ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಯಾರೆಲ್ಲ ‘ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ’ (BESCOM) ವತಿಯಿಂದ ವಿದ್ಯುತ್ ಸಂಪರ್ಕ ಪಡೆದಿದ್ದೀರೋ ಅವರೆಲ್ಲ ಒಂದು ಭಾರಿ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ. ಏಕೆಂದರೆ ಸುಪ್ರೀಂ ಕೋರ್ಟ್ ನಿರ್ದೇಶನ ಮೇರೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಮತ್ತು ಬೆಸ್ಕಾಂ ನಿರ್ದಿಷ್ಟ ವರ್ಗದ ಗ್ರಾಹಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದೆ.
ಹೌದು, ‘ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ’ಗೆ (BESCOM) ಯಾರೆಲ್ಲ ಆಕ್ಯುಪೆನ್ಸಿ ಪ್ರಮಾಣಪತ್ರಗಳನ್ನು (OCs) ನೀಡಿಲ್ಲ ಅಥವಾ ನೀಡುವಲ್ಲಿ ವಿಫಲವಾಗಿದ್ದೀರೋ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ. ಅಕ್ರಮ ಕಟ್ಟಡಗಳಿಗೆ ನೀಡಲಾದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುತ್ತದೆ. ಇದು KERC ಮತ್ತು ಉಪಯುಕ್ತತಾ ಸೇವೆಗಳಿಗೆ ಸರಿಯಾದ ದಾಖಲೆಗಳನ್ನು ಕಡ್ಡಾಯಗೊಳಿಸುವ ಸುಪ್ರೀಂ ಕೋರ್ಟ್ ನಿರ್ದೇಶನ ಪಾಲನೆ ಆಗಿದೆ ಎಂದು ‘ಯುಪಿಇಪಿ ನ್ಯೂಸ್’ ವರದಿ ಮಾಡಿದೆ.
ಸಿಲಿಕಾನ್ ಸಿಟಿಯಲ್ಲಿರುವ ಆಸ್ತಿ ಮಾಲೀಕರು ಮತ್ತು ಬಾಡಿಗೆದಾರರು ಕೂಡಲೇ ವಿದ್ಯುತ್ ಸಂಪರ್ಕ ಕಡಿತ ತಪ್ಪಿಸಬೇಕು. ಅದಕ್ಕಾಗಿ ನೀವು ಕೂಡಲೇ ಸೂಕ್ತ ದಾಖಲೆಗಳನ್ನು ಬೆಸ್ಕಾಂಗೆ ನೀಡಿ ದೃಢಪಡಿಸಿಕೊಳ್ಳಬೇಕಿದೆ. ಯಾವೆಲ್ಲ ಕಾರಣಗಳಿಗೆ ಬೆಸ್ಕಾಂ ಈ ಕ್ರಮದ ನಿರ್ಧಾರಕ್ಕೆ ಬಂದಿದೆ ಎಂಬ ಮಾಹಿತಿ ಮುಂದೆ ಇದೆ.
ವಿದ್ಯುತ್ ಕಡಿತಕ್ಕೆ ಕಾರಣಗಳು, ಅಂಶಗಳು
* ಆಕ್ಯುಪೆನ್ಸಿ ಪ್ರಮಾಣಪತ್ರಗಳ ಕೊರತೆ (OCs) ವಿದ್ಯುತ್ ಸಂಪರ್ಕ ಕಡಿತಕ್ಕೆ ಮೂಲ ಕಾರಣ
* KERC ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳ ಪ್ರಕಾರ BESCOM ಕ್ರಮ ಜಾರಿಗೆ ಮಾಡುತ್ತಿದೆ.
* ಬೆಂಗಳೂರಲ್ಲಿದ್ದುಕೊಂಡು ವಿದ್ಯುತ್ ಸಂಪರ್ಕ ಪಡೆದ OCs ಇಲ್ಲದ ಕಟ್ಟಡಗಳು ಮತ್ತು ಕಟ್ಟಡ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಇದಾಗಿದೆ.
