ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿವೇಶನಗಳು ಹಾಗೂ ಮನೆ ಬಾಡಿಗೆ ಗಗನಕ್ಕೇರುತ್ತಲೇ ಇದೆ. ಅದರಲ್ಲೂ ನಗರದ ಕೆಲವು ಪ್ರದೇಶಗಳಂತೂ ಕೊಟ್ಯಾಧಿಪತಿಗಳಿಗೆ ಅಂತಲೇ ಮೀಸಲಾಗಿಬಿಟ್ಟಿವೆ. ಈ ನಡುವೆಯೂ ತುಂಬಾ ಜನರಿಗೆ ಬೆಂಗಳೂರಲ್ಲಿ ಆಸ್ತಿ ಹೊಂದಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಲು ಅಡ್ಡದಾರಿಗಿಳಿದಿರುವ ಉದಾಹರಣೆಗಳಿವೆ. ಅಂತಹವರಿಗೆ ಇದೀಗ ಬಿಎಂಪಿ ಬಿಗ್ ಶಾಕ್ವೊಂದನ್ನು ನೀಡಿದೆ.
ಬೆಂಗಳೂರಿನಲ್ಲಿ ನಿವೇಶನ ಪಡೆದವರು ಬಿಬಿಎಂಪಿಯಲ್ಲಿ ಬಿ ಖಾತಾ ಅಥವಾ ಅಕ್ರಮವಾಗಿ ಅಧಿಕಾರಿಗಳ ಅಡ್ಜೆಸ್ಟ್ಮೆಂಟ್ ಮೂಲಕ ಎ ಖಾತಾ ಮಾಡಿಸಿಕೊಂಡಿರುವವರ ಸ್ವತ್ತುಗಳಿಗೆ ಇದೀಗ ಸಂಕಷ್ಟ ಬಂದೊದಗಿದೆ.
ಬೆಂಗಳೂರು ನಗರದ 8 ವಲಯಗಳ ವ್ಯಾಪ್ತಿಯಲ್ಲಿ ಬಿ ಖಾತೆಯ 9,736 ಸ್ವತ್ತುಗಳಿಗೆ ಅಕ್ರಮವಾಗಿ ನೀಡಲಾಗಿದ್ದ ಎ ಖಾತಾ ಪ್ರಮಾಣ ಪತ್ರ ರದ್ದುಪಡಿಸಿರುವುದಕ್ಕೆ ಬಿಬಿಎಂಪಿಗೆ ಸೂಚನೆ ನೀಡಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬಿ ಖಾತಾ ಸ್ವತ್ತುಗಳಿಗೆ ಇಲ್ಲ ಎ ಅಥವಾ ಇ ಖಾತಾ, ಕಂದಾಯ ಇಲಾಖೆಯ ಉಪವಿಭಾಗದ ಕಚೇರಿಯಲ್ಲಿ ನಮೂನೆ ಎ ಅಡಿಯಲ್ಲಿ ಅನಧಿಕೃತವಾಗಿ ದಾಖಲಾಗಿರುವ ಸ್ವತ್ತುಗಳನ್ನು ರದ್ದುಪಡಿಸಲು ಬಿಬಿಎಂಪಿ ನಿರ್ಧಾರ ಮಾಡಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 9,736 ಸ್ವತ್ತುಗಳು ಅನಧಿಕೃತವಾಗಿ ಎ ಖಾತಾ ಪಡೆದಿದ್ದಾರೆ. ಸ್ವತಃ ಪಾಲಿಕೆ ಸಹಾಯಕ ಕಂದಾಯ ಅಧಿಕಾರಿಗಳು ಲಂಚ ಪಡೆದು ಅನಧಿಕೃತವಾಗಿ ಎ ಖಾತಾ ಮಾಡಿಸಿ ಕೊಟ್ಟಿದ್ದರು. ಈ ಅಕ್ರಮದಲ್ಲಿ ಪಾಲಿಕೆ ಟೌನ್ ಪ್ಲಾನಿಂಗ್ ಅಧಿಕಾರಿಗಳು ಭಾಗಿಯಾಗಿದ್ದರು ಎಂದು ತನಿಖೆ ವೇಳೆ ಬಟಾ ಬಯಲಾಗಿದೆ.
