BBMP
Loading ...

ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಅಂಡರ್‌ಗ್ರೌಂಡ್(ಸುರಂಗ) ಮಾರ್ಗದಲ್ಲಿ ವಿದ್ಯುತ್ ಕೇಬಲ್ ಅಳವಡಿಸುವ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ.

ಲೈಟ್ ಕಂಬದ ಮೂಲಕ ವಿದ್ಯುತ್ ಲೈನ್ ಅಳವಡಿಕೆಯಿಂದ ಜೀವ ಹಾನಿ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಮತ್ತು ಬೆಂಗಳೂರು ಅಭಿವೃದ್ಧಿ ದೃಷ್ಟಿಯಿಂದ ಸುಮಾರು 6500 ಕೋಟಿ ರೂ ಅಂದಾಜಿನಲ್ಲಿ ಅಂಡರ್‌ಗ್ರೌಂಡ್ ಕೇಬಲ್ ಅಳವಡಿಕೆ ಯೋಜನೆಗೆ ಚಾಲನೆ ನೀಡಲಾಗಿತ್ತು.

ಎಚ್.ಟಿ. ಕೇಬಲ್ ಅಳವಡಿಕೆಯಲ್ಲಿ 9877 ಕಿ.ಮೀ. ಉದ್ದ ಅಂಡರ್‌ಗ್ರೌಂಡ್ ಪೈಪ್ ಲೈನ್ ಮೂಲಕ ಕೇಬಲ್ ಅಳವಡಿಸಿ ಶೇ.86 ಸಾಧಿಸಿದ್ದರೆ, ಎಲ್‌ಟಿ ಕೇಬಲ್ ಅಳವಡಿಕೆಯಲ್ಲಿ 9634 ಕಿ.ಮೀ. ಉದ್ದ ಅಂಡರ್ ಗ್ರೌಂಡ್ ಪೈಪ್ ಲೈನ್ ಮೂಲಕ ಕೇಬಲ್ ಅಳವಡಿಸಿ ಶೇ.75 ಸಾಧನೆ ಮಾಡಲಾಗಿದೆ.

ಎಚ್.ಟಿ.ಕೇಬಲ್‌ನಲ್ಲಿ ಒಟ್ಟು 11,477 ಕಿ.ಮೀ. ಉದ್ದದ ಕೇಬಲ್ ಅಳವಡಿಸಲು ಉದ್ದೇಶಿಸಲಾಗಿದ್ದು, ಅದರಲ್ಲಿ 1600 ಕಿ.ಮೀ. (ಶೇ.14) ಬಾಕಿ ಇದೆ. ಎಲ್‌ಟಿ ಕೇಬಲ್‌ನಲ್ಲಿ 12,834 ಕಿ.ಮೀ.(ಶೇ.25) ಉದ್ದದ ಕೇಬಲ್ ಅಳವಡಿಕೆ ಬಾಕಿ ಇದೆ. ಬಾಕಿ ಇರುವ ಕೇಬಲ್ ಅಳವಡಿಕೆಯನ್ನು ಶೀಘ್ರದಲ್ಲಿಯೇ ಮುಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ರಾಜ್ಯದಿಂದ 1,403 ಕೋಟಿ ರೂ. ಮೌಲ್ಯದ ವಿದ್ಯುತ್ ಮಾರಾಟ: ಸಚಿವ ಕೆ.ಜೆ. ಜಾರ್ಜ್‌ ಹೇಳಿಕೆ

Leave a Reply

Your email address will not be published. Required fields are marked *