* ಕಠಿಣ ಕ್ರಮಕ್ಕು ಮೊದಲು ವಿದ್ಯುತ್ ಸಂಪರ್ಕ ಪಡೆದ ಅಕ್ಯುಪೆನ್ಸ್ ನೀಡದವರಿಎಗೆ 7 ದಿನಗಳ ಗಡುವು ನೀಡಲಾಗಿದೆ.
* ಇದಕ್ಕೆ ಪರಿಹಾರ ನೋಡುವುದಾದರೆ, ಬೆಸ್ಕಾಂಗೆ ಕೂಡಲೇ ಅನಧಿಕೃತ ಸಂಪರ್ಕ ಪಡೆದವರು ನಿಮ್ಮ ವಾಸಸ್ಥಾನದ ದೃಢೀಕರಣ (ಅಕ್ಯುಪೆನ್ಸಿ) ಪ್ರಮಾಣ ಪತ್ರ ಸಲ್ಲಿಸಬೇಕು. ಆಗಿರುವ ಉಲ್ಲಂಘನೆಗಳನ್ನು ಸರಿಪಡಿಸಿಕೊಳ್ಳಬೇಕು.
ಬೆಸ್ಕಾಂ ನಿಯಮ ಉಲ್ಲಂಘಿಸುವವರ ಕಟ್ಟಡಗಳಿಗೆ ಕೊಟ್ಟಿರುವ ವಿದ್ಯುತ್ ಕಡಿತಗೊಳಿಸುವುದು ಮೊದಲ ಎಚ್ಚರಿಕೆಯ ಹೆಜ್ಜೆಯಾಗಿದೆ. ಆಕ್ಯುಪೆನ್ಸಿ ಪ್ರಮಾಣಪತ್ರಗಳನ್ನು ಕಾನೂನು ಅನುಮೋದನೆ ಪಡೆಯುವುದು ಕಾನೂನು ಬದ್ಧವಾಗಿದೆ. ಇದು ವಿದ್ಯುತ್ ಸಂಪರ್ಕ ಪಡೆಯಲು ಅಧಿಕೃತ ಪ್ರಮಾಣಪತ್ರವಾಗಿರುತ್ತದೆ.
ಅನಧಿಕೃತ ಕಟ್ಟಡಗಳು, ಇಲ್ಲಿನ ನಿವಾಸಿಗಳು ಅಲ್ಲದವರು ಈ ಪ್ರಮಾಣಪತ್ರ ನೀಡದೆಯೇ ಬೆಸ್ಕಾಂ ನಿಂದ ವಿದ್ಯುತ್ ಪಡೆದಿರುತ್ತಾರೆ. ಅವರು ಕಾನೂನುಬದ್ಧ ದಾಖಲಾತಿ ನೀಡಿರುವುದಿಲ್ಲ. ಇದರಿಂದ ನಿಯಂ ಉಲ್ಲಂಘನೆ ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸೂಚನೆ ಇದೆ. ಪ್ರಮಾಣಪತ್ರ ನೀಡದವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ನಗರದ ಅಕ್ರಮ ಕಟ್ಟಡಗಳು ಮತ್ತು ನಿಯಮ ಉಲ್ಲಂಘಿಸಿದ ನಿರ್ಮಿಸಿದ ಕಟ್ಟಡಗಳು ಹೆಚ್ಚಾಗಿವೆ. ಇವುಗಳು ನಿಯಮ ಮೀರಿ ಸರ್ಕಾರ, ಸ್ಥಳೀಯ ಸಂಸ್ಥೆಗಳಿಂದ ಅನುಮೋದನೆ ಪಡೆಯದೇ ಕಾರ್ಯ ನಿರ್ವಹಿಸುತ್ತವೆ. ಇದರಿಂದ ಸುರಕ್ಷತೆ ಧಕ್ಕೆ ಉಂಟಾಗುತ್ತದೆ. ಇದರ ನಿವಾರಣೆಗೆ ಬೆಸ್ಕಾಂ ಕ್ರಮಕ್ಕೆ ಮುಂದಾಗಿದೆ.
