BBMP
Loading ...

Police

Greater Bengaluru News9 : ಕರ್ನಾಟಕ ಪೊಲೀಸ್​ ಕಾನ್ಸ್‌ಟೇಬಲ್‌ಗಳು ಹಾಲಿ ಧರಿಸುತ್ತಿದ್ದ ಸ್ಲೌಚ್ ಹ್ಯಾಟ್​ಗೆ (Slouch Hats) ರಾಜ್ಯ ಸರ್ಕಾರ ಗುಡ್​ ಬೈ ಹೇಳಿದ್ದು, ಇಂದಿನಿಂದ ನೇವಿ ಬ್ಲೂ ಪೀಕ್ ಕ್ಯಾಪ್‌ಗಲ್ಲಿ ಪೇದೆಗಳು ಕಾಣಿಸಿಕೊಳ್ಳಲಿದ್ದಾರೆ. ಈ ಹೊಸ ಮಾದರಿಯ ಕ್ಯಾಪ್​ಗಳು ತೆಲಂಗಾಣ ಪೊಲೀಸ್​ ಯೂನಿಫಾರಂನಿಂದ ಪ್ರೇರಿತವಾಗಿದ್ದು, ನಾಲ್ಕು ದಶಕಗಳಿಂದ ಕರ್ನಾಟಕದಲ್ಲಿ ಪೊಲೀಸ್​ ಕಾನ್ಸ್‌ಟೇಬಲ್‌ಗಳು ಧರಿಸುತ್ತಿದ್ದ ಸ್ಲೌಚ್ ಹ್ಯಾಟ್​ ಇತಿಹಾಸದ ಪುಟ ಸೇರಿದೆ.

ದೀರ್ಘಾವಧಿಯಲ್ಲಿ ಸ್ಲೌಚ್ ಹ್ಯಾಟ್​ಗಳ ಬಳಕೆ ಉಸಿರಾಟದ ತೊಂದರೆಗೆ ಕಾರಣವಾಗಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆಯ ವರದಿಗಳು ಹೇಳಿದ್ದವು. ಅಲ್ಲದೆ ಇವುಗಳನ್ನು ಧರಿಸುವುದರಿಂದ ತಲೆ ಭಾಗದಲ್ಲಿ ಗಾಳಿಯ ಸಂಚಾರದ ಕೊರತೆಯೂ ಉಂಟಾಗಿ ಕಾನ್ಸ್‌ಟೇಬಲ್‌ಗಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಕೊಳ್ಳುತ್ತಿದ್ದವು. ಪ್ರತಿಭಟನೆಗಳು, ಮೆರವಣಿಗೆಗಳು, ಸಾರ್ವಜನಿಕ ಬಂದೋಬಸ್ತ್​ನಂತಹ ಕೆಲಸಗಳಲ್ಲಿ ತೊಡಗಿಸಿಕೊಂಡಾಗ ಈ ಮಾದರಿಯ ಹ್ಯಾಟ್​ಗಳು ಅನುಕೂಲಕರವಾಗಿಲ್ಲ. ಅದರ ಗಾತ್ರ ಮತ್ತು ಆಕಾರದಿಂದ ಅದು ಬಿದ್ದುಹೋಗುವ ಅಥವಾ ಜಾರುವ ಸಾಧ್ಯತೆ ಹೆಚ್ಚಿದೆ ಎಂದು ಬಹಳ ಸಮಯದಿಂದ ಕಾನ್ಸ್‌ಟೇಬಲ್‌ಗಳು ದೂರುತ್ತಿದ್ದರು. ಹೀಗಾಗಿ ಹಳೆ ಮಾದರಿಯ ಸ್ಲೌಚ್ ಹ್ಯಾಟ್​ಗಳನ್ನ ರಾಜ್ಯ ಸರ್ಕಾರ ಬದಲಾಯಿಸಿದೆ.

ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಸೇರಿದಂತೆ ಉನ್ನತ ಅಧಿಕಾರಿಗಳು ವಿವಿಧ ರಾಜ್ಯಗಳ ಪೋಲಿಸ್ ಕ್ಯಾಪ್ ಮಾದರಿಗಳನ್ನು ಪರಿಶೀಲಿಸಿದ್ದು, ಅಂತಿಮವಾಗಿ ತೆಲಂಗಾಣ ಮಾದರಿಯ ಕ್ಯಾಪ್​ಗಳನ್ನು ಕರ್ನಾಟಕದ ಕಾನ್ಸ್‌ಟೇಬಲ್‌ಗಳಿಗೆ ಒದಗಿಸಲು ತೀರ್ಮಾನಿಸಿದ್ದರು. ತೆಲಂಗಾಣ ಮಾದರಿಯ ನೇವಿ ಬ್ಲೂ ಕ್ಯಾಪ್‌ಗಳು ಸೂಕ್ತ ವಿನ್ಯಾಸ, ಉತ್ತಮ ಫಿಟ್ ಮತ್ತು ವೃತ್ತಿಪರ ಆಕರ್ಷಣೆ ಹೊಂದಿರುವ ಕಾರಣ ಇದೇ ಮಾದರಿ ಬಗ್ಗೆ ಕರ್ನಾಟಕ ಸರ್ಕಾರ ಒಲವು ತೋರಿತ್ತು.

ಕರ್ನಾಟಕದ ಕಾನ್ಸ್‌ಟೇಬಲ್‌ಗಳು ಹಾಲಿ ಧರಿಸುತ್ತಿದ್ದ ಸ್ಲೌಚ್ ಕ್ಯಾಪ್‌ಗೆ ಸುಮಾರು ನಾಲ್ಕು ದಶಕಗಳ ಇತಿಹಾಸವಿದ್ದು, 1980–83ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಕಾಲದಲ್ಲಿ ಇವು ಪರಿಚಯಿಸಲ್ಪಟ್ಟವು. ಅಂದಿನ ನೀಲಿ ಮತ್ತು ಕೆಂಪು ಪಟ್ಟಿಯ ಪೇಟದ ಬದಲಿಗೆ ಈ ಕ್ಯಾಪ್‌ಗಳು ದಿನನಿತ್ಯದ ಕರ್ತವ್ಯಕ್ಕಾಗಿ ಅಳವಡಿಸಲ್ಪಟ್ಟಿದ್ದವು. ಸ್ವಾತಂತ್ರ್ಯಾನಂತರವೂ ಕೆಂಪು-ನೀಲಿ ಪಾಗಡಿಗಳು ಸಮಾರಂಭ ಮತ್ತು ಮೆರವಣಿಗೆಗಳ ವೇಳೆ ಉಳಿದರೂ 1980ರ ದಶಕದಿಂದ ಸ್ಲೌಚ್ ಕ್ಯಾಪ್‌ಗಳು ದಿನನಿತ್ಯದ ಉಡುಪುಗಳಾಗಿ ಪ್ರಚಲಿತಕ್ಕೆ ಬಂದಿದ್ದವು.

Leave a Reply

Your email address will not be published. Required fields are marked *