BBMP
Loading ...

Medicines

ಬೆಂಗಳೂರು:- ಸರ್ಕಾರಿ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳಲ್ಲಿ ತೀವ್ರ ಔಷಧ ಕೊರತೆ ಎದುರಾಗಿದೆ ಎಂದು ಸಿಎಜಿ ವರದಿಯಲ್ಲಿ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ.

2020-21ರಲ್ಲಿ ರಾಜ್ಯದ ಆರೋಗ್ಯ ಸಂಸ್ಥೆಗಳು ನಿಗಮಕ್ಕೆ 761 ಅಗತ್ಯ ಔಷಧಗಳ ಖರೀದಿಗೆ ಮನವಿ ಸಲ್ಲಿಸಿದ್ದವು. ಆದರೆ, ಆ ಪೈಕಿ 238 ಔಷಧಗಳನ್ನು ಮಾತ್ರ ಖರೀದಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ. ಉಳಿದಂತೆ ಸ್ಥಳೀಯವಾಗಿ ಖರೀದಿಸಲು ಸಂಸ್ಥೆಗಳಿಗೆ ಅನುಮತಿ ನೀಡಲಾಗಿತ್ತು.

ಕರ್ನಾಟಕದ ಆರೋಗ್ಯ ಸಂಸ್ಥೆಗಳಲ್ಲಿ ಅಗತ್ಯ ಔಷಧಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಇದೆ. ಇದು ಎಷ್ಟರ ಮಟ್ಟಿಗೆ ಎಂದರೆ, ಭಾರತೀಯ ಸಾರ್ವಜನಿಕ ಆರೋಗ್ಯ ಗುಣಮಟ್ಟ ಮಾನದಂಡಗಳಿಗಿಂತ ತೀರಾ ಕಡಿಮೆ ಎಂಬುದು ಭಾರತೀಯ ಮಹಾ ಲೆಕ್ಕಪರಿಶೋಧಕ ವರದಿಯಿಂದ ತಿಳಿದುಬಂದಿದೆ. ವರದಿಯ ಪ್ರಕಾರ, ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ 2017-18 ಮತ್ತು 2021-22 ರ ನಡುವೆ ರಾಜ್ಯಾದ್ಯಂತ ಆರೋಗ್ಯ ಸಂಸ್ಥೆಗಳು ಮನವಿ ಸಲ್ಲಿಸಿದ ಪ್ರಮಾಣದಲ್ಲಿ ಅಗತ್ಯ ಔಷಧಿಗಳನ್ನು ಖರೀದಿಸಿಯೇ ಇಲ್ಲ ಎನ್ನಲಾಗಿದೆ.

2016-22ರಲ್ಲಿ ತಪಾಸಣೆ ನಡೆಸಿದ ಎಲ್ಲಾ ಐದು ಜಿಲ್ಲೆಗಳಲ್ಲಿ (ಬಳ್ಳಾರಿ, ಬೆಂಗಳೂರು ನಗರ, ಧಾರವಾಡ, ಕೋಲಾರ ಮತ್ತು ಮೈಸೂರು) ಅಗತ್ಯ ಔಷಧಿ ಪೂರೈಕೆಯ ಒಟ್ಟಾರೆ ಶೇಕಡಾವಾರು ಪ್ರಮಾಣ ಸ್ಥಿರವಾಗಿ ಶೇಕಡಾ 35 ಕ್ಕಿಂತ ಕಡಿಮೆಯಾಗಿದೆ ಎಂದು ಸಿಎಜಿ ವರದಿ ತಿಳಿಸಿದೆ.

ಆರೋಗ್ಯ ಸಂಸ್ಥೆಗಳು ಸ್ಥಳೀಯವಾಗಿ ಕೆಲವು ಔಷಧಿಗಳನ್ನು ಖರೀದಿಸುವುದರಿಂದ ವೆಚ್ಚದಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಸಿಎಜಿ ವರದಿ ತಿಳಿಸಿದ್ದು, ಆ ಕುರಿತ ವಿವರವನ್ನೂ ಒದಗಿಸಿದೆ.

ಹೊಸ ವಿದ್ಯುತ್​ ಕನೆಕ್ಷನ್​ ನೀಡಲು 21 ಸಾವಿರ ರೂ. ಲಂಚ ಪಡೆದಿದ್ದ ಲಗ್ಗೆರೆಯ ಬೆಸ್ಕಾಂ ಇಂಜಿನಿಯರ್ ಸಸ್ಪೆಂಡ್​

Leave a Reply

Your email address will not be published. Required fields are marked *