ಮುಳಬಾಗಿಲು: ಬೆಸ್ಕಾಂ ವಿದ್ಯುತ್ ಗುತ್ತಿಗೆದಾರರ ಸಂಘದ ಭವನಕ್ಕೆ ಸರ್ಕಾರದಿಂದ ಒಂದು ನಿವೇಶನವನ್ನು ಮಂಜೂರು ಮಾಡಿಸಬೇಕೆಂದು ಸಂಘದ ಅಧ್ಯಕ್ಷ ಎಸ್.ಸಂಕೇತ್, ಶಾಸಕ ಸಮೃದ್ಧಿ ಮಂಜುನಾಥ್‌ರಿಗೆ ಮನವಿ ಮಾಡಿದರು.
ಬೆಸ್ಕಾಂ ವಿದ್ಯುತ್ ಗುತ್ತಿಗೆದಾರರ ಸಭೆಯಲ್ಲಿ ಮಾತನಾಡಿ, ಮುಳಬಾಗಿಲು ಬೆಸ್ಕಾಂ ಉಪ ವಿಭಾಗದಲ್ಲಿ ಲಾರಿ ಕೊರತೆ ಇರುವುದರಿಂದ ಕಳೆದ ಒಂದು ತಿಂಗಳಿಂದ ವಿದ್ಯುತ್ ಸಾಮಾಗ್ರಿಗಳನ್ನು ಸಾಗಿಸಲು ಸಮಸ್ಯೆ ಉಂಟಾಗಿದೆ ಜೊತೆಗೆ 25ಕೆವಿ ಟಿಸಿ ಸರಬರಾಜು ಇಲ್ಲದೇ ಇರುವುದರಿಂದ ಗ್ರಾಹಕರು ಪರದಾಡುವಂತಾಗಿದೆ ಜೊತೆಗೆ ಸಾಲದ ಸುಲಿಯಲ್ಲಿ ಸಿಲುಕಿದ್ದಾರೆಂದು ಆರೋಪಿಸಿದರು.
ವಿದ್ಯುತ್ ಕಾಮಗಾರಿಗಳಲ್ಲಿ ನೀಡುವಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಮೊದಲ ಆದ್ಯತೆ ನೀಡದೆ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಟೀಕಿಸಿದರಲ್ಲದೆ ಗುತ್ತಿಗೆದಾರರು ಸಭೆ
ಸಮಾರಂಭಗಳನ್ನು ನಡೆಸಲು ಸ್ವಂತ ಕಟ್ಟಡದ ಕೊರತೆ ಇರೋದ್ರಿಂದ ಈಗಾಗಲೇ ಶಾಸಕ ಸಮೃದ್ಧಿ ಮಂಜುನಾಥ್‌ರಿಗೆ ಸಂಘದಿಂದ ಉಚಿತ ನಿವೇಶನ ಹಾಗೂ ಭವನ ನಿರ್ಮಾಣಕ್ಕೆ ಮನವಿ ಸಲ್ಲಿಸಿರುವುದರಿಂದ ಸರ್ಕಾರದಿಂದ ಅವಶ್ಯಕತೆ ಇರುವ ಅನುದಾನವನ್ನು ನೀಡುವ ಭರವಸೆ ಸಿಕ್ಕಿದೆ ಎಂದು ಗುತ್ತಿಗೆದಾರ ಸಭೆಯಲ್ಲಿ ಅಧ್ಯಕ್ಷ ಎಸ್.ಸಂಕೇತ್ ತಿಳಿಸಿದರು.
ಸಂಘದ ಜಿಲ್ಲಾ ಕಾರ್ಯದರ್ಶಿ ರಾಮಕೃಷ್ಣಪ್ಪ, ಹಿರಿಯ ಗುತ್ತಿಗೆದಾರರಾದ ಕೃಷ್ಣಮೂರ್ತಿ, ನಂದಾ ರೆಡ್ಡಿ, ಪಿ.ಸಿ.ಮೋಹನ್, ಸಂಘದ ಉಪಾಧ್ಯಕ್ಷ ಏ.ತಮ್ಮಯ್ಯ, ಕಾರ್ಯದರ್ಶಿ ಎಸ್.ನಾಗೇಶ್, ಜಂಟಿ ಕಾರ್ಯದರ್ಶಿ ಅಶೋಕ್, ಖಜಾಂಚಿ ಶ್ರೀನಿವಾಸ್ ರೆಡ್ಡಿ, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್, ಗಂಗಾಧರ್, ವೆಂಕಟರಾಮ್ ಇದ್ದರು.
ಕರ್ನಾಟಕದಲ್ಲಿ ಇನ್ನೂ 2 ದಿನ ಭಾರೀ ಮಳೆ ಸಾಧ್ಯತೆ! ಈ ಜಿಲ್ಲೆಗಳಿಗೆ ಅಲರ್ಟ್ ಘೋಷಣೆ!


