ಬೆಂಗಳೂರು: ಭ್ರಷ್ಟಾಚಾರದಲ್ಲಿ ಕರ್ನಾಟಕವೇ ನಂಬರ್ ಒನ್ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರೂ ಆಗಿರುವ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದೆ. ಈ ವಿಚಾರವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಇನ್ನು, ಸಾಮಾಜಿಕ ಮಾಧ್ಯಮವಾದ ಎಕ್ಸ್ನಲ್ಲಿ ನೆಟ್ಟಿಗರು ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಅಕ್ಷರಶಃ ಸ್ಯತ್ಯ ಎನ್ನುತ್ತಿದ್ದಾರೆ.
ಹೌದು, ನೆಟ್ಟಿಗರು ತಮ್ಮ ಆಸ್ತಿ ದಾಖಲೆಗಳನ್ನು ಮತ್ತೊಂಬರ ಹೆಸರಿಗೆ ವರ್ಗಾಯಿಸಲು ಅಥವಾ ದಾಖಲೆಗಳಲ್ಲಿನ ಹೆಸರು ಬದಲಾಯಿಸಲು ಸರ್ಕಾರಿ ಕಚೇರಿಗಳಿಗೆ ತೆರಳಿದರೆ ಅಲ್ಲಿನ ಅಧಿಕಾರಿಗಳು 15 ಸಾವಿರ, 30 ಸಾವಿರ ರೂ. ಲಂಚ ಪಡೆದಿರುವುದನ್ನು ಟ್ವೀಟ್ ಮೂಲಕ ತಿಳಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ನೆಟ್ಟಿಗ ಮಾಧವ ಎಂಬುವರು ಎಕ್ಸ್ನಲ್ಲಿ ಟ್ಚೀಟ್ ಮಾಡಿದ್ದು, ನನ್ನ ತಂದೆ 14 ಸೆಂಟ್ಸ್ ಆಸ್ತಿ ನೋಂದಣಿಗಾಗಿ ತಹಶೀಲ್ದಾರ್ಗೆ 3 ಲಕ್ಷ ರೂ. ಮತ್ತು ಕಂಪ್ಯೂಟರ್ ಆಪರೇಟರ್ಗೆ 10 ಸಾವಿರ ರೂ. ಲಂಚ ನೀಡಿದ್ದಾರೆ. ಆದರೂ ಕೂಡ ನೋಂದಣಿಯಾದ ದಾಖಲೆ ಪತ್ರ ಇನ್ನೂ ಕೂಡ, 3 ತಿಂಗಳು ಕಳೆದರೂ ನಮ್ಮ ಕೈ ಸೇರಿಲ್ಲ ಎಂದು ಪೋಸ್ಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇವರ ಪೋಸ್ಟ್ಗೆ asdf ಎಂಬ ಹೆಸರಿನ ಖಾತೆದಾರರು, ಉತ್ತರ ಬೆಂಗಳೂರಿನಲ್ಲಿ 1500 ಚದರ ಅಡಿ ಭೂಮಿ ನೋಂದಣಿಗೆ ಸಬ್ ರಿಜಿಸ್ಟ್ರಾರ್ಗೆ 35000 ರೂ., ಆರ್ಟಿಸಿ ದಾಖಲೆಗಳಲ್ಲಿ ಹೆಸರು ಬದಲಾವಣೆ ಮಾಡಲು ತಹಶೀಲ್ದಾರ್ಗೆ 25000 ರೂ. ಮತ್ತು ಸರ್ವೇ ಅಧಿಕಾರಿಗಳಿಗೆ ಸರ್ವೆ ಮತ್ತು ಗಡಿ ಗುರುತಿಸಲು 8000 ರೂ. (ಅಧಿಕೃತ ಶುಲ್ಕಗಳು ಸೇರಿದಂತೆ) ನೀಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ.
My Appa had to pay a bribe of 3L to the Tahsildar and ₹10 thousand to computer operator to register a 14 cent property.
You know what, he hasn’t approved yet. https://t.co/7A1L5hNVm6— Madhav-ɱα∂∂ყ ♌️ (@humourpoliticn) April 10, 2025
ದಿ ವಾರಿಯರ್553 ಎಂಬ ಖಾತೆದಾರರು ಎರಡನೇ ಮಹಡಿಯಲ್ಲಿರುವ ನನ್ನ ಮನೆಗೆ ಇ–ಖಾತಾ ಪಡೆಯಲು ಅಧಿಕಾರಿಗಳು ನನ್ನಿಂದ 15000 ಕೇಳುತ್ತಿದ್ದಾರೆ. ಅನುಮೋದನೆ ಪಡೆಯಲು – 8 ಸಾವಿರ ರೂ, ವಿದ್ಯುತ್ ಸಂಪರ್ಕಕ್ಕೆ – 5 ಸಾವಿರ ರೂ., ನೀರಿನ ಸಂಪರ್ಕಕ್ಕೆ – 5 ಸಾವಿರ ರೂ. ಕೇಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ತುಂಬಾ ಹೆಚ್ಚಾಗಿದೆ. ಇಲಾಖೆಯಲ್ಲಿರುವ ಹೆಚ್ಚಿನ ಜನರು ಮೀಸಲು ಜಾತಿಗೆ ಅಥವಾ ರಾಜಕೀಯ ಪ್ರಭಾವಕ್ಕೆ ಒಳಗಾದವರು ಎಂದು ಅಳಲು ತೋಡಿಕೊಂಡಿದ್ದಾರೆ.
To get E khata for 2nd floor house – they are asking me 15000.
Getting approval – 8k
Electricity connection – 5K
Water connection – 5KSo much corruption nowadays. No feat at all now.
Most of ppl in department belonged to reserved caste/ politically influenced.
— Thewarrior553 (@sri5538) April 10, 2025
ಒಟ್ಟಿನಲ್ಲಿ, ರಾಜ್ಯ ಸರ್ಕಾರಿ ಕಚೇರಿಗಳಲ್ಲಿನ ಅಧಿಕಾರಿಗಳು ಲಂಚಕೋರರು ಆಗಿದ್ದಾರೆ. ಸಾವಿರಾರು ರೂಪಾಯಿ ಲಂಚ ಪಡೆದು, ಜನರ ಜೀವ ಹಿಂಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಲ್ಕ ವಿವರ ಪ್ರಕಟಿಸದೆ ಗುಟ್ಟಾಗಿ ಶುಲ್ಕ ಹೆಚ್ಚಿಸುತ್ತಿರುವ ಖಾಸಗಿ ಶಾಲೆಗಳು: ಶಿಕ್ಷಣ ಇಲಾಖೆ ಆದೇಶಕ್ಕೂ ಡೋಂಟ್ ಕೇರ್


