BBMP
Loading ...

ಬೆಂಗಳೂರು: 2023-24ನೇ ಸಾಲಿನ 10 ಮತ್ತು 12ನೇ ತರಗತಿ ಫಲಿತಾಂಶವನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (ಸಿಬಿಎಸ್‌ಇ) ಸೋಮವಾರ ಪ್ರಕಟಿಸಿದ್ದು, ದಿ ಗ್ರೇಟ್ ಈಸ್ಟರ್ನ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್​ನ ವಿದ್ಯಾರ್ಥಿ ಪವನ್​ ಪರೀಕ್ಷಿತ್​.ಎಚ್​ ಶಾಲೆಯ ಟಾಪರ್​ ಆಗಿ ಹೊರ ಹೊಮ್ಮಿದ್ದಾರೆ.

ಪವನ್​ ಅವರು ನಗರದ ಲಿಂಗಧೀರನಹಳ್ಳಿಯಲ್ಲಿರುವ ದಿ ಗ್ರೇಟ್ ಈಸ್ಟರ್ನ್ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್​ನ ವಿದ್ಯಾರ್ಥಿ. ಬಿಬಿಎಂಪಿ ರೆವಿನ್ಯೂ ಇನ್​ಸ್ಪೆಕ್ಟರ್​ ಜಿ. ಹನುಮಂತರಾಯಪ್ಪ ಅವರ ಪುತ್ರ.

ಇಂಗ್ಲಿಷ್​ನಲ್ಲಿ 93 ಅಂಕ, ಕನ್ನಡದಲ್ಲಿ 97, ಗಣಿತದಲ್ಲಿ 81, ವಿಜ್ಞಾನದಲ್ಲಿ 88 ಹಾಗೂ ಸಮಾಜ ವಿಜ್ಞಾನದಲ್ಲಿ 92 ಅಂಕಗಳನ್ನು ಗಳಿಸಿದ್ದಾರೆ. ಒಟ್ಟು 500ಕ್ಕೆ 451 ಅಂಕಗಳನ್ನು ಗಳಿಸಿ, ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತಮ ಸಾಧನೆಯೊಂದಿಗೆ ಶಾಲೆಗೆ ಮತ್ತು ಕುಟುಂಬಕ್ಕೆ ಗೌರವ ತಂದಿದ್ದಾರೆ. ಪವನ್​ ಅವರ ಈ ಸಾಧನೆಯನ್ನು ಕಂಡು ಶಾಲೆಯ ಆಡಳಿತ ಮಂಡಳಿ, ಪಾಲಕರು ಹಾಗೂ ಕುಟುಂಬಸ್ಥರು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಬೆಂಗಳೂರು ಪ್ರಾದೇಶಿಕ ವಿಭಾಗದ ಸಿಬಿಎಸ್‌ಇ ಶಾಲೆಗಳಲ್ಲಿ 10ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ ಶೇ.99.26 ರಷ್ಟು ಮತ್ತು 12ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳಲ್ಲಿ ಶೇ.96.95 ರಷ್ಟು ವಿದ್ಯಾರ್ಥಿ ಗಳು ಉತ್ತೀರ್ಣರಾಗಿದ್ದಾರೆ. 10ನೇ ತರಗತಿ ಫಲಿತಾಂಶ ಕಳೆದ ವರ್ಷಕ್ಕೆ (ಶೇ.99.18) ಹೋಲಿಸಿದರೆ ಶೇ.0.08 ರಷ್ಟು ಹೆಚ್ಚಾದರೆ, 12 ನೇ ತರಗತಿ ಫಲಿತಾಂಶವು ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ.98.64) ಶೇ.1.69 ರಷ್ಟು ಕಡಿಮೆಯಾಗಿದೆ.

ರಾಜ್ಯದ ಜನರಿಗೆ ಗುಡ್ ನ್ಯೂಸ್: ಗ್ರಾಮ ಪಂಚಾಯ್ತಿ ಆಸ್ತಿ ತೆರಿಗೆ ಪಾವತಿಯಲ್ಲಿ ಶೇ.5ರಷ್ಟು ರಿಯಾಯಿತಿ ಘೋಷಣೆ

Leave a Reply

Your email address will not be published. Required fields are marked *