BBMP
Loading ...

Chamundi

Greater Bengaluru News9:ದಸರಾ ಸಂಭ್ರಮಕ್ಕೆ ಸೂತಕದ ಛಾಯೆ ಆವರಿಸಿದೆ. ನಿನ್ನೆ ತಡರಾತ್ರಿ ಚಾಮುಂಡಿಬೆಟ್ಟದ ಶಿವಾರ್ಚಕ ರಾಜು ಸಾವನ್ನಪ್ಪಿರುವ ಹಿನ್ನೆಲೆ ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ನಿರ್ಬಂಧ (Bandh) ಹೇರಲಾಗಿದೆ. ಸಾರ್ವಜನಿಕರಿಗೆ ಇಂದು ಬೆಳಗ್ಗೆಯಿಂದ ರಾತ್ರಿಯವರೆಗೂ ದೇವಿಯ ದರ್ಶನ ಇಲ್ಲವಾಗಿದೆ. ಸೂತಕದ ಹಿನ್ನೆಲೆ ನವರಾತ್ರಿಯ 2ನೇ ದಿನ ದೇವಿಗೆ ಯಾವುದೇ ಪೂಜಾ ಕಾರ್ಯವಿಲ್ಲದಂತಾಗಿದೆ.

ಮೂಲ ವಿಗ್ರಹ ದರ್ಶನಕ್ಕೆ ಅವಕಾಶವಿಲ್ಲ
ಚಾಮುಂಡಿ ಬೆಟ್ಟದ ಅರ್ಚಕ ರಾಜು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ರಾತ್ರಿವರೆಗೂ ಮೂಲ ವಿಗ್ರಹ ದರ್ಶನಕ್ಕೆ ಅವಕಾಶವಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಚಾಮುಂಡಿ ಬೆಟ್ಟದಲ್ಲಿ ಶಿವಾರ್ಚಕರಾಗಿದ್ದ ರಾಜು, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ. ನಿನ್ನೆ ತಡರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಗರ್ಭ ಗುಡಿಗೆ ತೆರೆ ಎಳೆದ ಅರ್ಚಕರು
ಬೆಟ್ಟದಲ್ಲಿ ಸೂತಕದ ಹಿನ್ನೆಲೆ ಚಾಮುಂಡಿದೇವಿಯ ಮೂಲ ವಿಗ್ರಹವಿರುವ ಗರ್ಭ ಗುಡಿಗೆ ಸಂಪೂರ್ಣವಾಗಿ ತೆರೆ ಎಳೆಯಲಾಗಿದೆ. ಮಾಹಿತಿ ತಿಳಿಯದೆ ದೇವಸ್ಥಾನಕ್ಕೆ ಬರುವವರಿಗೆ ಕೇವಲ ತಾಯಿಯ ಉತ್ಸವಮೂರ್ತಿ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ ಎಂದು ತಿಳಿದುಬಂದಿದೆ.

ದೇವಿಯ ದರ್ಶನವಿಲ್ಲದೆ ಜನ ವಾಪಸ್​
ನವರಾತ್ರಿ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತ ಸಾಗರವೇ ಹರಿದು ಬರ್ತಿದೆ. ಇಂದು ದಿಢೀರ್​ ದೇವಿ ದರ್ಶನಕ್ಕೆ ನಿರ್ಬಂಧ ಹಿನ್ನೆಲೆ ಸಾರ್ವಜನಿಕರಿಗೂ ತೊಂದರೆಯಾಗಲಿದೆ. ಚಾಮುಂಡಿಯ ದರ್ಶನ ಪಡೆಯಲು ಬಂದವರು ದೇವಿಯ ದರ್ಶನ ಭಾಗ್ಯವಿಲ್ಲದೆ ವಾಪಸ್ ಆಗ್ತಿದ್ದಾರೆ. ದೇಗುಲ ಶುಚಿಗೊಳಿಸಿದ ಬಳಿಕ ದೇವಿಗೆ ವಿಶೇಷ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಲಿದೆ.

ಇತ್ತ ಸರಾಗವಾಗಿ ಸಾಗಿದೆ ದಸರಾ ಆಚರಣೆ
ಅರಮನೆಯಲ್ಲಿ ಎರಡನೇ ದಿನದ ಖಾಸಗಿ ದರ್ಬಾರ್ ನಡೆಯುತ್ತಿದ್ದು, ಪಟ್ಟದ ಆನೆ ಪಟ್ಟದ ಕುದುರೆ ಪಟ್ಟದ ಹಸುಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಕೆ ಮಾಡಿದ್ದಾರೆ. ವಾದ್ಯ ಗೋಷ್ಠಿಯೊಂದಿಗೆ ಪೂಜೆ ಸಲ್ಲಿಸಿದ್ದು, ಅರಮನೆ ಅಂಗಳದಲ್ಲಿ ಪಟ್ಟದ ಆನೆ, ಕುದುರೆ, ಹಸುಗಳು, ಒಂದು ಸುತ್ತು ಸುತ್ತಿಕೊಂಡು ಬಂದಿವೆ. ಬಳಿಕ ಅರಮನೆ ಅಂಗಳದಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಯ್ತು. ಬೆಳಗ್ಗೆ 11 ಗಂಟೆಗೆ ಜೆಕೆ ಮೈದಾನದಲ್ಲಿ ನಡೆದ ಮಹಿಳಾ ದಸರಾಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ ನೀಡಿದ್ರು.

Leave a Reply

Your email address will not be published. Required fields are marked *