BBMP
Loading ...

Ganapa

ಅನಾರೋಗ್ಯದಿಂದ ಬಳಲುತ್ತಿದ್ದ ಕೆಂಪ, ಗಣಪ ಹಾಗೂ ಕರಿಯ 2 ಖ್ಯಾತಿಯ ನಟ ಸಂತೋಷ್ ಬಾಲರಾಜ್ ಇಂದು ಬೆಳಗ್ಗೆ 9.45ರ ಸುಮಾರಿಗೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಸಂತೋಷ್​ ಬಾಲರಾಜ್​ ಅವರಿಗೆ 35 ವರ್ಷ ವಯಸ್ಸಾಗಿತ್ತು. ಜಾಂಡೀಸ್​ನಿಂದ ಬಳಲುತ್ತಿದ್ದ ಸಂತೋಷ್, ಕೆಲ ದಿನಗಳ ಹಿಂದೆ ಕುಮಾರಸ್ವಾಮಿ ಲೇಔಟ್​ನ ಸಾಗರ್ ಅಫೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಬಾಲರಾಜ್​ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ನೆ (ಆಗಸ್ಟ್​ 04) ಆರೋಗ್ಯದಲ್ಲಿ ಕೊಂಚ ಮಟ್ಟಿಗಿನ ಚೇತರಿಕೆ ಕಂಡಿತ್ತು. ಆದರೆ, ಇಂದು ಬೆಳಗ್ಗೆ ಸಾವಿಗೀಡಾಗಿದ್ದಾರೆ.

ಸಂತೋಷ್​ ಅವರು ಹಿರಿಯ ನಿರ್ಮಾಪಕ‌ ಆನೆಕಲ್ ಬಾಲರಾಜ್ ಅವರ ಪುತ್ರ. ಕರಿಯ-2, ಕೆಂಪ, ಗಣಪ, ಬರ್ಕ್ಲಿ ಹಾಗೂ ಸತ್ಯ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ, ಜನಮನ್ನಣೆ ಗಳಿಸಿದ್ದಾರೆ. ಜಾಂಡೀಸ್ ಮೈಗೆಲ್ಲ ಹರಡಿ ಗಂಭೀರ ಸ್ಥಿತಿ ತಲುಪಿದ್ದರು. ಅಲ್ಲದೆ, ನಾಲ್ಕೈದು ದಿನಗಳಿಂದ ಕೋಮಾಗೆ ಜಾರಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.

ಇಂದು ಸಾರಿಗೆ ನೌಕರರ ಮುಷ್ಕರ: ಬಸ್ ನಿಲ್ದಾಣಗಳಲ್ಲಿ ಕಾಯುತ್ತಿರುವ ಜನ, ಬಸ್​ಗಳಿಲ್ಲದೇ ಪರದಾಟ

Leave a Reply

Your email address will not be published. Required fields are marked *