BBMP
Loading ...

Darshan

ಚಾಲೆಂಜಿಂಗ್ ಸ್ಟಾರ್​ ದರ್ಶನ್ ​ ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ಸ್ಟಾರ್ ನಟ ದರ್ಶನ್ ಸೇರಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಾರೆ ಎನ್ನುವ ಕಾರಣಕ್ಕಾಗಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ದರ್ಶನ್ ಹೆಸರನ್ನು ಬಾಯ್ಬಿಟ್ರು ಆರೋಪಿಗಳು!
ದರ್ಶನ್ ಜೊತೆ ಇರೋ ಫೋಟೋಗಳನ್ನು ಪವಿತ್ರಾ ಗೌಡ ಹಂಚಿಕೊಂಡಿದ್ದರು. ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬುವವರು ಅಶ್ಲೀಲ ಮೇಸೆಜ್ ಮಾಡಿದ್ದರು. ಪವಿತ್ರಾ ಪೋಸ್ಟ್​ಗಳಿಗೆಲ್ಲಾ ಕೆಟ್ಟದಾಗಿ ಮೆಸೇಜ್ ಮಾಡ್ತಿದ್ದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕಿಡ್ನ್ಯಾಪ್ ಮಾಡಿಕೊಂಡಿ ಬಂದಿದ್ದಾರೆ. ದರ್ಶನ್ ಸೂಚನೆ ಮೇಲೆ ಕೊಲೆ ಮಾಡಿದ್ದಾಗಿ ನಾಲ್ವರು ಆರೋಪಿಗಳು ಹೇಳಿದ್ದಾರೆ ಎಂದು ವರದಿ ಆಗಿದೆ. ರೇಣುಕಾ ಸ್ವಾಮಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡುವ ವೇಳೆ ನಟ ದರ್ಶನ್ ಕೂಡ ಸ್ಥಳದಲ್ಲೇ ಇದ್ದರು ಎಂದು ಹೇಳಲಾಗ್ತಿದೆ.

ಕೇಸ್​ಗೆ ಸಂಬಂಧಿಸಿದಂತೆ 10 ಜನರ ಬಂಧನ: ಈ ಪ್ರಕರಣದಲ್ಲಿ ದರ್ಶನ್ ಸೇರಿ 10 ಜನರನ್ನು ಬಂಧಿಸಲಾಗಿದೆ. ಜೂನ್ 9ರಂದು ರೇಣುಕಾ ಸ್ವಾಮಿಯ ಕೊಲೆ ಮಾಡಲಾಗಿದೆ. ಚಿತ್ರದುರ್ಗದಿಂದ ಆತನನ್ನು ಬೆಂಗಳೂರಿಕೆ ಕರೆ ತಂದು ಶೆಡ್​ನಲ್ಲಿ ಅವರನ್ನು ಇರಿಸಲಾಗಿತ್ತು. ಈ ವೇಳೆ ರೇಣುಕಾ ಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದೆ. 4 ಜನ ಹಲ್ಲೆ ಮಾಡಿದ ತಂಡದಲ್ಲಿ ದರ್ಶನ್ ಕೂಡ​ ಇದ್ದರು ಎಂದು ವರದಿ ಆಗಿದೆ. ಹತ್ಯೆ ಮಾಡಿ ಮೃತದೇವನ್ನು ಮೋರಿಯಲ್ಲಿ ಎಸೆದು ಹೋಗಿದ್ದರಂತೆ. ನಾಯಿಗಳು ಮೃತದೇಹವನ್ನು ಎಳೆದಾಡ್ತಿದ್ದ ವೇಳೆ ಶವ ಪತ್ತೆಯಾಗಿದೆ ಎಂದು ವರದಿ ಆಗಿದೆ.

ಪವಿತ್ರಾ ಗೌಡ ಬಂಧನ: ರೇಣುಸ್ವಾಮಿ ಎಂಬ ವ್ಯಕ್ತಿಯ ಕೊಲೆ ಪ್ರಕರಣದಲ್ಲಿ ಪೊಲೀಸರು ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಇದೀಗ ದರ್ಶನ್ ಗೆಳತಿ ಪವಿತ್ರಾಗೌಡರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರ್.ಆರ್.ನಗರ ಠಾಣೆಯ ಪೊಲೀಸರು ಪವಿತ್ರಾಗೌಡಳನ್ನು ವಶಕ್ಕೆ ಪಡೆದಿದ್ದಾರೆ. ಇನ್ಸ್ ಪೆಕ್ಟರ್ ಮಾರ್ಕಂಡಯ್ಯ ಅವರು ಕಾಮಾಕ್ಷಿ ಪಾಳ್ಯ ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿದ್ದಾರೆ. ಪವಿತ್ರಾ ಜೊತೆ ಅವರ ಅಕ್ಕ ಕೂಡ ಠಾಣೆಗೆ ಆಗಮಿಸಿದ್ದಾರೆ.

ಪೊಲೀಸರಿಂದ ದರ್ಶನ್ ವಿಚಾರಣೆ​: ಈಗಾಗಲೇ ಒಂದು ಸುತ್ತು ಡಿಸಿಪಿ ಗಿರೀಶ್ ವಿಚಾರಣೆ ಮಾಡಿದ್ದಾರೆ. ಡಿಸಿಪಿ ವಿಚಾರಣೆ ಬಳಿಕ‌ ನಟ ದರ್ಶನ್ ಆತಂಕದಲ್ಲಿ ಕುಳಿತಿದ್ದಾರೆ. ನನಗೂ ಕೊಲೆಗೂ ಸಂಬಂಧ ಇಲ್ಲ‌ ಎಂದು ನಟ ದರ್ಶನ್ ಹೇಳಿದ್ದಾರೆ. ಆರೋಪಿಗಳ ಜೊತೆ ದರ್ಶನ್ ಸಂಪರ್ಕದ ಸಿಡಿಆರ್ ದಾಖಲೆ ಮುಂದಿಟ್ಟು ಡಿಸಿಪಿ ತನಿಖೆ ಮಾಡಿದ್ದಾರೆ. ಜೊತೆಗೆ ಈಗಾಗಲೇ ಬಂಧಿತ ಆರೋಪಿಗಳ ಹೇಳಿಕೆ ಕೂಡ ದರ್ಶನ್ ಮುಂದಿಟ್ಟಿದ್ದಾರೆ. ಸಿಡಿಆರ್ ಹಾಗೂ ಹೇಳಿಕೆ ದಾಖಲೆ ನೋಡಿ ಆತಂಕಕೊಳ್ಳಗಾದ ದರ್ಶನ್, ಸದ್ಯ ಏನೂ‌ ಮಾತನಾಡದೆ ಸೈಲೆಂಟ್ ಆಗಿ ಒಬ್ಬರೇ ಕುಳಿತ್ತಿದ್ದಾರೆ ಎಂದು ವರದಿ ಆಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್ ನೀಡಿದ ಮೊದಲ ಪ್ರತಿಕ್ರಿಯೆ ಹೀಗಿದೆ….

Leave a Reply

Your email address will not be published. Required fields are marked *