ಬೆಸ್ಕಾಂ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಅನುಮೋದನೆ ಪಡೆಯದೇ ಹಲವು ಕಟ್ಟಡಗಳು ತಲೆ ಎತ್ತಿವೆ. ಇವುಗಳು ಕಾನೂನು ನಿಯಮ ಮೀರಿ ನಿರ್ಮಿಸಲ್ಪಟ್ಟಿವೆ. ಇದರಿಂದ ಸುರಕ್ಷತಾ ಮಾನದಂಡಗಳನ್ನು ಬೈಪಾಸ್ ಮಾಡಿದಂತೆ, ನಿಯಮ ಉಲ್ಲಂಘಿಸಿದಂತಾಗುತ್ತದೆ. ನಿಯಮಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳ ಪ್ರಕಾರ, ಇಲ್ಲಿನ ವಾಸಿಗಳಿಗೆ, ನಿಯಮ ಪಾಲನೆ ಮಾಡುವ ಜೊತೆಗೆ ಸ್ಥಳೀಯ ಸಂಸ್ಥೆಗಳಿಂದ ದೃಢೀಕರಣ ಪಡೆದ ಕಟ್ಟಡಗಳಿಗೆ ವಿದ್ಯುತ್, ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಬಹುದಾಗಿದೆ. ಹೀಗೆ ಬೇಕಾಬಿಟ್ಟಿ ಮನೆ ನಿರ್ಮಿಸಿ, ಯಾವ ಪೂರ್ವಾನುಮತಿ ಇಲ್ಲದೇ ವಾಸಿಸುವವರಿಂದ ಸಾಕಷ್ಟು ತೊಂದರೆ ಆಗುತ್ತದೆ. ಅಂತವರು ಅಧಿಕೃತ ಅನುಮತಿ ಪಡೆಯಬೇಕು. ಅದಕ್ಕಾಗಿ ಸೂಕ್ತ ದಾಖಲಾತಿ ನೀಡ ಬೇಕು.
ಈ ಆಕ್ಯುಪೆನ್ಸಿ ಪ್ರಮಾಣಪತ್ರ ಎಂದರೇನು?
ಆಕ್ಯುಪೆನ್ಸಿ ಪ್ರಮಾಣಪತ್ರ (OC) ಎಂದರೆ ಸ್ಥಳೀಯ ನಾಗರಿಕ ಸಂಸ್ಥೆಗಳಾದ ಬಿಬಿಎಂಪಿಯಂತಹ ಸಂಸ್ಥೆಗಳ ಅಧಿಕಾರಿಗಳಿಂದ ಕಾನೂನು ದಾಖಲೆ ಪಡೆಯಬೇಕು. ಹೊಸ ಜಾಗ ಖರೀದಿಸಿದ, ಮನೆ ಕಟ್ಟಲು ಪಾಲಿಕೆ-ಕಂದಾಯ ವಿಭಾಗದ ಅಧಿಕಾರಿಗಳ ಅನುಮತಿ ಬೇಕಾಗುತ್ತದೆ. ಅಧಿಕಾರಿಗಳು ಪ್ರಮಾಣ ಪತ್ರ ದೃಢೀಕರಣಗೊಳಿಸುತ್ತಾರೆ. ಈ ಪ್ರಮಾಣಪತ್ರ ಇಲ್ಲದೇಯೂ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ಕ್ರಮ ಜರಿಗಿಸಲಾಗುತ್ತಿದೆ.
ತಲೆಯಲ್ಲಿ ಕೂದಲು ಇಲ್ಲ ಎಂದು ಪತ್ನಿಯ ಟಾರ್ಚರ್: ಮನನೊಂದು ಪತಿ ಆತ್ಮಹತ್ಯೆ, ಚಾಮರಾಜನಗರದಲ್ಲಿ ಘಟನೆ