ಇಂತಹ ಸ್ವತ್ತುಗಳು ಪತ್ತೆ ಆಗಿದ್ದು, ಪಾಲಿಕೆ ಹಿರಿಯ ಅಧಿಕಾರಿಗಳ ವರ್ಗ ಯಾವುದೇ ಖಾತೆ ನೀಡದಿರಲು ನಿರ್ಧಾರ ಮಾಡಿದೆ. ಈಗಾಗಲೇ ಬಿ ಖಾತಾ ಸ್ವತ್ತುಗಳು ಎ ಖಾತಾ ಹೆಸರಲ್ಲಿರುವ 9,736 ಸ್ವತ್ತುಗಳ ಖಾತೆ ಕೂಡ ರದ್ದು ಮಾಡಲು ಪಾಲಿಕೆ ನಿರ್ಧರಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
ನಾಗರಿಕರಿಂದ ಸಲಹೆಗಳ ಸಂಗ್ರಹ: ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯ ಕುರಿತು ಎರಡನೇ ದಿನವಾದ ಮಂಗಳವಾರ ಸಾರ್ವಜನಿಕ ಸಮಾಲೋಚನೆ ನಡೆದಿದ್ದು, ಈ ವೇಳೆ ಬೆಂಗಳೂರು ದಕ್ಷಿಣದ ಬೊಮ್ಮನಹಳ್ಳಿ ರಾಜರಾಜೇಶ್ವರಿ ನಗರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯ ಸೇರಿದಂತೆ 4 ವಲಯಗಳ ನಾಗರಿಕರಿಂದ ಸಲಹೆಗಳನ್ನು ಸಂಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗ್ರೇಟರ್ ಬೆಂಗಳೂರು ಆಡಳಿತ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರು, ಕರ್ನಾಟಕ ವಿಧಾನಸಭೆಯ ಕರ್ನಾಟಕ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷ ರಿಜ್ವಾನ್ ಅರ್ಷದ್, ನಗರದ ಬೆಂಗಳೂರು ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಸಲಹೆಗಳನ್ನು ಸಂಗ್ರಹಿಸಲಾಗುತ್ತಿದೆ. ಉತ್ತಮ ಆಡಳಿತಕ್ಕಾಗಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ಹಿತಾಸಕ್ತಿಗಳ ಬಗ್ಗೆ ತಿಳಿದಿರುವ ನಾಗರಿಕರಿಂದ ಸಲಹೆಗಳನ್ನು ತೆಗೆದುಕೊಳ್ಳಲಾಗುತ್ತಿದ್ದು, ಮಸೂದೆಯಲ್ಲಿ ಈ ಅಂಶಗಳನ್ನು ಸೇರಿಸಲಾಗುವುದು. ಅಧಿಕಾರಿಗಳು ಮತ್ತು ತಜ್ಞರು ವಿವಿಧ ರಾಜ್ಯಗಳು ಮತ್ತು ದೇಶಗಳ ಆಡಳಿತವನ್ನು ಅಧ್ಯಯನ ಮಾಡಿದ ನಂತರ ಈ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ನಗರ ಆಡಳಿತಕ್ಕೆ ಹೊಸ ರೂಪ ನೀಡಬೇಕು. ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈಗಾಗಲೇ 1.50 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಇದಲ್ಲದೆ, 1 ಕೋಟಿಗೂ ಹೆಚ್ಚು ವಾಹನಗಳಿವೆ. ಇದು ನಗರದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತಿದ್ದು, ಎಲ್ಲರಿಗೂ ಸೌಲಭ್ಯಗಳನ್ನು ಒದಗಿಸುವುದು ಕಷ್ಟಕರವಾಗಿಸುತ್ತದೆ. ಈ ನಿಟ್ಟಿನಲ್ಲಿ, ಜಿಬಿಎ ಕಾಯ್ದೆಯಡಿ, ನಗರಪಾಲಿಕೆಗಳಾಗಿ ಮರುವಿಂಗಡಣೆ ಮಾಡಿ ಅಲ್ಲಿ ಪೂರ್ಣ ಅಧಿಕಾರ ನೀಡಲು ಪ್ರಸ್ತಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.


