ಮೈಸೂರು: ಉತ್ತಮ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನೀಡಲಾಗುವ ಮುಖ್ಯಮಂತ್ರಿ ಪದಕವನ್ನು ಈ ಬಾರಿ ಕರ್ತವ್ಯ ಲೋಪದಡಿ ಅಮಾನತುಗೊಂಡಿದ್ದ ಪೊಲೀಸ್ ಪೇದೆಯೊಬ್ಬರಿಗೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.
ನಗರದ ಸಿಸಿಬಿ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮುಖ್ಯ ಪೇದೆ ಸಲೀಂ ಪಾಷಾ ಕರ್ತವ್ಯ ಲೋಪದಡಿ ಒಂದು ತಿಂಗಳ ಹಿಂದೆ ಅಮಾನತುಗೊಂಡಿದ್ದರು. ಆದರೆ, ಇದೀಗ ಅವರಿಗೆ ಮುಖ್ಯಮಂತ್ರಿ ಪದಕ ನೀಡಿರುವುದು ಪೊಲೀಸ್ ಇಲಾಖೆ ಹಾಗೂ ಸರ್ಕಾರಕ್ಕೆ ಮುಜುಗರ ತರಿಸಿದೆ.
ಅಪರಾಧ ಪ್ರಕರಣಗಳಲ್ಲಿ ಆರೋಪಿಗಳೊಂದಿಗೆ ಸಂಪರ್ಕ, ಸಾರ್ವಜನಿಕರ ಆಸ್ತಿ ಕಳುವಿಗೆ ಪರೋಕ್ಷ ಸಹಾಯ, ದಾಖಲೆಗಳ ಸೋರಿಕೆ ಮಾಡಿರುವ ಶಂಕೆಯ ಮೇರೆಗೆ ಸಲೀಂ ಪಾಷಾ ಅವರನ್ನು ಅಮಾನತು ಮಾಡಲಾಗಿತ್ತು. ಇಷ್ಟೆಲ್ಲ ಆರೋಪಗಳಿರುವ ವ್ಯಕ್ತಿಯ ಹೆಸರನ್ನು ಮುಖ್ಯಮಂತ್ರಿಗಳ ಪದಕದ ಪಟ್ಟಿಗೆ ಹೇಗೆ ಪರಿಗಣಿಸಲಾಯಿತು ಎಂಬುದು ಯಕ್ಷ ಪ್ರಶ್ನೆಯಾಗಿದೆ.
ನಂಜಾವಧೂತ ಸ್ವಾಮೀಜಿ ಅವರಿಂದ ಕೇಂದ್ರ ಸಚಿವ ಎಚ್ಡಿಕೆ, ಡಿಸಿಎಂ ಡಿಕೆಶಿಗೆ ಬುದ್ಧಿಮಾತು


