BBMP
Loading ...

ಸಿಂಡಿಕೇಟ್​ ಬ್ಯಾಂಕ್​ ಕಾಲೋನಿ ಶಿರಡಿ ಸಾಯಿ ಚಾರಿಟಬಲ್​ ಟ್ರಸ್ಟ್​ ವತಿಯಿಂದ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರ

ಬೆಂಗಳೂರು: ಸಿಂಡಿಕೇಟ್​ ಬ್ಯಾಂಕ್​ ಕಾಲೋನಿ ಶ್ರೀ ಶಿರಡಿ ಸಾಯಿ ಚಾರಿಟಬಲ್​ ಟ್ರಸ್ಟ್​ ವತಿಯಿಂದ ಪ್ರತಿ ತಿಂಗಳು ಕೊನೆಯ ಗುರುವಾರದಂದು ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ನಡೆಸಲಾಗುತ್ತದೆ.

ಲಯನ್ಸ್​ ಕ್ಲಬ್​ ಆಫ್​ ಸೋಮೇಶ್ವರಪುರ, ಗೊರಗುಂಟೆಪಾಳ್ಯದ ಪೀಪಲ್​ ಟ್ರೀ ಹಾಸ್ಪಿಟಲ್​, ಡಾ. ಜಿ.ಕೆ. ಕುಲಕರ್ಣಿ ಮೊಮೊರಿಯಲ್​ ಐ ಕ್ಲಿನಿಕ್​ ಹಾಗೂ ಶ್ರದ್ಧಾ ಐ ಕೇರ್​ ಟ್ರಸ್ಟ್​ ಸಂಯುಕ್ತಾಶ್ರಯದಲ್ಲಿ ಸಿಂಡಿಕೇಟ್​ ಬ್ಯಾಂಕ್​ ಕಾಲೋನಿ ಶ್ರೀ ಶಿರಡಿ ಸಾಯಿ ಚಾರಿಟಬಲ್​ ಟ್ರಸ್ಟ್​ ವತಿಯಿಂದ ಈ ಶಿಬಿರವನ್ನು ನಡೆಸಲಾಗುತ್ತದೆ.

ಪ್ರತಿ ತಿಂಗಳ ಕೊನೆಯ ಗುರುವಾರ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಮಾಗಡಿ ಮುಖ್ಯರಸ್ತೆಯ ಸಿಂಡಿಕೇಟ್​ ಬ್ಯಾಂಕ್​ ಕಾಲೋನಿಯ ಸಾಯಿಮಂದಿರದಲ್ಲಿ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ನಡೆಸಲಾಗುತ್ತದೆ.

ಅಗತ್ಯವುಳ್ಳವರಿಗೆ ರಿಯಾಯಿತಿ ದರದಲ್ಲಿ ಕನ್ನಡಕ ಸಹ ನೀಡಲಾಗುತ್ತದೆ. ಕಣ್ಣಿನ ತಪಾಸಣೆ ಮಾತ್ರವಲ್ಲದೆ, ಮಧುಮೇಹ ತಪಾಸಣೆ ಕೂಡ ಇರಲಿದೆ. ಹೆಚ್ಚಿನ ಮಾಹಿತಿಗೆ ಫೋನ್​ ನಂಬರ್​ 8553052568 ಅನ್ನು ಸಂಪರ್ಕಿಸಿ.

ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಕತ್ತರಿ?: ರಾಜ್ಯ ಉಸ್ತುವಾರಿ ಬಳಿ ಅಸಮಾಧಾನ!

Leave a Reply

Your email address will not be published. Required fields are marked *