BBMP
Loading ...

ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರು ಮನೆ ಊಟಕ್ಕಾಗಿ ಇತ್ತೀಚಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಇದೀಗ ದರ್ಶನ್ ಪರ ವಕೀಲ ಅರುಣ್ ಅವರು ಮನೆ ಊಟಕ್ಕೆ ಸಲ್ಲಿಸಿದ ರಿಟ್ ಅರ್ಜಿಯನ್ನು ಹಿಂಪಡೆದಿದ್ದಾರೆ

ಹೌದು ನಟ ದರ್ಶನ್ ಅವರಿಗೆ ಜೈಲಿನ ಊಟ ಒಗ್ಗದ ಕಾರಣದಿಂದ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಮನೆ ಊಟಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇದೀಗ ತಾಂತ್ರಿಕ ಕಾರಣದಿಂದ ಅರ್ಜಿ ಹಿಂಪಡೆದ ದರ್ಶನ್ ಪರ ವಕೀಲ ಅರುಣ್. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಜೈಲು ಪಾಲಾಗಿದ್ದಾರೆ.

ಇದೀಗ ದರ್ಶನ್ ಪರ ವಕೀಲ ಅರುಣ ಅವರು ತಾಂತ್ರಿಕ ದೋಷ ಎಂಬ ಕಾರಣದಿಂದ ದರ್ಶನ್ ಪರವಾಗಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಾಪಾಸ್ ಪಡೆದಿದ್ದಾರೆ. ಹಾಗಾಗಿ ನಟ ದರ್ಶನ್ ಗೆ ಮತ್ತೆ ಜೈಲುಟವೇ ಗತಿಯಂತಾಗಿದೆ.

ಬೈಕ್‌ಗೆ ಡಿಕ್ಕಿ ಹೊಡೆದು 10 ಮೀ ಮೃತದೇಹ ಎಳೆದೊಯ್ದ ಬಿಬಿಎಂಪಿ ಕಸದ ಲಾರಿ; ಇಬ್ಬರು ಸಾವು, ಮುಗಿಲು ಮುಟ್ಟಿದ ಆಕ್ರಂದನ

Leave a Reply

Your email address will not be published. Required fields are marked *