BBMP
Loading ...

ಬೆಂಗಳೂರು: ಬ್ಯಾಂಕ್​ ಆಫ್​ ಬರೋಡಾದ ಕಾಮಾಕ್ಷಿಪಾಳ್ಯ ಶಾಖೆ ನವೀಕೃತ ಶಾಖೆಯ ಉದ್ಘಾಟನೆ ಕಾರ್ಯಕ್ರಮ ಇಂದು (ಜುಲೈ 20) ನೆರವೇರಲಿದೆ.

ಇಂದು ಬೆಳಗ್ಗೆ 11.30 ಗಂಟೆಗೆ ಬೆಂಗಳೂರು ವಲಯದ ಮಹಾ ಪ್ರಬಂಧಕರು-ವಲಯ ಮುಖ್ಯಸ್ಥರಾದ ಶ್ರೀ ಇಂದರ್ ಮೋಹನ್ ಸಿಂಗ್ ಅವರ ಅಮೃತ ಹಸ್ತದಿಂದ ಕಾಮಾಕ್ಷಿಪಾಳ್ಯ ಶಾಖೆ ನವೀಕೃತ ಶಾಖೆಯ ಉದ್ಘಾಟನೆ ಕಾರ್ಯಕ್ರಮ ನೆರವೇರಲಿದೆ.

ಇದೇ ಸಂದರ್ಭದಲ್ಲಿ ಬೆಂಗಳೂರು ವಲಯದ ಉಪ ಮಹಾ ಪ್ರಬಂಧಕರು (ಸಿಎ) ಶ್ರೀ ವಿವೇಕ್ ಕುಮಾರ್ ಚೌಧರಿ, ಉಪ ಮಹಾ ಪ್ರಬಂಧಕರು (ಐಡಿ) ಶ್ರೀ ಮಾನಸ್ ರಂಜನ್ ಮಿಶ್ರಾ, ಬೆಂಗಳೂರು ಉತ್ತರ-ಕ್ಷೇತ್ರದ ಉಪ ಮಹಾ ಪ್ರಬಂಧಕರು (ಎರ್.ಎಚ್), ಶ್ರೀ ಭರತ್ ಭೂಷಣ್ ಭಾಸ್ಟರ್ ಮತ್ತು ಸಹಾಯಕ ಮಹಾ ಪ್ರಬಂಧಕರಾದ ಶ್ರೀ. ಅಲೋಕ್ ಕುಮಾರ್ ಉಪಸ್ಥಿತರಿರಲಿದ್ದಾರೆ.

ಹೊಸ ಆವರಣದ ಕಾಮಾಕ್ಷಿಪಾಳ್ಯ ಶಾಖೆಯ ಉದ್ಘಾಟನೆಗೆ ನಿಮ್ಮ ಉಪಸ್ಥಿತಿಯನ್ನು ನಾವು ಹೃತ್ಪೂರ್ವಕವಾಗಿ ಕೋರುತ್ತೇವೆ ಎಂದು ಬ್ಯಾಂಕ್​ ಆಫ್​ ಬರೋಡಾದ ಕಾಮಾಕ್ಷಿಪಾಳ್ಯ ಶಾಖೆಯ ಹಿರಿಯ ವ್ಯವಸ್ಥಾಪಕರಾದ ಶ್ರೀ ಸೂರ್ಯ ಕುಮಾರ್ ವಿನಂತಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಸ್ಥಗಿತಗೊಂಡಿದ್ದ 11 ಇಂದಿರಾ ಕ್ಯಾಂಟೀನ್‌ಗಳನ್ನು ಪುನಾರಂಭಿಸಿದ ಬಿಬಿಎಂಪಿ

Leave a Reply

Your email address will not be published. Required fields are marked *