BBMP
Loading ...

Solar-Pump-Set

ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಕುಸುಮ್-ಸಿ ಸೋಲಾರ್ ಯೋಜನೆ ಉದ್ಘಾಟಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.

ಸಬ್ಸಿಡಿ ಸೌರಶಕ್ತಿ ಚಾಲಿತ ನೀರಾವರಿ ಪಂಪ್‌ಗಳೊಂದಿಗೆ ರೈತರಿಗೆ ಬೆಂಬಲ ನೀಡಲು ಸರ್ಕಾರ ಮುಂದಾಗಿದೆ. ಜೂನ್ 11 ರಂದು ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಕುಸುಮ್-ಸಿ ಯೋಜನೆಯ ಅನುಷ್ಠಾನವನ್ನು ಉದ್ಘಾಟನೆಯನ್ನು ಮಾಡಲಾಗುತ್ತದೆ. ಇದು ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ (PM-Kusum)ಯೋಜನೆಯ ಒಂದು ಭಾಗವಾಗಿದೆ.

ಸರ್ಕಾರಿ ಭೂಮಿ ಲಭ್ಯವಿರುವಲ್ಲೆಲ್ಲಾ ಫಲಕಗಳನ್ನು ಅಳವಡಿಸಲಾಗುತ್ತಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಭೂಮಿಯನ್ನು ಹುಡುಕಿ ಕೆಲಸ ಪ್ರಾರಂಭಿಸಲು ನಿರ್ದೇಶವನನ್ನು ಸಹ ಇಂಧನ ಸಚಿವರು ಮಾಡಿದ್ಧಾರೆ. ಪಂಚಾಯತ್‌ಗಳು ಲಭ್ಯವಿರುವ ಭೂಮಿಯನ್ನು ಉಪಯುಕ್ತತಾ ಕಾರ್ಯಗಳಿಗೆ ಬಳಸಲು ಸಾಧ್ಯವಾಗುತ್ತದೆ ಎಂದು ವಿವರಿಸಿದ್ದಾರೆ.

ಕುಸುಮ್ –ಬಿ ಯೋಜನೆಯಡಿ ರೈತರು ಸ್ವಂತ ಜಾಗ ಹೊಂದಿದ್ದರೆ ಪಂಪ್ಸೆಟ್ ಗೆ ಸೋಲಾರ್ ಪ್ಯಾನಲ್ ಅಳವಡಿಸಿಕೊಳ್ಳಲು ಸರ್ಕಾರವೇ ಸಬ್ಸಿಡಿ ನೀಡುವುದರಿಂದ ಅನೇಕ ರೈತರು ಅಳವಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *