BBMP
Loading ...

Congratulation

ಬೆಂಗಳೂರು: ನೂತನ ಅಧಿಕಾರ ಪಡೆದ ಕಾಂಗ್ರೆಸ್ ನಾಯಕರಾದ ಪುಟ್ಟಸ್ವಾಮಿಗೌಡ, ಡಾ. ಕೆ.ಟಿ.ರಾಜು ಹಾಗೂ ಮಹಾದೇವ ನಾಯ್ಕ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಪುಟ್ಟಸ್ವಾಮಿಗೌಡ ಅವರು ಬಿಡಿಎ ಸದಸ್ಯರಾಗಿ ನೇಮಕವಾಗಿದ್ದರೆ, ಡಾ ಕೆ.ಟಿ.ರಾಜು ಅವರು ಬೆಂಗಳೂರು ಉತ್ತರ ಭೂ ನ್ಯಾಯಮಂಡಳಿ ಸದಸ್ಯರಾಗಿ‌ ನೇಮಕವಾಗಿದ್ದಾರೆ. ಮಹಾದೇವ ನಾಯ್ಕ್​ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ‌ನೇಮಕವಾಗಿದ್ದಾರೆ.

ಈ ಮೂವರಿಗೂ ಬೆಂಗಳೂರಿನ ಕಿಂಗ್ಸ್ ಕ್ಲಬ್​ನಲ್ಲಿ ಅಯೋಜಿಸಿದ ಅಭಿನಂದನಾ‌ ಕಾರ್ಯಕ್ರಮದಲ್ಲಿ ಮೈಸೂರು ಪೇಟ ತೊಡಿಸಿ, ಸಾಲು ಹೊದೆಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಬಿಬಿಎಂಪಿಯ ಸಹ ಕಂದಾಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಹೊಂದಿರುವ ಎಸ್​.ಕೆ. ಮೋಹನ್​ ರಾಮ್​ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಅಕ್ರಮ ಕಟ್ಟಡ ಉಳಿಸಿಕೊಳ್ಳೋಕೆ ತಪ್ಪು ಮಾಹಿತಿ ಕೊಟ್ಟರೆ ಎಚ್ಚರ; ದಾಖಲೆ ತಿದ್ದಲು ಯತ್ನಿಸಿದ್ರೆ ನಿಮಗಿಲ್ಲ ಉಳಿಗಾಲ! ಬಿಬಿಎಂಪಿ ವಾರ್ನಿಂಗ್

Leave a Reply

Your email address will not be published. Required fields are marked *