BBMP
Loading ...

DK Shivakumar (1)

Greater Bengaluru News9 : ಕರ್ನಾಟಕ ನೂತನ ಸಿಎಂ ಡಿಕೆ ಶಿವಕುಮಾರ್‌ ಅವರು ಸರ್ಕಾರದ ಆಡಳಿತವನ್ನು ಲಂಚ ಮುಕ್ತವಾಗಿಸಲು ಪಣತೊಟ್ಟಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಯಾವಾದರೂ 10 ರೂಪಾಯಿ ಸಾಲ ಕೇಳಿದರೂ ಕಾಲ್ ಮಾಡಿ ದೂರುಕೊಡಿ ಎಂದು ಸಾರ್ವಜನಿಕರಿಗೆ ಸಂದೇಶ ನೀಡಿದ್ದಾರೆ.

ಜಿಲ್ಲಾಡಳಿತಗಳನ್ನು ಕ್ರಿಯಾಶೀಲಗೊಳಿಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ಸುಮಾರು ಇತ್ತೀಚೆಗೆ ಸುದೀರ್ಘ ಸಭೆ ನಡೆಸಿದರು. ಡಿಸಿ, ಎಸ್ಪಿ, ಜಿಪಂ ಸಿಇಒಗಳು ಹಾಗೂ ಅರಣ್ಯ ಇಲಾಖೆಯ ಡಿಸಿಎಫ್‌ಗಳು ಪಾಲ್ಗೊಂಡ ಸಭೆಯಲ್ಲಿಮುಖ್ಯಮಂತ್ರಿಗಳು, ಜಿಲ್ಲಾವಾರು ಮಳೆ -ಬೆಳೆ, ಕಾನೂನು -ಸುವ್ಯವಸ್ಥೆ, ಎಸ್‌ಐಆರ್‌ ಪ್ರಕ್ರಿಯೆ ಸೇರಿದಂತೆ ನಾನಾ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಮುಖ್ಯಮಂತ್ರಿಗಳು ಜಿಲ್ಲಾಡಳಿತಗಳೊಂದಿಗೆ ನಡೆಸಿದ ಈ ಮೊದಲ ಸಭೆಯಲ್ಲಿ ಬಹುತೇಕ ಎಲ್ಲ ಸಚಿವರು ಭಾಗವಹಿಸಿದ್ದರು. ಸಚಿವರಾದ ಎಂ.ಬಿ.ಪಾಟೀಲ್‌, ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್‌, ಸತೀಶ್‌ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್‌ ಖರ್ಗೆ, ಯು.ಟಿ.ಖಾದರ್‌, ಡಾ.ಶರಣ ಪ್ರಕಾಶ್‌ ಪಾಟೀಲ್‌, ಕೆ.ಎಚ್‌.ಮುನಿಯಪ್ಪ, ಬೈರತಿ ಸುರೇಶ್‌, ಯತೀಂದ್ರ ಸಿದ್ದರಾಮಯ್ಯ ಹಾಗೂ ಈಶ್ವರ್‌ ಖಂಡ್ರೆ ಅವರು ಸಭೆಯಲ್ಲಿ ಭಾಗವಹಿಸಿದ್ದರು.

”ಜಿಲ್ಲಾಡಳಿತ, ತಾಲೂಕು ಮತ್ತು ನಾಡ ಕಚೇರಿಗಳು ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳಲ್ಲಿಯೂ ಸಾರ್ವಜನಿಕರ ಕೆಲಸಕ್ಕೆ ಲಂಚ ಕೇಳಿದರೆ ಸಹಿಸುವುದಿಲ್ಲ. ಭ್ರಷ್ಟಾಚಾರ ಮುಕ್ತ ಆಡಳಿತ ನನ್ನ ಆದ್ಯತೆ. ಪ್ರತಿ ಸರಕಾರಿ ಕಚೇರಿಯಲ್ಲೂ ಲಂಚ ಕೇಳಿದರೆ ಜನರು ದೂರು ಕೊಡಲು ಫೋನ್‌ ನಂಬರ್‌ ಸಹಿತ ಫಲಕಗಳನ್ನು ಹಾಕಬೇಕು” ಎಂದು ಮುಖ್ಯಮಂತ್ರಿಗಳು ಸ್ಪಷ್ಟ ಸೂಚನೆ ನೀಡಿದರು.


ಸಭೆಯ ಆರಂಭದಲ್ಲೇ ತಮ್ಮ ಗೊತ್ತು-ಗುರಿಗಳ ಬಗ್ಗೆ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್‌, ”ನನ್ನ ವೈಯಕ್ತಿಕ ನಿರೀಕ್ಷೆಗಳಿಲ್ಲ. ನಾವೆಲ್ಲರೂ ಒಂದು ಟೀಂ ಆಗಿ ಕೆಲಸ ಮಾಡಬೇಕು. ಪಾರದರ್ಶಕ ಆಡಳಿತ ನೀಡುವುದು ನನ್ನ ಮತ್ತು ಸರಕಾರದ ಆದ್ಯತೆ. ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಪಾರದರ್ಶಕವಾಗಿ ಕೆಲಸ ಮಾಡಬೇಕು” ಎಂದು ನಿರ್ದೇಶನ ನೀಡಿದರು.


ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ ಅಭಾವ, ಪ್ರವಾಹ ಸ್ಥಿತಿ ಎಲ್ಲಿದೆ, ಪ್ರಕೃತಿ ವಿಕೋಪ ಎದುರಿಸಲು ಏನೆಲ್ಲಾ ಪೂರ್ವ ಸಿದ್ಧತೆ ಆಗಿದೆ ಎಂಬ ಕುರಿತು ಜಿಲ್ಲಾಧಿಕಾರಿಗಳಿಂದ ಮುಖ್ಯಮಂತ್ರಿಗಳು ವಿವರಣೆ ಪಡೆದುಕೊಂಡರು. ಸದ್ಯದಲ್ಲೇ ತಾವು ಜಿಲ್ಲಾ ಪ್ರವಾಸ ಕೈಗೊಂಡು, ಸಮಸ್ಯೆ ಆಲಿಸಲು ನಾನು ಖುದ್ದು ಎಲ್ಲಜಿಲ್ಲೆಗಳಿಗೆ ಬರುತ್ತೇನೆ ಎಂದು ತಿಳಿಸಿದರು.

ಲಂಚ ಕೇಳಿದಾಗ ದೂರು ಕೊಡುವ ಸಹಾಯವಾಣಿಗಳು

  • ಕರ್ನಾಟಕ ಲೋಕಾಯುಕ್ತ ರಾಜ್ಯ ಸಹಾಯವಾಣಿ: 18004255320 / 080 – 22011298 / 080 22375014
  • ರಾಜ್ಯದ ಎಲ್ಲಾ ಜಿಲ್ಲಾ ಲೋಕಾಯುಕ್ತ ಪೊಲೀಸರ ಸಹಾಯವಾಣಿಗಳು https://lokayukta.karnataka.gov.in/pdf/Telephone_directory.pdf ಈ ವೆಬ್‌ಸೈಟ್‌ನಲ್ಲಿ ಲಭ್ಯವಿವೆ. ಈ ನಂಬರ್‌ಗಳಿಗೆ ಕರೆ ಮಾಡಿ ದೂರು ನೀಡಬಹುದು.
  • ಆನ್‌ಲೈನ್‌ ಮೂಲಕ ದೂರಿಗೆ https://lokayukta.karnataka.gov.in/ ಬೇಟಿ ನೀಡಬಹುದು.
  • ಭ್ರಷ್ಟಾಚಾರ ವಿರೋಧಿ ಸಹಾಯವಾಣಿ – 1031

Leave a Reply

Your email address will not be published. Required fields are marked *