BBMP
Loading ...

ಬೈಂದೂರು : ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಶಾಕ್ ತಗುಲಿ ಲೈನ್‌ಮ್ಯಾನ್ ಇಹಲೋಕ ತ್ಯಜಿಸಿರುವ ಘಟನೆ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ನಡೆದಿದೆ.

ಸಲೀಂ (38) ಮೃತಪಟ್ಟ ಲೈನ್‌ಮನ್. ಸೋಮವಾರ ಮಧ್ಯಾಹ್ನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ.

ಅವರು ಮೂಲತಃ ಉತ್ತರ ಕನ್ನಡದ ಮುಂಡಗೋಡು ನಿವಾಸಿಯಾಗಿದ್ದು, ಬೈಂದೂರು ಮೆಸ್ಕಾಂನಲ್ಲಿ ಎಂಟು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ವಿವಾಹಿತರಾಗಿರುವ ಅವರಿಗೆ ಎರಡು ತಿಂಗಳ ಮಗು ಇದೆ. ವಿದ್ಯುತ್ ಶಾಕ್ ತಗಲಿ ಕಳೆದ ವರ್ಷ ಶಿರೂರಿನ ಉದ್ಯಮಿಯೊಬ್ಬರು ಮೃತಪಟ್ಟರೆ ಮೇ ತಿಂಗಳಿನಲ್ಲಿ ಶಿರೂರಿನ ಮೀನುಗಾರ ವ್ಯಕ್ತಿ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್‌ ರೇವಣ್ಣಗೆ ಪುರುಷತ್ವ ಪರೀಕ್ಷೆ, ಇನ್ನೊಂದು ವಾರದಲ್ಲಿ ಪರೀಕ್ಷಾ ವರದಿ ಸಲ್ಲಿಕೆ

Leave a Reply

Your email address will not be published. Required fields are marked *