ವಿಧಾನಸಭಾ ಚುನಾವಣೆ ಗೆದ್ದು ಕಾಂಗ್ರೆಸ್ ಗದ್ದುಗೆ ಏರಿದಾಗಿನಿಂದಲೂ ಸಿಎಂ ಸ್ಥಾನದ ಜಟಾಪಟಿ ಇದ್ದೇ ಇದೆ. ಇದೀಗ ಮತ್ತೆ ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಮುನ್ನಲೆಗೆ ಬಂದಿದೆ. ಪ್ರಸ್ತುತ ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಆದರೆ ಮತ್ತೆ ಸಿಎಂ ಬದಲಾಗ್ತಾರೆ ಎಂವ ಚರ್ಚೆ ಶುರುವಾಗಿದ್ದು, ಇದಕ್ಕೆ ಪುಷ್ಠಿ ಎಂಬಂತೆ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್, ಜಾತಿ ಗಣತಿ, ಕಾಲ್ತುಳಿತ ಪ್ರಕರಣ ಸಂಬಂಧ ಮಾತನಾಡಿದ್ದಾರೆ. ಇದರ ಜೊತೆಗೆ ಸಿಎಂ ಬದಲಾವಣೆ ವಿಚಾರವಾಗಿಯೂ ಮಾತನಾಡಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿದ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಜಾತಿಗಣತಿ ಬಗ್ಗೆ ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಹತ್ತು ವರ್ಷದ ಹಿಂದೇಯೇ ಜಾತಿವಾರು ಜನಗಣತಿ ಮಾಡಿಸಿದ್ದರು. ಒಂದುವರೆ ಲಕ್ಷ ಶಿಕ್ಷಕರು 2 ವರ್ಷ ಗಣತಿ ಮಾಡಿದ್ದರು. ಅದಕ್ಕೆ 170 ಕೋಟಿಗೂ ಅಧಿಕ ಹಣ ಖರ್ಚಾಗಿತ್ತು. ಆಗಿನಿಂದಲೂ ವರದಿ ಬಹಿರಂಗ ಮಾಡದೇ ಹಾಗೆಯೇ ಇಟ್ಟುಕೊಂಡಿದ್ದರು. ಇದೀಗ ಹೈಕಮಾಂಡ್ ಗೆ ಹೆದರಿಕೊಂಡು ಮತ್ತೆ ಜಾತಿಗಣತಿ ಮಾಡಿರುವುದಾಗಿ ಹೇಳಿದ್ದಾರೆ ಎಂದಿದ್ದಾರೆ.
ಇದೀಗ ಮತ್ತೆ ಜಾತಿಗಣತಿ ಮಾಡುವುದು ಹೇಗೆ ಸಾಧ್ಯ? ಜಾತಿಗಣತಿ ಮಾಡಲು ಶಿಕ್ಷಕರು ಬೇಕು.ಈಗ ತಾನೇ ಶಾಲೆಗಳು ಆರಂಭವಾಗಿರುವುದರಿಂದ ಶಿಕ್ಷಕರು ಲಭ್ಯವಾಗೋದಿಲ್ಲ. ಸಿದ್ದರಾಮಯ್ಯ ಹಾವಾಡಿಗನ ರೀತಿ ಈಗ ಮತ್ತೆ ಜಾತಿಗಣತಿ ಮಾಡಿಸುವುದಾಗಿ ಹೇಳ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಅಲ್ಲದೇ ಮುಂದಿನ ನವೆಂಬರ್, ಡಿಸೆಂಬರ್ ಗೆ ಸಿದ್ದರಾಮಯ್ಯ ಚೇಂಜ್ ಆಗ್ತಾರೆ. ಅದು ಹೇಗೆ ಜಾತಿಗಣತಿ ಮಾಡಿಸ್ತೀರಿ ಎಂದು ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ. ಮರುಜಾತಿಗಣತಿ ಮಾಡಿಸುವುದಿಲ್ಲ ಎಂದು ಹೈಕಮಾಂಡ್ ಗೆ ಹೇಳಿದ್ದರೇ ಸಿದ್ದರಾಮಯ್ಯ ಹೀರೋ ಆಗುತ್ತಿದ್ದರು. ಆದರೆ ಈಗ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಅನ್ಯಾಯ ಮಾಡಿದರು. ಮೂರು ತಿಂಗಳೊಳಗೆ ಜಾತಿಗಣತಿ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸುಮ್ಮನೇ ದೇವರಾಜ ಹೆಸರು ಹೇಳಬೇಡಿ. ಪ್ರಾಮಾಣಿಕತೆ ಇಲ್ಲದ ಸಿಎಂ ಸಿದ್ದರಾಮಯ್ಯ ಎಂದು ಚರಿತ್ರೆಯಲ್ಲಿ ದಾಖಲಾಗಿ ಹೋದರು ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
ಸುಳ್ಳು ಹೇಳಿಕೊಂಡು ಓಡಾಡುತ್ತಿರುವ ಸಿಎಂ ಸಿದ್ದರಾಮಯ್ಯ ಎಂದು ಚರಿತ್ರೆಯಲ್ಲಿ ದಾಖಲಾಗುತ್ತಾರೆ. 170 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಜಾತಿಗಣತಿ ಮಾಡಿಸಿದ ವರದಿಯನ್ನು ತಿಪ್ಪೆಗೆ ಎಸೆದಿದ್ದಾರೆ ಎಂದು ಎಂಎಲ್‌ಸಿ ಎಚ್ ವಿಶ್ವನಾಥ್ ಮೈಸೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇನ್ನೂ ಜಾತಿಗಣತಿ ವಾಗ್ದಾಳಿ ನಡೆಸುವಾದ ವಿಧಾನ ಪರಿಷತ್ ಸದಸ್ಯ ವಿಶ್ವನಾಥ್ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ್ದಾರೆ. ಮುಂದಿನ ನವಂಬರ್ ಗೆ ಸಿಎಂ ಬದಲಾವಣೆ ಆಗುತ್ತದೆ. ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಇಬ್ಬರಲ್ಲಿ ಒಬ್ರು ಸಿಎಂ ಆಗ್ತಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇನ್ನೂ ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಇತ್ತೀಚಿನ ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತ ಸಂಬಂಧ ಮಾತ್ನಾಡಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಂಎಲ್‌ಸಿ ಎಚ್. ವಿಶ್ವನಾಥ್ ತೀವ್ರವಾಗಿ ಟೀಕಿಸಿದ್ದಾರೆ. ಡಿಕೆ ಶಿವಕುಮಾರ್‌ರನ್ನು ಮುಖ್ಯಮಂತ್ರಿಯಾಗಿ ಬಯಸಿದ್ದ ನಾವು ಈ ಘಟನೆಯಿಂದ ನಿರಾಸೆಗೊಂಡಿದ್ದೇವೆ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರಕ್ಕೆ ಕರೆಂಟ್ ಶಾಕ್ ಆತಂಕ! ವಿದ್ಯುತ್ ಅವಘಡದಲ್ಲಿ 4 ವರ್ಷದಲ್ಲಿ 29 ಸಾವು


