BBMP
Loading ...

images

ಬೆಂಗಳೂರು:- ಇಂದು ವಿಧಾನಸೌಧದ ಪಶ್ಚಿಮ ಭಾಗದ ಉದ್ಯಾನದಲ್ಲಿ ಬಿಯರ್ ಬಾಟಲ್ ಪತ್ತೆಯಾಗಿದೆ. ಪೊಲೀಸರ ಕಣ್ಣು ತಪ್ಪಿಸಿ ಬಿಯರ್ ತಂದು ಸೇವಿಸಿ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ನಿನ್ನೆಯಷ್ಟೇ ಸರ್ಕಾರಿ ಕಚೇರಿ ಆವರಣದ ಸುತ್ತಮುತ್ತ ಯಾವುದೇ ಮದ್ಯ ಮತ್ತು ಮಾದಕ ವಸ್ತುಗಳನ್ನು ತೆಗೆದುಕೊಂಡು ಹೋಗದಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಇದರ ಬೆನ್ನೆಲ್ಲೇ ಇಂದು ವಿಧಾನಸೌಧದ ಪಶ್ಚಿಮ ಭಾಗದ ಗಾರ್ಡನ್​​ನಲ್ಲಿ ಬಿಯರ್ ಬಾಟಲ್ ಬಿದ್ದಿರುವುದು ಕಂಡುಬಂದಿದೆ. ಪೊಲೀಸರ ಕಣ್ತಪ್ಪಿಸಿ ಬಿಯರ್​ ಬಾಟಲ್ ತಂದಿರುವ ಸಾಧ್ಯತೆ ಇದ್ದು, ಗಾರ್ಡನ್​ನಲ್ಲಿ ಬಿಯರ್ ಸೇವಿಸಿ ಬಾಟಲ್ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *