BBMP
Loading ...

Darshan

ನಟ ದರ್ಶನ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಇದ್ದಾರೆ. ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅವರು ಜೈಲು ಸೇರಿದ್ದಾರೆ. ನಿತ್ಯವೂ ದರ್ಶನ್ ಫ್ಯಾನ್ಸ್ ಜೈಲಿನ ಎದುರು ಸೇರುತ್ತಿದ್ದಾರೆ. ದರ್ಶನ್ ಪರ ಘೋಷಣೆ ಕೂಗುತ್ತಿದ್ದಾರೆ. ದರ್ಶನ್ ಅವರನ್ನು ಭೇಟಿಗೆ ಪೊಲೀಸರ ಬಳಿ ಅವಕಾಶ ಕೇಳುತ್ತಿದ್ದಾರೆ. ಆದರೆ, ಅದು ಸಾಧ್ಯವಿಲ್ಲ. ಹೀಗಾಗಿ ದರ್ಶನ್ ಅವರೇ ಈಗ ಅಭಿಮಾನಿಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ.

ಜೈಲಿನಿಂದಲೇ ನಟ ದರ್ಶನ್ ಮನವಿ ಮಾಡಿದ್ದಾರೆ. ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ‘ಯಾರೂ ಜೈಲಿನ ಬಳಿ ಬರಬೇಡಿ’ ಎಂದು ಅಭಿಮಾನಿಗಳ ಬಳಿ ದರ್ಶನ್ ಮನವಿ ಮಾಡಿದ್ದಾರೆ. ಜೈಲಿನ ನಿಯಮಗಳ ಪ್ರಕಾರ ಅಭಿಮಾನಿಗಳ ಭೇಟಿ ಅಸಾಧ್ಯ. ಹೀಗಾಗಿ ಸುಮ್ಮನೆ ಬಂದು ಸಮಯ ವ್ಯರ್ಥ ಮಾಡದಂತೆ ದರ್ಶನ್ ಕೋರಿದ್ದಾರೆ ಎನ್ನಲಾಗಿದೆ.

‘ಜೈಲಿನ ಬಳಿ ನನ್ನ ಭೇಟಿಗೆ ಬಂದು ನೀವು ಕಾಯುವುದು, ನನ್ನ ಭೇಟಿಗೆ ಅವಕಾಶ ಸಿಗದೆ ನಿರಾಸೆಯಿಂದ ವಾಪಸ್ ಹೋಗುವುದು ಬೇಡ’ ಎಂದು ದರ್ಶನ್ ಅವರು ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ. ಇತ್ತೀಚೆಗೆ ಸೌಮ್ಯ ಹೆಸರಿನ ವಿಶೇಷ ಚೇತನ ಯುವತಿ ದರ್ಶನ್ ಭೇಟಿಗೆ ಬಂದಿದ್ದರು. ಜೈಲಿನ ಬಳಿ ಬಂದು ದರ್ಶನ್ ಭೇಟಿಗೆ ಹಠ ಮಾಡಿದ್ದರು. ಇದನ್ನು ಕೇಳಿ ದರ್ಶನ್ ಬೇಸರಗೊಂಡಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಸೂರ್ಯಕಾಂತ್ ಹೆಸರಿನ ವಿಶೇಷ ಚೇತನ ಕೂಡ ಆಗಮಿಸಿದ್ದ.

ಈ ರೀತಿ ಆಗಮಿಸಿದವರಿಗೆ ದರ್ಶನ್ ಭೇಟಿ ಅಸಾಧ್ಯ. ಹೀಗಾಗಿ, ಈ ಎಲ್ಲಾ ವಿಚಾರ ತಿಳಿದು ಅಭಿಮಾನಿಗಳ ಬಳಿ ದರ್ಶನ್ ಮನವಿ ಮಾಡಿಕೊಂಡಿದ್ದಾರೆ. ಇದನ್ನು ಅಭಿಮಾನಿಗಳು ಪಾಲಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಐಶ್ವರ್ಯ ಹೆಗ್ಡೆ ಸ್ಪರ್ಧೆ? ಡಿಸಿಎಂ ಡಿಕೆ ಶಿವಕುಮಾರ್ ಕೊಟ್ಟ ಸ್ಪಷ್ಟನೆ ಹೀಗಿದೆ….

Leave a Reply

Your email address will not be published. Required fields are marked *