BBMP
Loading ...

BBMP Tax

ಬೆಂಗಳೂರು: ಬೆಂಗಳೂರಿನ ಆಸ್ತಿದಾರರಿಗೆ ಒಟಿಎಸ್ (ಒಂದು ಬಾರಿ ಪರಿಹಾರ ಯೋಜನೆ – OTS ) ಯೋಜನೆಯ ಲಾಭವನ್ನು ಪಡೆದುಕೊಳ್ಳುವುದಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿದೆ. ಈ ಅವಧಿಯ ಒಳಗಾಗಿ ನೀವು ಆಸ್ತಿ ತೆರಿಗೆ ಪಾವತಿ ಮಾಡದೆ ಇದ್ದರೆ, ಡಿಸೆಂಬರ್ 1ರಿಂದ ನೀವು ಎರಡು ಪಟ್ಟು ಅಥವಾ ಅದಕ್ಕಿಂತಲೂ ಹೆಚ್ಚು ಪಾವತಿ ಮಾಡಬೇಕಾಗುತ್ತದೆ. ಹಾಗಾದರೆ ಏನಿದು ಒಟಿಎಸ್ ಇದರ ಪ್ರಯೋಜನವನ್ನು ನೀವು ಏಕೆ ಪಡೆದುಕೊಳ್ಳಬೇಕು ಹಾಗೂ ಪಾವತಿ ಮಾಡದಿದ್ದರೆ ಏನಾಗಲಿದೆ ಎನ್ನುವ ವಿವರ ಇಲ್ಲಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ( ಬಿಬಿಎಂಪಿ) ಪಾಲಿಕೆಯು ಬೆಂಗಳೂರಿನ ಆಸ್ತಿದಾರರಿಗೆ ವಿಶೇಷವದ ಸೌಲಭ್ಯವೊಂದನ್ನು ಕೊಟ್ಟಿತ್ತು. ಆ ಸೌಲಭ್ಯ ಮುಕ್ತಾಯವಾಗುವುದಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಅವಧಿಯ ಒಳಗೆ ನೀವು ತೆರಿಗೆ ಪಾವತಿ ಮಾಡದೆ ಇದ್ದರೆ, ನಿಮಗೆ ಸಂಕಷ್ಟ ಫಿಕ್ಸ್‌. ಹೌದು ಆಸ್ತಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಒಟಿಎಸ್ ಅಂದರೆ ಒಂದು ಬಾರಿ ಪರಿಹಾರ ಯೋಜನೆಯನ್ನು ಪರಿಚಯಿಸಲಾಗಿತ್ತು.

ಈ ಮೂಲಕ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಂದು ಬಾರಿ ಪರಿಹಾರ ಯೋಜನೆಯ ಮೂಲಕ ಆಸ್ತಿ ತೆರಿಗೆಯ ಬಾಕಿದಾರರಿಗೆ ಬಡ್ಡಿ ಹಾಗೂ ದಂಡ ಮನ್ನಾ ಮಾಡಲಾಗುತ್ತಿದೆ. ಆದರೆ, ಈ ವಿಶೇಷ ಆಫರ್ ಇನ್ನು ಕೇವಲ ನಾಲ್ಕು ದಿನಗಳಲ್ಲಿ ಮುಕ್ತಾಯವಾಗಲಿದೆ. ಈ ಯೋಜನೆಯನ್ನು ಬೆಂಗಳೂರಿನ ಆಸ್ತಿದಾರರು ಉಪಯೋಗಿಸಿಕೊಳ್ಳದೆ ಇದ್ದರೆ, ದಂಡ ಹಾಗೂ ನಷ್ಟ ಎರಡೂ ಆಗಲಿದೆ.

ಡಿಸಂಬರ್‌ 1ನೇ ತಾರೀಖಿನಿಂದ ಪಾವತಿ ಮಾಡುವವ ಆಸ್ತಿದಾರರಿಗೆ ಬಾಕಿ ಆಸ್ತಿ ತೆರಿಗೆ ಮೊತ್ತವು ಎರಡು ಪಟ್ಟಿಗಿಂತಲೂ ಹೆಚ್ಚಾಗಲಿದೆ ಎಂದು ಈಗಾಗಲೇ ಬಿಬಿಎಂಪಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಆಸ್ತಿ ತೆರಿಗೆ ಬಾಕಿ ಮೊತ್ತವನ್ನು ಕೂಡಲೇ ಪಾವತಿ ಮಾಡದೆ ಇದ್ದರೆ ನೀವು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದೀರಿ ಎಂದೂ ಎಚ್ಚರಿಸಿದೆ. ಹೀಗಾಗಿ, ನೀವು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರೆ ಕೂಡಲೇ ಪಾವತಿಸಿ.

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ಮಾಡುವುದು ಹೇಗೆ ?
ಇನ್ನು ನೀವು ಆನ್‌ಲೈನ್‌ ಹಾಗೂ ಆಫ್‌ಲೈನ್‌ನ ಮೂಲಕ ಅತ್ಯಂತ ಸರಳವಾಗಿ ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೆ ಅವಕಾಶ ಇದೆ. ಬಿಬಿಎಂಪಿಯ BBMPtax.karnataka.gov.in ಗೆ ಭೇಟಿ ನೀಡುವ ಮೂಲಕ ನೀವು ತೆರಿಗೆ ಪಾವತಿಸಬಹುದಾಗಿದೆ.

4 ಸಾವಿರ ಕೋಟಿ ತೆರಿಗೆ ಸಂಗ್ರಹ ಗುರಿ
ಇನ್ನು ಬೆಂಗಳೂರಿನಲ್ಲಿ ಒಟಿಎಸ್ ಗಡುವು ಮುಕ್ತಾಯವಾಗುವುದರ ಒಳಗಾಗಿ 4 ಸಾವಿರ ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ ಒಟಿಎಸ್‌ ಅನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ. ಹೀಗಾಗಿ ಬೆಂಗಳೂರಿನ ಆಸ್ತಿ ಮಾಲೀಕರು ಈಗಲೇ ಈ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಕೊನೆಯ ಕ್ಷಣದ ವರೆಗೆ ಕಾಯಬಾರದು ಎಂದು ಅವರು ಹೇಳಿದ್ದಾರೆ.

ಕೊನೆಯ ದಿನ ಸರ್ವರ್‌ ಸಮಸ್ಯೆ ಸಾಧ್ಯತೆ: ಸಾಮಾನ್ಯವಾಗಿ ಈ ರೀತಿ ಕೊನೆಯ ದಿನಗಳಲ್ಲಿ ಹಲವರು ಸೈಟ್‌ಗೆ ಎಂಟ್ರಿ ಕೊಡುವುದರಿಂದ ಸರ್ವರ್‌ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಬೆಂಗಳೂರಿನ ಆಸ್ತಿದಾರರು ಕೂಡಲೇ ಆಸ್ತಿ ತೆರಿಗೆ ಪಾವತಿ ಮಾಡಿ ಕೊನೆಯ ಕ್ಷಣದಲ್ಲಿ ಆಗುವ ಸಮಸ್ಯೆಗಳನ್ನು ತಪ್ಪಿಸುವುದು ಉತ್ತಮ.

ಇಂದಿರಾ ಕ್ಯಾಂಟೀನ್​ಗೆ ಬಂದ ಸಚಿವ ರಹೀಂ ಖಾನ್ ಮೆಚ್ಚಿಸಲು ಹೋಟೆಲ್ ಊಟ: ವಿವಾದ

Leave a Reply

Your email address will not be published. Required fields are marked *