BBMP
Loading ...

Vokkaliga Sangha

ಬೆಂಗಳೂರು: ಮೂರು ವರ್ಷದಲ್ಲಿ ರಾಜ್ಯ ಒಕ್ಕಲಿಗರ ಸಂಘಕ್ಕೆ 4ನೇ ಬಾರಿ ಅಧ್ಯಕ್ಷರು ಬದಲಾಗಿದ್ದಾರೆ. ನೂತನ ಅಧ್ಯಕ್ಷರಾಗಿ ಬಿ.ಕೆಂಚಪ್ಪಗೌಡ, ಉಪಾಧ್ಯಕ್ಷರಾಗಿ ಎಲ್​. ಶ್ರೀನಿವಾಸ್​, ಡಾ.ಕೆ.ವಿ,ರೇಣುಕಾಪ್ರಸಾದ್​, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಕೋನಪ್ಪರೆಡ್ಡಿ ಹಾಗೂ ಸಹಾಯಕ ಕಾರ್ಯದರ್ಶಿಯಾಗಿ ಆರ್​.ಹನುಮಂತರಾಯಪ್ಪ, ಖಜಾಂಚಿಯಾಗಿ ನಲ್ಲಿಗೆರೆ ಬಾಲು ಆಯ್ಕೆಯಾಗಿದ್ದಾರೆ.

ಕೆ.ಆರ್​.ರಸ್ತೆಯ ಸಂಘದ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯಾದರು. ಸಂಘದ ಚುನಾವಣೆಯಲ್ಲಿ ಡಿಸಿಎಂ ಡಿಕೆಶಿ ಬೆಂಬಲಿತ ಕೆಂಚಪ್ಪಗೌಡ 21 ಸದಸ್ಯರ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರೆ, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಬೆಂಬಲಿತ ಡಾ.ಅಂಜಿನಪ್ಪಗೆ 14 ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದರು. ಈ ಮೂಲಕ ಡಿಕೆಶಿ ಮೇಲುಗೈ ಸಾಧಿಸಿದರೆ, ಎಚ್​ಡಿಕೆ ಹಿನ್ನಡೆ ಉಂಟಾಗಿದೆ ಎಂದು ರಾಜಕೀಯದಲ್ಲಿ ಚರ್ಚಿತವಾಗುತ್ತಿದೆ.

ಶಾಸಕ ಸಿ.ಎನ್​.ಬಾಲಕೃಷ್ಣ ಸಂಘದ ಹಾಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.2021ರ ಡಿ.15ರಂದು ಸಂಘದ 35 ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯಿತು. 2022ರ ಜ.5ರಂದು ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿತ್ತು. ಈ ವೇಳೆ ಸಂಘದ ಆಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಮತ್ತು ಕೆಂಚಪ್ಪಗೌಡ ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟಿತ್ತು. ಅಂತಿಮವಾಗಿ 19 ಮತ ಪಡೆದ ಬಾಲಕೃಷ್ಣ ಬಣ ಅಧಿಕಾರಕ್ಕೇರಿತು. ಮೊದಲ ಬಾರಿ ಅಧ್ಯಕ್ಷರಾಗಿ ಶಾಸಕ ಸಿ.ಎನ್​.ಬಾಲಕೃಷ್ಣ ಒಂದೂವರೆ ವರ್ಷ ಕಾಲ ಕಾರ್ಯನಿರ್ವಹಿಸಿದ್ದರು.

