BBMP
Loading ...

Teacher

ಬೆಂಗಳೂರು : ಉದ್ಯಮಿಯೊಬ್ಬನನ್ನು ಹನಿಟ್ರ್ಯಾಪ್‌ ಹಳ್ಳಕ್ಕೆ ಕೆಡವಿ ಲಕ್ಷಾಂತರ ರೂ. ಹಣಕ್ಕೆ ಬೇಡಿಕೆಯಿಟ್ಟ ತಂಡವನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಕೇಶ್‌ ಎಂಬ ಉದ್ಯಮಿಗೆ ವಂಚಿಸಿದ ಆರೋಪದಡಿಯಲ್ಲಿ ಮಹಾಲಕ್ಷ್ಮೀ ಲೇಔಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶ್ರೀದೇವಿ, ಗಣೇಶ್ ಮತ್ತು ಸಾಗರ್‌ ಎಂಬುವರನ್ನು ಬಂಧಿಸಲಾಗಿದೆ.

ಆರೋಪಿ ಶ್ರೀದೇವಿ ಮಹಾಲಕ್ಷ್ಮೀ ಲೇಔಟ್‌ ಬಳಿ ಪ್ರಿಸ್ಕೂಲ್‌ ನಡೆಸುತ್ತಿದ್ದಳು. ಇಲ್ಲಿಗೆ ತನ್ನ ಮಕ್ಕಳನ್ನು ಬಿಡಲು ರಾಕೇಶ್‌ ಬರುತ್ತಿದ್ದರು. ಆಗ ಇಬ್ಬರ ನಡುವೆ ಆದ ಪರಿಚಯ ಕ್ರಮೇಣ ಸಲುಗೆಗೆ ತಿರುಗಿ ಡೇಟಿಂಗ್‌ ಹಂತಕ್ಕೂ ತಲುಪಿತ್ತು. ರಾಕೇಶ್‌ ಗೆ ಒಂದು ಬಾರಿ ಚುಂಬಿಸಲು 50 ಸಾವಿರ ರೂ. ಹಣಕ್ಕೆ ಬೇಡಿಕೆ ಇಡುತ್ತಿದ್ದ ಶ್ರೀದೇವಿ , ಅದರ ಫೋಟೋಗಳನ್ನೂ ತೆಗೆದಿರಿಸಿಕೊಳ್ಳುತ್ತಿದ್ದಳು. ರಾಕೇಶ್‌ ನಿಂದ 2 ಲಕ್ಷ ರೂ. ಹಣ ಸಾಲ ಎಂದು ಪಡೆದು ಬಳಿಕ ವಾಪಸ್‌ ಕೊಡದೇ ತನ್ನ ಪ್ರಿಸ್ಕೂಲ್‌ ಗೆ ಪಾಲುದಾರರನ್ನಾಗಲು ಒತ್ತಾಯಿಸಿದ್ದಳು. ಇದಕ್ಕೆ ಒಪ್ಪದ ರಾಕೇಶ್‌ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದ.

ಬಳಿಕ ಅರುಣ್‌, ಸಾಗರ್‌ ಎಂಬುವವರ ನೆರವು ಪಡೆದ ಶ್ರೀದೇವಿ ಬ್ಲಾಕ್‌ ಮೇಲ್‌ ಮಾಡಲು ಶುರುಮಾಡಿದ್ದಳು. ಚಾಟ್‌ ಡಿಲೀಟ್‌ ಮಾಡಲು 50 ಲಕ್ಷ ರೂ. ವಿಡಿಯೋ ಡಿಲೀಟ್‌ ಮಾಡಲು 1 ಕೋಟಿ ರೂ. ಹಣ ನೀಡುವಂತೆ ಇಲ್ಲದಿದ್ದರೆ ವಿಡಿಯೋ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ರಾಕೇಶ್‌ ಸಿಸಿಬಿಯಲ್ಲಿ ದೂರು ದಾಖಲಿಸಿದ್ದ.

ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ದುಬಾರಿ ದುನಿಯಾ: ಹಾಲು, ಮೊಸರು, ವಿದ್ಯುತ್ ದರ ಏರಿಕೆ, ಕಸ ಸಂಗ್ರಹಕ್ಕೂ ತೆರಿಗೆ: ಇಂದಿನಿಂದ ಏನೆಲ್ಲಾ ದುಬಾರಿ ಗೊತ್ತಾ?

Leave a Reply

Your email address will not be published. Required fields are marked *