ಹುಬ್ಬಳ್ಳಿ: ನಗರದಲ್ಲಿ ಐದು ವರ್ಷದ ಬಾಲಕಿಯನ್ನು ಹತ್ಯೆಗೈದಿದ್ದಂತ ಬಿಹಾರ ಮೂಲದ ಆರೋಪಿಯ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಲಾಗಿತ್ತು. ಪೊಲೀಸರು ನಡೆಸಿದಂತ ಎನ್ ಕೌಂಟರ್ ನಲ್ಲಿ ಬಿಹಾರ ಮೂಲದ ರಿತೇಶ್ ಬಲಿಯಾಗಿದ್ದಾನೆ. ಇದೀಗ `PSI’ ಅನ್ನಪೂರ್ಣ ಆರ್. ಮುಕ್ಕಣ್ಣವರ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು, 2018 ರ ಬ್ಯಾಚ್ ನ ಪಿಎಸ್ ಐ ಅನ್ನಪೂರ್ಣ ಆರ್. ಮುಕ್ಕಣ್ಣವರು ಬಯಸಿಂದ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಬೆಳಗಾವಿ ಜಿಲ್ಲೆಯ ಗೋಕಾಕ್ ನ ಗುಜನಟ್ಟಿ ಗ್ರಾಮದವರಾಗಿದ್ದಾರೆ. ರೈತ ಕುಟುಂಬದವರಾದ ಇವರು ಎಂಎಸ್ಸಿ ಪದವಿ ಪಡೆದಿದ್ದಾರೆ.
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ತಾಯಿ ನೆರಳಿನಲ್ಲಿ ಬೆಳೆದು ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಇದೀಗ ಎನ್ ಕೌಂಟರ್ ನಲ್ಲಿ 5 ವರ್ಷದ ಬಾಲಕಿಯ ಹಂತಕನ ಹತ್ಯೆ ಮಾಡಿದ್ದು, ಸಾರ್ವಜನಿಕರಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹುಬ್ಬಳ್ಳಿಯಲ್ಲಿ ಬಿಹಾರದ ಯುವಕನಿಂದ ಐದು ವರ್ಷದ ಬಾಲಕಿಯನ್ನು ಹತ್ಯೆ ಮಾಡಿದಂತ ಆರೋಪಿಯನ್ನು ಬಂಧಿಸೋದಕ್ಕೆ ಪೊಲೀಸರು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಂತ ಸಂದರ್ಭದಲ್ಲಿ ಕಾಲಿಗೆ ಗುಂಡೇಟು ನೀಡಿ ಬಂಧಿಸಿದ್ದರು ಎನ್ನಲಾಗಿತ್ತು. ಆದರೇ ಆ ಬಳಿಕ ಪೊಲೀಸರು ನಡೆಸಿದಂತ ಎನ್ ಕೌಂಟರ್ ನಲ್ಲಿ ಬಿಹಾರ ಮೂಲದ ರಿತೇಶ್ ಬಲಿಯಾಗಿದ್ದಾನೆ ಎಂಬುದಾಗಿ ಕಮೀಷನರ್ ಶಶಿಕುಮಾರ್ ಸ್ಪಷ್ಟ ಪಡಿಸಿದ್ದಾರೆ. ಇನ್ನೂ ಈ ದಾಳಿಯಲ್ಲಿ ಓರ್ವ ಪಿಎಸ್ಐ, ಇಬ್ಬರು ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಗಾಯಾಳು ಪೊಲೀಸರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅದ್ಭುತ ಹಾಸ್ಯದಿಂದ ಜನರನ್ನು ರಂಜಿಸುತ್ತಿದ್ದ ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ನಿಧನ


