BBMP
Loading ...

GBA

Greater Bengaluru News9 : ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಕೆಲಸದ ಜೊತೆಗೆ ಇತರೆ ಕೆಲಸಗಳನ್ನ ಮಾಡುವಂತೆ ಒತ್ತಡ ಹೇರಿದ ಆರೋಪ ಕೇಳಿ ಬಂದಿದ್ದು, ಸಾಮೂಹಿಕ ರಾಜೀನಾಮೆಗೆ ಜಿಬಿಎ ಅಧಿಕಾರಿ, ನೌಕರರು ಮುಂದಾಗಿದ್ದಾರೆ. ಸಮೀಕ್ಷೆ ಮುಗಿಯೋವರೆಗೂ ಆಸ್ತಿ ಸೀಲಿಂಗ್ ಕೆಲಸ ಮಾಡಲ್ಲ ಎಂದು ಅಧಿಕಾರಿ, ನೌಕರರು ಹೇಳ್ತಿದ್ದು. ಅತಿಯಾದ ಕೆಲಸ, ಮಾನಸಿಕ ಒತ್ತಡಕ್ಕೆ ಬೇಸತ್ತ ನೌಕರರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.

ಸಾಮೂಹಿಕ ರಾಜೀನಾಮೆ ಎಚ್ಚರಿಕೆ
ಕಂದಾಯ ಇಲಾಖೆಯ ಅಧಿಕಾರಿ, ನೌಕರರ ಬಳಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಾತ್ರಿ, ಹಗಲು ಅನ್ನದೆ ಕೆಲಸ ಮಾಡಿಸ್ತಿದೆ ಎನ್ನಲಾಗ್ತಿದೆ. ಹೀಗಾಗಿ ಒಂದಾದ ನೌಕರರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ. 60ಕ್ಕೂ ಹೆಚ್ಚು ಅಧಿಕಾರಿ, ನೌಕರರು ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.

ಹೆಚ್ಚುವರಿ ಕೆಲಸಗಳಿಂದ ಮಾನಸಿಕ ಒತ್ತಡ
ಜಿಬಿಎ ಕಂದಾಯ ಇಲಾಖೆಯಲ್ಲಿ ಕಳೆದ ಎರಡು ವರ್ಷದಲ್ಲಿ 5 ಜನ ಕಂದಾಯ ಇಲಾಖೆ ನೌಕರರ ಸಾವನ್ನಪ್ಪಿದ್ದಾರೆ. ಹೆಚ್ಚುವರಿ ಕೆಲಸಗಳಿಂದ ಮಾನಸಿಕ ಒತ್ತಡ ಆಗ್ತಿದೆ ಎಂಬ ಆರೋಪ ಕೇಳಿ ಬರ್ತಿದೆ.

ಅಧಿಕಾರಿ, ನೌಕರರ ಆರೋಪಗಳೇನು?

  • 2025ರ ಮತದಾನ ಪಟ್ಟಿ ಪರಿಷ್ಕರಣೆ ಹಿನ್ನೆಲೆ ಪಟ್ಟಿ ಮ್ಯಾಪಿಂಗ್ ಮಾಡುವ ಕೆಲಸ ಪ್ರಗತಿಯಲ್ಲಿದೆ
  • ಬಿಎಲ್ಓ ಸೂಪರ್ ವೈಸರ್ ಗಳಾಗಿ ರಾತ್ರಿ-ಹಗಲು ಕೆಲಸ ಮಾಡ್ತಿದ್ದೇವೆ
  • ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲೂ ಅಧಿಕಾರಿ, ನೌಕರರು ಭಾಗಿ * ಗಣತಿದಾರರ ಆದೇಶ ಜಾರಿ ಮಾಡುವುದು, ತರಬೇತಿ ಆಯೋಜಿಸುವುದು, ಸಿದ್ದಗೊಳಿಸುವ ದಾಖಲಾತಿ ತೆಗೆದುಕೊಳ್ಳುವ ಕೆಲಸ ಮಾಡ್ತಿದ್ದೇವೆ
  • ಈ ನಡುವೆ ಕಂದಾಯ ಪರಿವೀಕ್ಷಕರು ಪ್ರತಿದಿನ ತಲಾ ಒಂದೊಂದು ಆಸ್ತಿ ಸೀಲಿಂಗ್ ಮಾಡಬೇಕು ಒತ್ತಾಯ
  • ಕಂದಾಯ ವಿಭಾಗದ ವಿಶೇಷ ಆಯುಕ್ತರಿಂದ ಒತ್ತಡ ಹಾಕುವ ಕೆಲಸ ಆಗ್ತಿದೆ
  • ಕಳೆದ ಎರಡು ವರ್ಷದಲ್ಲಿ ಕಾರ್ಯ ಒತ್ತಡದಿಂದ ಐವತ್ತು ದಿನ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ
  • ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮುಗಿಯವವರೆಗೂ ಇ ಆಸ್ತಿ ಹಾಗೂ ಆಸ್ತಿ ಸೀಲಿಂಗ್ ಮಾಡಲು ಒತ್ತಾಯಿಸಿದಂತೆ ಮನವಿ
  • ಇದೊಂದು ರೀತಿ ಮಾನಸಿಕ, ದೈಹಿಕ‌ ಹಿಂಸೆ ಆಗ್ತಿದೆ ಅಂತ ಆರೋಪ
  • ಇಲ್ಲವಾದಲ್ಲಿ ಸಾಮೂಹಿಕ ರಾಜೀನಾಮೆ ಕೊಡ್ತೇವೆ ಎಂದು ಎಚ್ಚರಿಕೆ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉಸ್ತುವಾರಿ, ತರಬೇತಿಗೆ ನೌಕರರನ್ನ ನಿಯೋಜನೆ ಮಾಡಲಾಗಿದೆ. ಹೆಚ್ಚಿದ ಕೆಲಸ ಹಾಗೂ ಒತ್ತಡದ ಬಗ್ಗೆ ಜಿಬಿಎ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಅವರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *