ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹತ್ಯೆಗೈಯುವುದಾಗಿ ಕಿಡಿಗೇಡಿಯೊಬ್ಬ ಇ-ಮೇಲ್ ಸಂದೇಶ ಕಳುಹಿಸಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಸಿಂಧಾರ್ ರಜಪೂತ್ ಹೆಸರಿನ ಇ-ಮೇಲ್ನಿಂದ ಈ ಬೆದರಿಕೆ ಸಂದೇಶ ಬಂದಿದ್ದು, ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ಮತ್ತು ಟ್ರ್ಯಾಲಿ ಬ್ಯಾಗ್ನಲ್ಲಿ ತುಂಬುತ್ತೇನೆ ಎಂದು ಇ-ಮೇಲ್ ಸಂದೇಶದಲ್ಲಿ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಇ-ಮೇಲ್ ಅನ್ನು ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವರು, ನಗರ ಪೊಲೀಸ್ ಆಯುಕ್ತರು ಸೇರಿ ಹಲವರ ಇ-ಮೇಲ್ ವಿಳಾಸಕ್ಕೆ ಕಳುಹಿಸಲಾಗಿದೆ ಎಂಬುದು ಗೊತ್ತಾಗಿದೆ.
1 ಕೋಟಿ ರೂ. ಸಾಲ ವಾಪಾಸ್ ಕೊಡಿಸಿ
ಬೆಂಗಳೂರಿನ ರಾಮಪುರದ ಪ್ರಭಾಕರ್ಗೆ 1 ಕೋಟಿ ರೂ. ಸಾಲ ಕೊಟ್ಟಿದ್ದೇನೆ. ಆದರೆ, ಆತ ಇದುವರೆಗೂ ಸಾಲ ವಾಪಸ್ ಕೊಟ್ಟಿಲ್ಲ. ಆದಷ್ಟು ಬೇಗ ಪ್ರಭಾಕರ್ಗೆ ಸಾಲ ವಾಪಸ್ ಕೊಡಲು ಹೇಳಿ. ಪ್ರಭಾಕರ್, ತನ್ನ ನಾದಿನಿ ಮನೆಯಲ್ಲಿ ಆ ಹಣವನ್ನು ಅಡಗಿಸಿಟ್ಟಿದ್ದಾನೆ. ಪ್ರಭಾಕರ್ ಬಳಿ ಮೂರು ಸೆಲ್ಯೂಲರ್ ಫೋನ್ಗಳಿವೆ. ಪ್ರಭಾಕರ್ಗೆ ಇಬ್ಬರು ಮಕ್ಕಳು ಇದ್ದಾರೆ. ಇತ್ತೀಚೆಗೆ ಒಬ್ಬ ಮಗನ ಮದುವೆ ಮಾಡಿದ್ದಾನೆ. 1 ಕೋಟಿ ರೂ. ಹಣ ವಾಪಸ್ ನೀಡಲು ಆತನ ಬಳಿ ಇನ್ಕಂ ಇಲ್ಲ. ಹೀಗಾಗಿ ಪ್ರಭಾಕರ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಇ-ಮೇಲ್ನಲ್ಲಿ ಕಿಡಿಗೇಡಿ ಹೇಳಿರುವುದಾಗಿ ತಿಳಿದು ಬಂದಿದೆ.
ಐಸ್ ಕ್ರೀಂ ತಿನ್ನಲು ಹೋಗಿ ಉಗ್ರರ ದಾಳಿಯಿಂದ ಕರ್ನಾಟಕದ 17 ಜನ ಬಚಾವ್ ಆಗಿದ್ದೇ ರೋಚಕ!


