ಬೆಂಗಳೂರು: ಪಿಸ್ತೂಲ್ ಹಿಡಿದು ಪಬ್ಗೆ ಬಂದು ಆತಂಕ ಸೃಷ್ಟಿಸಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಎಲ್ಲೆಡೆ ಓಡಾಡುತ್ತಿದ್ದ, ಏಕಾಏಕಿ ರಾಜಾಜಿನಗರದಲ್ಲಿರುವ ಜಾಮಿಟ್ರಿ ಪಬ್ಗೆ ಬಂದಿದ್ದಾರೆ. ಪೊಲೀಸ್, ಬಾಂಬ್ ಸ್ಕ್ವಾಡ್ ಸ್ಥಳದಲ್ಲಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಪಬ್ನಲ್ಲಿ ಆತ ಅವಿತುಕೊಂಡಿದ್ದು, ಆತನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ. ಪಿಸ್ತೂಲ್ ಇರುವುದರಿಂದ ಈ ಪ್ರಕರಣವನ್ನು ತುಂಬಾ ಸೂಕ್ಷ್ಮವಾಗಿ ತೆಗೆದುಕೊಳ್ಳಬೇಕಿದೆ. ಘಟನಾ ಸ್ಥಳದಲ್ಲಿ ಡ್ರೋನ್ ಹಾರಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕಳ್ಳತನಕ್ಕೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಆಗಮಿಸಿದ್ದಾರೆ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ನಡೆದಿದೆ. ಅಧ್ಯ ಆತ ಪಬ್ನ ಒಳಗಡೆಯೇ ಅವಿತುಕೊಂಡಿದ್ದಾನೆ.
ವಿಕಾಶ್ ಕುಮಾರ್ ಎಂಬುವವರು ಹೇಳಿಕೆ ನೀಡಿದ್ದು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಜಾಮಿಟ್ರಿ ಪಬ್ನ ಖಾಸಗಿ ಗಾರ್ಡ್ 112ಕ್ಕೆ ಕರೆ ಮಾಡಿದ್ದಾರೆ. ಪಬ್ನ ಹಿಂಬಾಗಿಲಿನಿಂದ ವೆಪನ್ ತೋರಿಸಿ ವ್ಯಕ್ತಿಯೊಬ್ಬ ಎಂಟ್ರಿಕೊಟ್ಟಿದ್ದು, ಆತ ಮಾಸ್ಕ್ ಧರಿಸಿದ್ದ, ಬೆದರಿಸಿದ್ದಾನೆ ಎಂದು ದೂರು ನೀಡಿದ್ದರು ಎಂದು ಹೇಳಿದ್ದಾರೆ.
ಕ್ಯೂಆರ್ ಟೀಂ ಸೇರಿದಂತೆ ನಮ್ಮ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ, ಮ್ಯಾನೇಜರ್ ಡ್ರಾಯರ್ ನಲ್ಲಿ 50. ಸಾವಿರ ಕಳುವಾಗಿದೆ ಎಂದು ಹೇಳಿಕೆ ನೀಡಿದ್ದಾರೆ ಸಿಸಿ ಕ್ಯಾಮರಾ ಬ್ಲಾಕ್ ಮಾಡಿದ್ದಾರೆ. ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಡೋರ್ ಬ್ರೇಕ್ ಮಾಡಿ ಎಂಟ್ರಿ ಕೊಟ್ಟಿದ್ದಾನೆ ಎತನಿಖೆ ಮುಂದುವರೆದಿದೆ.
ಪಾಕಿಸ್ತಾನದಿಂದ ಸೈಬರ್ ದಾಳಿ ಸಾಧ್ಯತೆ: ಸಾರ್ವಜನಿಕರಿಗೆ ಪೊಲೀಸ್ ಆಯುಕ್ತ ದಯಾನಂದ್ ಮಹತ್ವದ ಎಚ್ಚರಿಕೆ!


