BBMP
Loading ...

Darshan

ಬೆಂಗಳೂರು : ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೆ ಒಳಗಾಗಿ ಮೂರು ತಿಂಗಳು ಕಳೆದಿದೆ. ಈವರೆಗೆ ಅವರ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿಲ್ಲ. ಒಂದೊಮ್ಮೆ ಅರ್ಜಿ ಸಲ್ಲಿಕೆ ಆದರೂ ಜಾಮೀನು ಸಿಗೋದು ಅಷ್ಟು ಸುಲಭದಲ್ಲಿ ಇಲ್ಲ ಎಂಬ ಅಭಿಪ್ರಾಯ ಇದೆ. ಇದಕ್ಕೆ ಕಾರಣ ಅವರು ಮಾಡಿಕೊಳ್ಳುತ್ತಿರುವ ಎಡವಟ್ಟುಗಳು. ದರ್ಶನ್​ ಜಾಮೀನಿಗೆ ಆಕ್ಷೇಪಣೆ ಸಲ್ಲಿಸಲು ಪೊಲೀಸರಿಗೆ ದಿನಕ್ಕೊಂದು ಅಸ್ತ್ರ ಸಿಗುತ್ತಿದೆ. ಈ ಸಮಸ್ಯೆಗಳನ್ನು ಸ್ವತಃ ದರ್ಶನ್ ಅವರೇ ಸೃಷ್ಟಿಸಿಕೊಳ್ಳುತ್ತಿದ್ದಾರೆ.

ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಗೆ ಆತನ ಪರ ವಕೀಲರು ಪತ್ರ ಬರೆದಿದ್ದು, ಯಾವುದೇ ರೀತಿಯಾದಂತಹ ಕಿರಿಕ್ ಮಾಡಿಕೊಳ್ಳಬೇಡಿ.ಪದೇಪದೇ ಕಿರಿಕ್ ಮಾಡಿಕೊಂಡರೆ ಜಾಮೀನಿಗೆ ತೊಂದರೆ ಆಗುತ್ತದೆ ಎಂದು ಜೈಲಿನಲ್ಲಿರುವ ನಟ ದರ್ಶನ್ಗೆ ವಕೀಲರು ಪತ್ರ ಬರೆದು ನೀತಿಪಾಠ ಹೇಳಿದ್ದಾರೆ.

ಹೌದು ದರ್ಶನ್ ಇತ್ತೀಚಿಗೆ ಜೈಲು ಸೇರಿದರೂ ಒಂದಾದಮೇಲೆ ಒಂದರಂತೆ ವಿವಾದಗಳನ್ನು ಮಾಡಿಕೊಳ್ಳುತ್ತಲೇ ಇದ್ದಾರೆ. ಅವರು ಕೇಂದ್ರ ಕಾರಾಗೃಹದಲ್ಲಿ ಇದ್ದಾಗ ಸಿಗರೇಟ್ ಸೇದಿ, ಕಾಫಿ ಕುಡಿಯುತ್ತಿರುವ ಫೋಟೋ ವೈರಲ್ ಆಗಿತ್ತು. ಇದರಿಂದ ಅವರು ಬಳ್ಳಾರಿ ಜೈಲಿಗೆ ಎತ್ತಂಗಡಿ ಆಗುವಂತೆ ಆಯಿತು. ಈಗ ಬಳ್ಳಾರಿಯಲ್ಲೂ ಅವರು ವಿವಾದ ಮಾಡಿಕೊಂಡಿದ್ದಾರೆ. ಅವರು ಮಾಧ್ಯಮಗಳಿಗೆ ಅಶ್ಲೀಲ ಸನ್ನೆ ತೋರಿಸಿದ್ದರು ಎನ್ನಲಾಗಿತ್ತು. ಈ ವಿಚಾರವಾಗಿ ಅವರಿಗೆ ವಕೀಲರಿಂದ ಕಿವಿಮಾತು ಬಂದಿದೆ.

ಜೈಲಿನಲ್ಲಿ ವಿವಾದ ಮಾಡಿಕೊಳ್ಳಬೇಡಿ. ಪದೇಪದೆ ಕಿರಿಕ್ ಮಾಡಿಕೊಂಡರೆ ಜಾಮೀನಿ​ಗೆ ಸಮಸ್ಯೆ ಆಗುತ್ತದೆ. ಕಾನೂನು ಹೋರಾಟಕ್ಕೆ ತೊಡಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಕ್ಯಾಮರಾ ಕಂಡು ದರ್ಶನ್ ದುರ್ನಡತೆ ತೋರಿದ್ದರು. ಅಲ್ಲದೇ ಟಿವಿಗಾಗಿ ಸಿಬ್ಬಂದಿ ಜತೆ ಪದೇಪದೇ ಕಿರಿಕ್ ಆಗುತ್ತಿತ್ತು. ಸದ್ಯ ಜೈಲಿಗೆ ಬಂದ ಪತ್ರವನ್ನು ಸಿಬ್ಬಂದಿ ದರ್ಶನ್​ಗೆ ನೀಡಿದ್ದಾರೆ.

ಬಿಬಿಎಂಪಿ ಚುನಾವಣೆ ಬಗ್ಗೆ ಗಮನಹರಿಸಿದ ಸರ್ಕಾರ: ದಿಟ್ಟತನ ತೋರಲಿ ಚುನಾವಣಾ ಆಯೋಗ

arshan

Leave a Reply

Your email address will not be published. Required fields are marked *