವಲಯದಲ್ಲಿ ಮೊದಲನೇ ಹಂತದಲ್ಲಿ ಕೆ.ಆರ್.ಪುರ ವ್ಯಾಪ್ತಿಗೆ ಬರುವ ಹೊರಮಾವು ಉಪವಿಭಾಗದ ಮಂತ್ರಿ ವೆಬ್ ಸಿಟಿ ಹೊರಮಾವಿನಲ್ಲಿ ಇ-ಖಾತಾ ಮೇಳ ಆಯೋಜಿಸಲಾಗಿತ್ತು.

ಹೊರಮಾವು ಉಪವಿಭಾಗ ವ್ಯಾಪ್ತಿಯ ಸುಮಾರು 550 ಆಸ್ತಿ ಮಾಲೀಕರು ಇ-ಆಸ್ತಿಯನ್ನು ಪಡೆಯಲು ಮೇಳದಲ್ಲಿ ಭಾಗವಹಿಸಿದ್ದರು. ಹೊರಮಾವು ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿ, ಕಂದಾಯ ಮೌಲ್ಯ ಮಾಪಕರು ಕಂದಾಯ ಪರಿವೀಕ್ಷಕರು ಹಾಗೂ ಕಂಪ್ಯೂಟರ್‌ ಆಪರೇಟರ್ ಸೇರಿ ಒಟ್ಟು 313 ಆಸ್ತಿ ಮಾಲೀಕರಿಗೆ ಮೇಳದಲ್ಲಿಯೇ ಯಶಸ್ವಿಯಾಗಿ ಅಂತಿಮ ಇ-ಖಾತಾವನ್ನು ವಿತರಿಸಲಾಗಿದೆ. 63 ಇ-ಖಾತಾ ತಿದ್ದುಪಡಿಗಳನ್ನು ಸಹಾ ಸ್ಥಳದಲ್ಲಿಯೇ ಸಾರ್ವಜನಿಕರಿಗೆ ಮಾಡಿಕೊಡಲಾಗಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಶ್ಚಿಮ ವಲಯ: ಇನ್ನು ಪಶ್ಚಿಮ ವಲಯ ಗಾಂಧಿನಗರ ಉಪ ವಿಭಾಗ ಗೋಪಾಲಪುರದ ಪ್ರೆಸ್ಟೀಜ್ ವೆಸ್ಟ್ ವುಡ್ಸ್ ನಲ್ಲಿ ಶನಿವಾರ ಇ-ಖಾತಾ ಮೇಳ ಆಯೋಜಿಸಲಾಗಿತ್ತು. ಈ ವೇಳೆ 45 ಡ್ರಾಫ್ಟ್ ಡೌನ್ಲೋಡ್ ಮಾಡಿಕೊಡಲಾಗಿದೆ. 5 ಅಂತಿಮ ಇ-ಖಾತಾ ನೀಡಲಾಗಿದೆ. ಮೇಳಾದಲ್ಲಿ ಇ-ಖಾತಾ ಪಡೆಯುವ ಕುರಿತು ತರಬೇತಿ ಕೂಡಾ ನೀಡಲಾಗಿದೆ. ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಇ-ಖಾತಾ ನೀಡುವ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿದೆ.

ಯಲಹಂಕ ವಲಯ: ಯಲಹಂಕ ವಲಯ ವಿದ್ಯಾರಣ್ಯ ಉಪ ವಿಭಾಗ ಕುವೆಂಪುನಗರದಲ್ಲಿನ ಸಿಂಗಾಪುರ ಬಸ್ ನಿಲ್ದಾಣದ ಕಳೆದ 2 ದಿನಗಳಿಂದ ಇ-ಖಾತಾ ಮೇಳಾ ಆಯೋಜಿಸಲಾಗಿದೆ. ಇದುವರೆಗೆ 394 ಆಸ್ತಿ ಮಾಲೀಕರು ಇ-ಖಾತಾ ಪಡೆಯಲು ಮುಂದಾಗಿದ್ದಾರೆ. ಈ ಪೈಕಿ ಎಲ್ಲರಿಗೂ ಡ್ರಾಪ್ಟ್ ಇ-ಖಾತಾ ನೀಡಲಾಗಿದೆ. 300 ಅರ್ಜಿದಾರರಿಗೆ ಅಂತಿಮ ಇ-ಖಾತಾಗಳನ್ನು ನೀಡಲಾಗಿದ್ದು, ಇನ್ನುಳಿದ 94 ಅರ್ಜಿಗಳನ್ನು ಸಹಾಯಕ ಕಂದಾಯ ಅಧಿಕಾರಿ ಮೂಲಕ ಖಾತ ನೀಡುವ ಪ್ರಕ್ರಿಯೆ ಮುಂದುವರಿಸಲಾಗಿದೆ ಎಂದು ಬಿಬಿಎಂಪಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದು ಮಂಡನೆಯಾದ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಏನು? ಇಲ್ಲಿದೆ ಮಾಹಿತಿ…

Leave a Reply

Your email address will not be published. Required fields are marked *