ರಾಜ್ಯದಲ್ಲಿ 3 ದಿನ ಭಾರೀ ಮಳೆಯಾಗೋ ನಿರೀಕ್ಷೆ ಇದೆ. ಬೆಂಗಳೂರಲ್ಲಿ ಮಧ್ಯರಾತ್ರಿಯಿಂದ ಬೆಳಗ್ಗೆತನಕ ಭಾರೀ ಮಳೆಯಾಗಿದೆ. ರಾಜಾಜಿನಗರ, ಪೀಣ್ಯ, ಲಗ್ಗೆರೆ, ನಾಗರಬಾವಿ, ಮೆಜೆಸ್ಟಿಕ್, ಕಾರ್ಪೊರೇಷನ್, ಮಲ್ಲೇಶ್ವರಂ ಸೇರಿದಂತೆ ಸಾಕಷ್ಟು ಕಡೆ ಗುಡುಗು, ಮಿಂಚಿನ ಸಹಿತ ಜೋರು ಮಳೆಯಾಗಿದೆ.
ರಸ್ತೆ ಮೇಲೆಲ್ಲಾ ನೀರು ನಿಂತು ಮುಂಜಾನೆ ಪ್ರಯಾಣಿಕರಿಗೆ, ವಾಹನ ಸವಾರರಿಗೆ ಸ್ವಲ್ಪ ಸಮಸ್ಯೆಯಾಗಿದ್ದು, ಅಂಡರ್ ಬ್ರಿಡ್ಜ್‌ಗಳ ಕೆಳಗೆಲ್ಲಾ ನೀರು ನಿಂತಿದೆ, ವಾಹನ ಸವಾರರು ಹುಷಾರಾಗಿ ಸಾಗಬೇಕಿದೆ.
ನಿನ್ನೆ ರಾತ್ರಿ ಸುರಿದ ಮಳೆಗೆ ನಗರದಲ್ಲಿ ಸಾಲು ಸಾಲು ಅವಾಂತರ ಸೃಷ್ಟಿಯಾಗಿದ್ದು, ನಗರದ ಮಹಾದೇವಪುರದ ಪಣತ್ತೂರು ಬಳಿಯ ಬಳಗೆರೆ ಮುಖ್ಯ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಅಲ್ಲದೇ ಬಳಗೆರೆ ಸಮೀಪದ ದಿಶಾ ಸೆಂಟ್ರಲ್ ಅಪಾರ್ಟ್ಮೆಂಟ್ ಗೆ ಮಳೆ ನೀರು ನುಗ್ಗಿದ್ದು, ಅಪಾರ್ಟ್ಮೆಂಟ್ ಬೇಸ್ಮೆಂಟ್ ಜಲಾವೃತವಾಗಿದೆ.
ಇತ್ತ ಭಾರೀ ಮಳೆಗೆ ಮಾರತಹಳ್ಳಿ ಬಳಿಯ ಸೊನೆಸ್ಟಾ ಸಿಲ್ವರ್ ಓಕ್ ಅಪಾರ್ಟ್ಮೆಂಟ್ ಗೆ ನೀರು ನುಗ್ಗಿದೆ. ಮಳೆಯಿಂದಾಗಿ ಹರಿದ ನೀರಿಗೆ ಅಪಾರ್ಟ್ಮೆಂಟ್ ತಡೆಗೋಡೆ ಕೂಡ ಕುಸಿತವಾಗಿದ್ದು, ನಿವಾಸಿಗಳು ಆತಂಕಗೊಂಡಿದ್ದಾರೆ. ರಾತ್ರಿ ಸುರಿದ ಮಳೆಗೆ ನಾಗವಾರ ಜಂಕ್ಷನ್ ಮತ್ತು ಹೆಬ್ಬಾಳ ರೋಡ್ ಕೆರೆಯಂತಾಗಿದ್ದು, ಎಸ್ಟೀಮ್ ಮಾಲ್ ಟು ಹೆಬ್ಬಾಳ ಪ್ಲೈ ಓವರ್ ಮಾರ್ಗ ದಲ್ಲಿ ಮಳೆ ನೀರು ನಿಂತಿರುವ ಕಾರಣ ಪ್ರಯಾಣಿಕರು ಪರದಾಟ ನಡೆಸಿದ್ದಾರೆ.
ಇನ್ನು, ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗದ ರಸ್ತೆಯಲ್ಲಿ ನೀರು ಸರಾಗವಾಗಿ ಹರಿದು ಹೋಗದ ಪರಿಣಾಮ ವಾಹನ ಸವಾರರ ಪರದಾಟ ನಡೆಸುತ್ತಿದ್ದ ದೃಶ್ಯಗಳು ಕಂಡು ಬಂದಿದೆ. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಯ ಮೇಲೆ ಎರಡು ಅಡಿ ಅಷ್ಟು ನೀರು ನಿಂತಿರುವ ಪರಿಣಾಮ ವಾಹನ ಸವಾರರ ಪರದಾಟ ನಡೆಸಿದ್ದಾರೆ.
ದಸರಾ ಜಂಬೂ ಸವಾರಿಗೆ 18 ಆನೆಗಳ ಪಟ್ಟಿ ಸಿದ್ಧ, ಯಾವ್ಯಾವ ಆನೆ? ಕ್ಯಾಪ್ಟನ್ ಯಾರು? ಇಲ್ಲಿದೆ ಮಾಹಿತಿ


