ಬೆಂಗಳೂರು: ಕಾಂಗ್ರೆಸ್ ಸರ್ಕಾರದಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಕುರಿತು ಸಾರ್ವಜನಿಕ ವಲಯದಲ್ಲಿ ಆಗಾಗಿ ಬೇಸರ ವ್ಯಕ್ತವಾಗುವುದನ್ನೂ ನೋಡಿದ್ದೇವೆ. ಅದು ಕೂಡ ಅನೇಕ ಸಂದರ್ಭದಲ್ಲಿ ಅತೀ ಹೆಚ್ಚು ಬಿಲ್ ಬರುವುದು. ಇನ್ನೂ ಕೆಲವು ಸಂದರ್ಭದಲ್ಲಿ ಗೃಹಜ್ಯೋತಿ ಅಪ್ಲೇ ಮಾಡುವಾಗ ಉಂಟಾದ ಸಮಸ್ಯೆಗಳು ಹೀಗೆ ನಾನಾ ಸಮಸ್ಯೆಗಗಳನ್ನು ಸಾರ್ವಜನಿಕರು ಅನುಭವಿಸಿರುವುದನ್ನು ನಾವು ನೋಡಿದ್ದೇವೆ. ಈ ನಡುವೆ ಕೆಲವರು ಮನೆ ಬದಲಾಯಿಸಿದ ಬಳಿಕ ಗೃಹಜ್ಯೋತಿ ಸೌಲಭ್ಯ ಪಡೆಯುವುದು ಹೇಗೆ ಎಂಬ ಗೊಂದಲ ಅನೇಕರಲ್ಲಿ ಇರುವುದನ್ನು ಕಾಣಬಹುದು.
ಇದಕ್ಕೆ ಸಂಬಂಧಿಸಿದಂತೆ ಮೊದಲಿದ್ದ ಮನೆಯ ಗೃಹಜ್ಯೋತಿಯನ್ನು ಡಿ ಲಿಂಕ್ ಮಾಡುವ ಮೂಲಕ ಹೊಸ ಮನೆಗೆ ಯಾವ ರೀತಿಯಾಗಿ ಗೃಹಜ್ಯೋತಿ ಪಡೆಯಬಹುದು ಎಂದು ಸ್ವತಃ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ (ಬೆಸ್ಕಾಂ) ಮಹತ್ವದ ಮಹಿತಿ ಒದಗಿಸಿದೆ.
ಮನೆ ಬದಲಾಯಿಸಿದ ಮೇಲೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಡಿ-ಲಿಂಕ್ ವ್ಯವಸ್ಥೆ ಇದೀಗ ಮತ್ತಷ್ಟು ಸುಲಭ. ನೀವೂ ಈ ಕೆಳಗೆ ನೀಡಿರುವ ಲಿಂಕ್‌ಗಳ ಮೂಲಕ ನೋಂದಾಯಿಸಿಕೊಳ್ಳಿ ಹಾಗೂ ಈ ಸೌಲಭ್ಯ ಪಡೆಯಿರಿ.
ಮನೆ ಬದಲಾಯಿಸಿದ ಮೇಲೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಡಿ-ಲಿಂಕ್ ವ್ಯವಸ್ಥೆ ಇದೀಗ ಮತ್ತಷ್ಟು ಸುಲಭ
ನೀವೂ ಈ ಕೆಳಗೆ ನೀಡಿರುವ ಲಿಂಕ್‌ಗಳ ಮೂಲಕ ನೋಂದಾಯಿಸಿಕೊಳ್ಳಿ ಹಾಗೂ ಈ ಸೌಲಭ್ಯ ಪಡೆಯಿರಿ.
ಸೇವಾಸಿಂಧು ಗ್ಯಾರೆಂಟಿ ಸ್ಕೀಮ್ ಪೋರ್ಟಲ್https://t.co/bsGvzlXT4x
ಅಥವಾ https://t.co/6H4Kymeims #BESCOM #GruhaJyothiScheme… pic.twitter.com/vi8EOmmgHl— Namma BESCOM | ನಮ್ಮ ಬೆಸ್ಕಾಂ (@NammaBESCOM) May 13, 2025
ಸುಪ್ರೀಂಕೋರ್ಟ್ ತೀರ್ಪು ಸಂಬಂಧ ಇಂಧನ ಇಲಾಖೆ, ಬಿಬಿಎಂಪಿಗೆ ಮಹತ್ವದ ಸೂಚನೆ ಕೊಟ್ಟ ಸರ್ಕಾರದ ಮುಖ್ಯ ಕಾರ್ಯದರ್ಶಿ


