ಬೆಂಗಳೂರು: ಹೈಕೋರ್ಟ್ ವಿಭಾಗದಿಂದ ಕಾರ್ಯಕಾರಿ ಸಮಿತಿ ಸಮಿತಿ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ವಕೀಲರಾದ ಆರ್.ಬಿ. ಸದಾಶಿವಪ್ಪ ಅವರ ಸಹೋದ್ಯೋಗಿ ಶ್ರೀಮತಿ ಹರಿಣಿ ಬಿ.ಆರ್. ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಹರಿಣಿ ಅವರ ಗೆಲುವಿಗೆ ಆರ್. ಬಿ. ಸದಾಶಿವಪ್ಪ ಅವರು ಸೇರಿದಂತೆ ಅವರ ಆಪ್ತ ವಲಯ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದೆ. ಈ ಗೆಲುವಿಗೆ ಹರಿಣಿ ಅವರು ಅರ್ಹರಾಗಿದ್ದು, ಅವರಿಂದ ಒಳ್ಳೆಯ ಕೆಲಸಗಳಾಗಲಿ ಎಂದು ಎಲ್ಲರು ಶುಭ ಹಾರೈಸಿದ್ದಾರೆ.
ಹರಿಣಿ ಅವರು ಸಮರ್ಪಿತ ಮತ್ತು ಭಾವೋದ್ರಿಕ್ತ ವ್ಯಕ್ತಿಯಾಗಿ, ನ್ಯಾಯದ ತತ್ವಗಳನ್ನು ಎತ್ತಿಹಿಡಿಯಲು ಮತ್ತು ಸಮುದಾಯಕ್ಕೆ ಸೇವೆ ಸಲ್ಲಿಸಲು ಬದ್ಧರಾಗಿದ್ದಾರೆ. ಒಳ್ಳೆಯ ವ್ಯಕ್ತಿಗಳು ಇರುವ ಕಡೆ ಒಳ್ಳೆಯ ಕೆಲಸಗಳೇ ನಡೆಯುತ್ತವೆ ಎಂಬುದನ್ನು ವಿಶೇಷವಾಗಿ ಹೇಳಬೇಕಾಗಿಲ್ಲ. ವಕೀಲ ವೃತ್ತಿ ಮಾಡುತ್ತಿರುವ ಹರಿಣಿ ಅವರು ತಮ್ಮ ನಡೆ ನುಡಿಯಿಂದಲೇ ಬಹುತೇಕರಿಗೆ ಬೇಕಾದಂತಹ ವ್ಯಕ್ತಿಯಾಗಿದ್ದಾರೆ. ಯಾರೊಂದಿಗೂ ಸಿಡುಕದೇ ನಯವಿನಯದಿಂದಲೇ ಮಾತನಾಡಿಸುವ ಹರಿಣಿ ಅವರು ಮಾನವೀಯ ಗುಣ ಹೊಂದಿರುವ ವ್ಯಕ್ತಿ. ಹೀಗಾಗಿ ಅವರ ಗೆಲುವು ಒಳ್ಳೆಯತನ ಗೆಲುವಾಗಿದೆ.
ಟಿಕೆಟ್ ದರ ಏರಿಕೆ ಎಫೆಕ್ಟ್: ವೀಕೆಂಡ್‌ನಲ್ಲಿಯೂ ನಮ್ಮ ಮೆಟ್ರೋ ಖಾಲಿ ಖಾಲಿ


