BBMP
Loading ...

Screenshot-2025-11-18-153649

Greater Bangalore news9: ಬೆಂಗಳೂರು ಗ್ರಾಹಕರ ನ್ಯಾಯಾಲಯವು ಸ್ವಿಗ್ಗಿಯಿಂದ ಸಸ್ಯಾಹಾರವಾಗಿ ಆರ್ಡರ್ ಮಾಡಿದ್ದ ಆಹಾರದಲ್ಲಿ ಮಾಂಸಾಹಾರ ಸಿಕ್ಕಿರುವ ಪ್ರಕರಣದಲ್ಲಿ ಗ್ರಾಹಕಿ ನಿಶಾ ಜಿ ಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ. 37 ವರ್ಷದ ನಿಶಾ ಜಿ ಸಸ್ಯಾಹಾರಿಯಾಗಿದ್ದು, ಪ್ರಾಣಿಗಳ ಮೇಲೆ ಪ್ರೀತಿ ಮತ್ತು ಧಾರ್ಮಿಕ/ಆಧ್ಯಾತ್ಮಿಕ ದೃಷ್ಟಿಯಿಂದ ಮಾಂಸಾಹಾರ ಸೇವಿಸುವುದನ್ನು ನಿರಾಕರಿಸಿದ್ದಾರೆ.

2024ರ ಜುಲೈ 10ರಂದು ಅವರು ಸ್ವಿಗ್ಗಿಯಿಂದ ಸಸ್ಯಾಹಾರಿ ಸ್ಯಾಂಡ್‌ವಿಚ್ ಅನ್ನು ಆರ್ಡರ್ ಮಾಡಿದರು. ಸಸ್ಯಹಾರಿ ಸ್ಯಾಂಡ್‌ವಿಚ್‌ನಲ್ಲಿ ಸೀಗಡಿ ಸಿಕ್ಕಿದ ನಂತರ ಭಯ ಹಾಗೂ ಶುದ್ಧೀಕರಣದ ಆಚರಣೆ ಮಾಡುವಂತಾಯ್ತು ಸ್ಯಾಂಡ್‌ವಿಚ್ ಸೇವಿಸಿದಾಗ ಬೇರೆಯದೇ ರುಚಿ ಅನುಭವ ಆಯ್ತು. ನಂತರ ಪರಿಶೀಲಿಸಿದಾಗ ಸ್ಯಾಂಡ್ವಿಚ್ ಒಳಗೆ ಸೀಗಡಿ ತುಂಡುಗಳು ಕಂಡುಬಂದವು ಎಂದು ಅವರು ಹೇಳಿದ್ದಾರೆ. ಆ ದಿನ ನಿಶಾ ಪ್ಯಾರಿಸ್ ಪಾಣಿನಿ ಔಟ್ಲೆಟ್‌ಗೆ ಭೇಟಿಯಾಗಿದಾಗ, ವ್ಯವಸ್ಥಾಪಕರು ತಪ್ಪು ಒಪ್ಪಿಕೊಂಡರೂ ಪರಿಹಾರ ನೀಡಲಿಲ್ಲ.

ನಿಶಾ ಜುಲೈ 20ರಂದು ಸ್ವಿಗ್ಗಿ ಮತ್ತು ಪ್ಯಾರಿಸ್ ಪಾಣಿನಿ ಸಂಸ್ಥೆಗೆ ನೋಟಿಸ್ ಕಳುಹಿಸಿದರು, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗಸ್ಟ್ 22ರಂದು ಅವರು ಸೇವೆಯಲ್ಲಿನ ಕೊರತೆ ಮತ್ತು ನಂಬಿಕೆ ದ್ರೋಹದ ಹಿನ್ನೆಲೆಯಲ್ಲಿ ಕೋರ್ಟ್‌ನಲ್ಲಿ ದೂರು ದಾಖಲಿಸಿದರು, 2 ಲಕ್ಷ ರೂ. ಪರಿಹಾರ ಕೇಳಿದರು. ಗ್ರಾಹಕರ ನ್ಯಾಯಾಲಯವು ಸ್ವಿಗ್ಗಿ ಮತ್ತು ಪ್ಯಾರಿಸ್ ಪಾಣಿನಿ ವಿರುದ್ಧ ನಿರ್ಲಕ್ಷ್ಯದ ಆರೋಪದಲ್ಲಿ ನಿಶಾ ಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ಈ ಪ್ರಕರಣವು ಗ್ರಾಹಕರ ಹಕ್ಕುಗಳು ಮತ್ತು ಆಹಾರದ ಸರಳತೆ, ಸಸ್ಯಾಹಾರ ಅಥವಾ ಖಾದ್ಯ ಆಯ್ಕೆಯ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಗ್ರಾಹಕರಿಗೆ ತಕ್ಕ ಸೇವೆ ನೀಡುವುದು, ಸರಿಯಾದ ಮಾಹಿತಿ ನೀಡುವುದು ಮತ್ತು ನಂಬಿಕೆ ಕಾಯ್ದುಕೊಳ್ಳುವುದು ಅಗತ್ಯವೆಂದು ನ್ಯಾಯಾಲಯ ಒತ್ತಿಹೇಳಿದೆ.

Leave a Reply

Your email address will not be published. Required fields are marked *