BBMP
Loading ...

Darshan

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್ ಕಳೆದ ವರ್ಷ ಜೂನ್​ನಲ್ಲಿ ಅರೆಸ್ಟ್ ಆಗಿದ್ದರು. ಕರ್ನಾಟಕ ಹೈಕೋರ್ಟ್​ನಿಂದ ಜಾಮೀನು ಪಡೆದು ಅವರು ಹಾಯಾಗಿ ಸುತ್ತಾಡಿಕೊಂಡಿದ್ದರು. ಸುಪ್ರೀಂಕೋರ್ಟ್ ಸದ್ಯ ದರ್ಶನ್ (Darshan) ಜಾಮೀನನ್ನು ರದ್ದು ಮಾಡಿದೆ. ಅಲ್ಲದೆ, ದರ್ಶನ್​ಗೆ ಯಾವುದೇ ಐಷಾರಾಮಿ ಸವಲತ್ತು ಸಿಗದಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದೆ. ಈ ಕಾರಣದಿಂದಲೇ ದರ್ಶನ್ ಜೈಲಿನಲ್ಲಿ ಸಾಕಷ್ಟು ತೊಂದರೆ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.

ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾ ಜೈಲಿನಲ್ಲಿ ಇಡಲಾಗಿದೆ. ದರ್ಶನ್​ ಆರಂಭದಲ್ಲಿ ಇಲ್ಲೇ ಇದ್ದರು. ಅವರಿಗೆ ಐಷಾರಾಮಿ ಸವಲತ್ತು ಒದಗಿಸಲಾಯಿತು. ಇದರ ಫೋಟೋಗಳು ಕೂಡ ವೈರಲ್ ಆದವು. ಈ ಪ್ರಕರಣದಲ್ಲಿ ಕೇಸ್ ಕೂಡ ದಾಖಲಾಗಿದೆ. ಈ ವಿಚಾರಗಳನ್ನು ಗಮನಿಸಿದ್ದ ಸುಪ್ರೀಂಕೋರ್ಟ್ ದರ್ಶನ್​ಗೆ ಯಾವುದೇ ಸವಲತ್ತು ಸಿಗದಂತೆ ನೋಡಿಕೊಳ್ಳಿ ಎಂದು ಹೇಳಿದೆ.

ಈ ಬಾರಿ ಜೈಲಿನ ಮ್ಯಾನ್ಯುಯಲ್ ಪ್ರಕಾರವೇ ಅಧಿಕಾರಿಗಳು ದರ್ಶನ್​ನ ನಡೆಸಿಕೊಳ್ಳುತ್ತಿದ್ದಾರೆ. ಕಟ್ಟುನಿಟ್ಟಾಗಿ ಅವರಿಗೆ ಜೈಲು ಊಟವನ್ನೇ ನೀಡಬೇಕಿದೆ. ಮನೆಯಿಂದ ಯಾವುದೇ ಊಟವನ್ನು ತರುವಂತಿಲ್ಲ. ಜೈಲಿನ ಮೆನುವಿನಂತೆ ಊಟ-ತಿಂಡಿ ನೀಡಲಾಗುತ್ತಿದೆ. ಕಳೆದ ಬಾರಿ ಮನೆ ಊಟದ ವ್ಯವಸ್ಥೆ ಇತ್ತು. ಆದರೆ, ಈ ಬಾರಿ ಅದಕ್ಕೆ ಬ್ರೇಕ್ ಬಿದ್ದಿದೆ.

ಎರಡು ಬೆಡ್​ಶೀಟ್ ಕೊಡಿ
ಸದ್ಯ ಬೆಂಗಳೂರಿನಲ್ಲಿ ಮಳೆಯ ವಾತಾವರಣ ಇದೆ. ಹೀಗಾಗಿ ಹವಾಮಾನ ತಂಪಾಗಿದೆ. ಈ ವೇಳೆ ಹೊದ್ದುಕೊಳ್ಳಲು ಒಂದು ಬೆಡ್​ಶೀಟ್ ಸಾಕಾಗೋದಿಲ್ಲ. ಹೀಗಾಗಿ, ದರ್ಶನ್ ಎರಡು ಬೆಡ್​ಶೀಟ್ ಕೇಳಿದ್ದಾರೆ. ಆದರೆ, ಜೈಲಿನ ಮ್ಯಾನ್ಯುಯಲ್ ಪ್ರಕಾರ ಒಂದೇ ಬೆಡ್​ ಶೀಟ್ ನೀಡಲಾಗಿದೆ. ನಂತರ ಮರು ಮಾತಾಡದೇ ಅವರು ಒಂದೇ ಬೆಡ್​ಶೀಟ್ ಪಡೆದು ಹೋಗಿದ್ದಾರೆ.

ಮುಡಿಕೊಟ್ಟಾಗಿದೆ..
ಜೈಲಿಗೆ ಬರುವ ಮೊದಲೇ ದರ್ಶನ್ ಮುಡಿಕೊಟ್ಟಿದ್ದಾರೆ. ಕಳೆದ ಬಾರಿ ಅವರಿಗೆ ಕೂದಲು ಉದುರುವ ಸಮಸ್ಯೆ ಕಾಡಿತ್ತು. ಸದ್ಯ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಕ್ವಾರಂಟೈನ್ ಸೆಲ್​ನಲ್ಲಿ ಇದ್ದಾರೆ. ಆ ಬಳಿಕ ಅವರನ್ನು ಮುಖ್ಯ ಸೆಲ್​ಗೆ ವರ್ಗಾವಣೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *