BBMP
Loading ...

Kandaya

ಹಾಸನ : ಜಿಲ್ಲೆಯ ಅರಕಲಗೂಡು ತಾಲ್ಲೂಕು ಕಚೇರಿಯಲ್ಲಿ ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್​​ಪೆಕ್ಟರ್‌, ರೈತರ ಜಮೀನಿಗೆ ಖಾತೆ ಮಾಡಲು ಲಂಚ ಪಡೆಯುತ್ತಿದ್ದಾನೆ ಎಂದು ಜೆಡಿಎಸ್​ ಗಂಭೀರ ಆರೋಪ ಮಾಡಿದೆ.

ಈ ಕುರಿತಾದ ವಿಡಿಯೋವನ್ನು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಕಂದಾಯ ಇಲಾಖೆ ಸಚಿವ ಕೃಷ್ಣಬೈರೇಗೌಡ ವಿರುದ್ಧ ಕಿಡಿಕಾರಿದೆ.

ಪೋಸ್ಟ್​​ನಲ್ಲಿ.. ‘ಕಂದಾಯ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಸಹಾಯಕ ಕಂದಾಯ ಸಚಿವರೇ ಇಲ್ನೋಡಿ. ಅರಕಲಗೂಡು ತಾಲ್ಲೂಕು ಕಚೇರಿಯಲ್ಲಿ ಲಂಚಬಾಕ ರೆವಿನ್ಯೂ ಇನ್ಸ್‌ ಪೆಕ್ಟರ್‌, ರೈತರ ಜಮೀನಿಗೆ ಖಾತೆ ಮಾಡಲು ಲಂಚ ಪಡೆಯುತ್ತಿದ್ದಾನೆ.

ಜಮೀನಿನ ಖಾತೆ ಮಾಡಿಕೊಡದಿದ್ದಕ್ಕೆ ನೊಂದ ರೈತ ತಾನು ಕೊಟ್ಟಿರುವ ಹಣ ವಾಪಸ್‌ ಕೇಳಿದ್ದಕ್ಕೆ, ಈ ನೀಚ ಮನಸ್ಥಿತಿಯ ಅಧಿಕಾರಿ ಯಾವ ರೀತಿ ಅಸಭ್ಯವಾಗಿ ತನ್ನನ್ನು ಸಮರ್ಥಿಸಿಕೊಂಡಿದ್ದಾನೆ ಕೇಳಿಸಿಕೊಳ್ಳಿ. ಇದೇನಾ ನಿಮ್ಮ ಜನಪರ ಆಡಳಿತ? ಕಂದಾಯ ಸಚಿವರೇ ಭ್ರಷ್ಟಾಚಾರದ ಕೂಪವಾಗಿರುವ ಇಲಾಖೆಯನ್ನು ಸರಿಪಡಿಸಿ. ಈ ಧನದಾಹಿ ಲಂಚಬಾಕ ರೆವಿನ್ಯೂ ಇನ್ಸ್‌ ಪೆಕ್ಟರ್‌ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ರೈತರನ್ನು ಬದುಕಿಸಿ’ ಎಂದು ಜೆಡಿಎಸ್ ಆಗ್ರಹಿಸಿದೆ.

ಮಾಜಿ ಸಿಎಂ ಜೊತೆ ಒಡನಾಟ: ಲಾಯರ್ ಜಗದೀಶ್ ಆರೋಪಕ್ಕೆ ನಟಿ ರಚಿತಾ ರಾಮ್​ ಕೊಟ್ಟ ಉತ್ತರ ಹೀಗಿತ್ತು…

Leave a Reply

Your email address will not be published. Required fields are marked *