ಬಳಿಕ, ಅನಿರೀಕ್ಷಿತ ಬೆಳವಣಿಗೆಯಲ್ಲಿ ಸಂಘದ ಅಧ್ಯಕ್ಷ ವಿರುದ್ಧ ಅವಿಶ್ವಾಸ ಮಂಡನೆ ಮಂಡಿಸಿದ್ದ ಬಿ. ಕೆಂಚಪ್ಪಗೌಡ ಬಣ, ಸಿಟಿ ಸಿವಿಲ್​ ಕೋರ್ಟ್​ಗೆ ಹೋಗಿದ್ದರು. ಕಾನೂನಿನ ಪ್ರಕಾರ ಪದಾಧಿಕಾರಿಗಳ ಆಯ್ಕೆಗೆ ಸಿಟಿ ಸಿವಿಲ್​ ಕೋರ್ಟ್​ ತೀರ್ಪು ನೀಡಿತ್ತು. ಅದರಂತೆ, ನೂತನ ಅಧ್ಯಕ್ಷ, ಎರಡು ಉಪಾಧ್ಯಕ್ಷ ಹುದ್ದೆ, ಖಜಾಂಚಿ, ಕಾರ್ಯದರ್ಶಿ ಮತ್ತು ಉಪ ಕಾರ್ಯದರ್ಶಿ ಹುದ್ದೆಗೆ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆದಿತ್ತು. ಇದರಲ್ಲಿ ಕೆಂಚಪ್ಪಗೌಡ ಬಣ ಗೆಲುವಿನ ನಗೆ ಬೀರಿತ್ತು.ಬಳಿಕ, ಅಧಿಕಾರದ ಆಸೆಗಾಗಿ ಮತ್ತೆ ಕಿತ್ತಾಟ ನಡೆಯಿತು. ಇದರಲ್ಲಿ ಆರ್​. ಹನುಮಂತರಾಯಪ್ಪ 3ನೇ ಬಾರಿ ಅಧ್ಯಕ್ಷರಾದರು. ಸ್ವಲ್ಪ ತಿಂಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ಹನುಮಂತರಾಯಪ್ಪ, ಅನಿರೀಕ್ಷಿತ ಬೆಳವಣಿಗೆಯಲ್ಲಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದರು. ಬಳಿಕ, ಅವಿಶ್ವಾಸ ರ್ನಿಣಯ ಮಂಡಿಸಿ ನಂತರ ನಡೆದ ಚುನಾವಣೆಯಲ್ಲಿ 4ನೇ ಬಾರಿ ಸಿ.ಎನ್​.ಬಾಲಕೃಷ್ಣ ಸಂಘಕ್ಕೆ ಅಧ್ಯಕ್ಷರಾದರು. ಇವರು ಸಹ ಸ್ವಲ್ಪ ತಿಂಗಳ ಕಾಲ ಅಧಿಕಾರ ನಡೆದಿದ್ದರು. ಈ ವೇಳೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ರ್ನಿಣಯ ಮಂಡಿಸಿ ನಡೆದ ಪದಾಧಿಕಾರಿಗಳ ಆಯ್ಕೆ ಚುನಾವಣೆಯಲ್ಲಿ ಬಿ. ಕೆಂಚಪ್ಪಗೌಡ,ಸಂಘಕ್ಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಸಂಘದಲ್ಲಿ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಸಮುದಾಯದ ಜನರಿಗೆ ಇರಿಸುಮುರಿಸು ಉಂಟಾಗಿದೆ. 2022ರ ಜನವರಿಯಲ್ಲಿ ಸಂದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ವಿಚಾರವು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ಶ್ರೀ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಅಂಗಳಕ್ಕೆ ತಲುಪಿತ್ತು. ಸಂಘದ 35 ನಿರ್ದೇಶಕರುಗಳು ಸ್ವಾಮೀಜಿಗೆ ಪತ್ರ ಬರೆದಿದ್ದರು. ಶ್ರೀಗಳ ಅಭಿಲಾಷೆಯಂತೆ ಒಕ್ಕಲಿಗ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡುವ ತೀರ್ಮಾನ ಹೊಂದಿದ್ದೇವೆ. ಸಂಘದ ಆಭ್ಯುದಯಕ್ಕಾಗಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಬೇಕು. ಸಂಘದ ಅಧ್ಯಕ್ಷ ಆಯ್ಕೆ ವಿಚಾರವನ್ನು ಸ್ವಾಮೀಜಿಯವರ ವಿವೇಚನಕ್ಕೆ ಬಿಡಲಾಗಿದೆ. ಸ್ವಾಮೀಜಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ ಎಂದು ಬರೆದ ಪತ್ರದಲ್ಲಿ ನಿರ್ದೇಶಕರು ಉಲ್ಲೇಖಿಸಿದ್ದರು. ಚುನಾವಣೆಯಲ್ಲಿ ಜಯ ಗಳಿಸಿರುವ ನಿರ್ದೇಶಕರು ಯಾವುದೇ ಕಾರಣಕ್ಕೂ ರೆಸಾರ್ಟ್​ ರಾಜಕೀಯ ಮಾಡಬಾರದು. ಸ್ವಾಮೀಜಿಯವರ ನೇತೃತ್ವದಲ್ಲಿ ಯಾರಿಗೆ ಯಾವ ಹುದ್ದೆ ಸಿಗುತ್ತದೆಯೋ ಅದನ್ನು ಸ್ವೀಕಾರ ಮಾಡೋಣ. ವಿನಾಕಾರಣ ಗುಂಪುಗಾರಿಕೆ ಮಾಡುವುದು ಬೇಡ. ಒಂದು ವೇಳೆ ಗುಂಪುಗಾರಿಕೆ ಅಥವಾ ರೆಸಾರ್ಟ್​ ರಾಜಕೀಯ ಮಾಡಿದರೆ ಸಮುದಾಯದ ಬಗ್ಗೆ ಜನರಿಗೆ ತಪ್ಪು ಸಂದೇಶ ಹೋಗಲಿದೆ.ಸ್ವಾಮೀಜಿ ನೇತೃತ್ವದಲ್ಲಿ ತೀರ್ಮಾನ ತೆಗೆದುಕೊಳ್ಳೋಣ ಎಂಬುದರ ಬಗ್ಗೆ ನಿರ್ದೇಶಕರು ತೀರ್ಮಾನಿಸಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸಂಘ ಮತ್ತು ಸಮುದಾಯದ ಶ್ರಯೋಭಿವೃದ್ಧಿಗೆ ಶ್ರಮಿಸಿಬೇಕಿದ್ದ ಕೆಲವರು, ಅಧಿಕಾರಕ್ಕಾಗಿ ಬಣ ಬಡಿದಾಟದಲ್ಲಿ ತೊಡಗಿದ್ದಾರೆ.

Leave a Reply

Your email address will not be published. Required fields are marked *