Greater Bengaluru News9 : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಡಿಸೆಂಬರ್ 14ರಂದು ನಡೆಯಲಿದೆ ಎಂದು ರಾಜ್ಯಾಧ್ಯಕ್ಷ ಸಿ. ರಮೇಶ್ ಅವರು ತಿಳಿಸಿದ್ದಾರೆ.
ಇಂದು ನಡೆದ ಸಭೆಯ ಬಳಿಕ ಮಾತನಾಡಿದ ರಮೇಶ್ ಅವರು ಚುನಾವಣೆ ನಡೆಸಲು ದಿನಾಂಕ 14.12.2025 ರಂದು ‘ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಜಿ ವಿದ್ಯಾಪೀಠ ಟ್ರಸ್ಟ್ ನಂ.1, 1ನೇ ಸ್ಟೇಜ್, 2ನೇ ಹಂತ, ಚಂದ್ರಲೇಔಟ್ನಲ್ಲಿ ಸ್ಥಳ ನಿಗಧಿಯಾಗಿದೆ ಎಂದರು.
ಸಂಘದಲ್ಲಿ ಸುಮಾರು ಎರಡೂವರೆ ಸಾವಿರ ವಿದ್ಯುತ್ ಗುತ್ತಿಗೆದಾರರು ಸದಸ್ಯತ್ವವನ್ನು ರಿನೇವಲ್ ಮಾಡಿಸಬೇಕಿದೆ. ಹೀಗಾಗಿ ಚುನಾವಣೆಯ ಹಕ್ಕನ್ನು ಪಡೆಯಲು ಬಯಸುವುದಾದರೆ ನವೆಂಬರ್ 16ರ ಒಳಗೆ ಸದಸ್ಯತ್ವ ರಿನೇವಲ್ ಮಾಡಿಸಬೇಕಿದೆ. ಯಾರು ಯಾರು ರಿನೇವಲ್ ಮಾಡಿಸುತ್ತಾರೋ ಅವರಿಗೆ ಚುನಾವಣೆಯಲ್ಲಿ ಭಾಗವಹಿಸುವ ಹಕ್ಕು ಇರುತ್ತದೆ ಎಂದು ರಮೇಶ್ ಅವರು ಹೇಳಿದರು.
ಅಂತಿಮ ಮತಾದರರ ಪಟ್ಟಿ ಬೇಕಾದರೆ ನವೆಂಬರ್ 19ರಂದು ಸಂಘದ ಕಚೇರಿಯಲ್ಲಿ ಹಣ ಪಾವತಿ ಮಾಡಿ ಪಡೆಯಬಹುದು ಎಂದು ರಮೇಶ್ ಅವರು ಇದೇ ಸಂದರ್ಭದಲ್ಲಿ ಹೇಳಿದರು.


