BBMP
Loading ...

RR Team

Greater Bengaluru News9 : ಭಾನುವಾರ (ಡಿ.14) ನಡೆದ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ. ರಮೇಶ್​​ ನೇತೃತ್ವದ ಆರ್​ಆರ್​ ತಂಡ ಭರ್ಜರಿ ಜಯ ದಾಖಲಿಸಿದೆ. ಚುನಾವಣೆಯಲ್ಲಿ ಆರ್​ಆರ್​ ತಂಡದ ಆರ್ಭಟಕ್ಕೆ ಎದುರಾಳಿ ಎಸ್​ಎಂಕೆ ತಂಡ ನೆಲಕಚ್ಚಿದೆ. ಈ ಬಾರಿ ಸಂಘದ ಅಧಿಕಾರ ಹಿಡಿಯುವ ಕನಸು ಕಂಡಿದ್ದ ಎಸ್​ಎಂಕೆ ತಂಡಕ್ಕೆ ಭಾರಿ ಮುಖಭಂಗವಾಗಿದೆ.

ಅಂದಹಾಗೆ ಬೆಂಗಳೂರಿನ ಚಂದ್ರಾ ಲೇಔಟ್​, 2ನೇ ಫೇಸ್​, 1ನೇ ಹಂತದಲ್ಲಿರುವ ಸಿದ್ದಗಂಗಾ ಪಬ್ಲಿಕ್​ ಶಾಲೆಯಲ್ಲಿ ಇಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್​ ಗುತ್ತಿಗೆದಾರರ ಸಂಘದ ಪಂಚ ವಾರ್ಷಿಕ ಕೇಂದ್ರ ಸಮಿತಿಗೆ ಮತದಾನ ನಡೆಯಿತು. ಬಳಿಕ ನಡೆದ ಮತಎಣಿಕೆಯಲ್ಲಿ ಆರ್​ಆರ್​ ತಂಡ ಮೇಲುಗೈ ಸಾಧಿಸಿದ್ದು, ಮತ್ತೊಮ್ಮೆ ಸಂಘದ ಅಧಿಕಾರದ ಗದ್ದುಗೆಯನ್ನು ಏರಿದೆ. ಭಾರಿ ಕನಸು ಕಂಡಿದ್ದ ಎಸ್​ಎಂಕೆ ತಂಡ ಹೀನಾಯ ಸೋಲಿನೊಂದಿಗೆ ಆರ್​ಆರ್​ ತಂಡದ ಮುಂದೆ ಮಂಡಿಯೂರಿದೆ.

ಹಾಲಿ ಅಧ್ಯಕ್ಷ ಸಿ ರಮೇಶ್​ ನೇತೃತ್ವದ ಆರ್​ಆರ್​ ತಂಡ, ಕಳೆದ ಅಧಿಕಾರದ ಅವಧಿಯಲ್ಲಿ ಮಾಡಿರುವ ಅನೇಕ ಉತ್ತಮ ಕಾರ್ಯಗಳಿಂದಾಗಿ ಇದೀಗ ಮತ್ತೊಮ್ಮೆ ಅಧಿಕಾರ ಹಿಡಿದಿದೆ. ಇದೇ ಖುಷಿಯಲ್ಲಿ ಹಾಲಿ ಅಧ್ಯಕ್ಷ ಹಾಗೂ ಆರ್​ಆರ್​ ತಂಡದ ನಾಯಕ ಸಿ. ರಮೇಶ್​ ಅವರು ತಮ್ಮ ತಂಡಕ್ಕೆ ಮತ ಹಾಕಿದ ರಾಜ್ಯದ ಎಲ್ಲ ಗುತ್ತಿಗೆದಾರ ಬಂಧುಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಕಳೆದ ಅಧಿಕಾರದ ಅವಧಿಯಲ್ಲಿ ಅಧ್ಯಕ್ಷ ರಮೇಶ್​ ಅವರ ನೇತೃತ್ವದಲ್ಲಿ ಆರ್​ಆರ್​ ತಂಡ ಅನೇಕ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ ಸಾಕಷ್ಟು ಸುಧಾರಣೆಗಳನ್ನು ತಂದಿತು. ಅವರ ಅವಧಿಯಲ್ಲಿ ಸಾಕಷ್ಟು ಹೋರಾಟಗಳು ಸಹ ನಡೆದು, ಸರ್ಕಾರದ ಗಮನಕ್ಕೆ ತಂದೆ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಕಟ್ಟಡಗಳಿಗೆ ಒಸಿ ಹಾಗೂ ಸಿಸಿ ವಿನಾಯಿತಿ ಕೂಡ ರಮೇಶ್​ ನೇತೃತ್ವದ ಹೋರಾಟದ ಫಲವಾಗಿದೆ.

Leave a Reply

Your email address will not be published. Required fields are marked *