ಬೆಂಗಳೂರು: ಕರ್ನಾಟಕ ಸರ್ಕಾರವು ಬಿ – ಖಾತಾ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಇಲ್ಲಿಯ ವರೆಗೆ ರಾಜ್ಯದಲ್ಲಿರುವ ಅನಧಿಕೃತ ಹಾಗೂ ರೆವಿನ್ಯೂ ಆಸ್ತಿಗಳಿಗೆ ಒಂದು ಬಾರಿ ಬಿ ಖಾತಾ ನೀಡಲಾಗುತ್ತಿದೆ. ಇದೀಗ ಯಾವುದೇ ಖಾತಾ ಇಲ್ಲದೆ ಇರುವವರೊಂದಿಗೆ ಬಿ – ಖಾತಾ ಆಸ್ತಿಯನ್ನು ಹೊಂದಿರುವವರಿಗೂ ಗುಡ್‌ನ್ಯೂಸ್ ನೀಡುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.
ಇದೀಗ ಬೆಂಗಳೂರಿನ ಎಲ್ಲಾ ಬಿ – ಖಾತಾ ಆಸ್ತಿಗಳಿಗೂ ಎ – ಖಾತಾ ಸೌಲಭ್ಯ ಸಿಗಲಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2024 (ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ವ್ಯಾಪ್ತಿಯಲ್ಲಿ ಮಾನ್ಯತೆ ಸಿಗದೆ ಇರುವ ಹಾಗೂ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಇಲ್ಲದೆ ಇರುವ ಬಿ ಖಾತಾ ಆಸ್ತಿಗಳಿಗೆ ಎ- ಖಾತಾ ಕೊಡುವುದಕ್ಕೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಬಿ – ಖಾತಾ ಆಸ್ತಿದಾರರು ಸರ್ಕಾರಕ್ಕೆ ದುಬಾರಿ ದಂಡ ಪಾವತಿ ಮಾಡಿದ್ದು ಅಲ್ಲದೇ ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರಿದ್ದರೂ ಅವರಿಗೆ ಎ – ಖಾತಾ ಸೌಲಭ್ಯಗಳು ಸಿಕ್ಕಿರಲಿಲ್ಲ. ಇದೀಗ ಎ – ಖಾತಾ ಸೌಲಭ್ಯದೊಂದಿಗೆ ಸರ್ಕಾರ ಕಟ್ಟಡ ನಿರ್ಮಾಣಕ್ಕೂ ಅನುಕೂಲ ಮಾಡಿಕೊಡಲು ಮುಂದಾಗಿದೆ. ಯಾವುದೇ ಅನುಮೋದನೆ ಪಡೆಯದ ಬಡಾವಣೆಗಳಲ್ಲಿ ನಿರ್ಮಿಸಲಾಗಿದ್ದ ನಿವೇಶನ ಹಾಗೂ ಕಟ್ಟಡ ಹೊಂದಿರುವ ಆಸ್ತಿದಾರರು ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಈ ರೀತಿಯ ಆಸ್ತಿದಾರರಿಗೆ ಲಾಭವಾಗುತ್ತಿದೆ.
ಬೆಂಗಳೂರಿನಲ್ಲಿರುವ ಎಲ್ಲಾ ಬಿ ಖಾತಾದ ಆಸ್ತಿಗಳಿಗೂ ಎ ಖಾತಾದ ಎಲ್ಲಾ ಮಾದರಿಯ ಸೌಲಭ್ಯಗಳು ಸಿಗಲಿವೆ. ಮಾರ್ಗಸೂಚಿ ದರದಂತೆಯೇ ಅಗತ್ಯವಾದ ಶುಲ್ಕ ಹಾಗೂ ಅಭಿವೃದ್ಧಿ ಶುಲ್ಕವನ್ನು ಬಿ ಖಾತಾದಾದರರು ಎ – ಖಾತಾ ಪಡೆದುಕೊಳ್ಳಲು ಬಿಬಿಎಂಪಿಗೆ ಪಾವತಿ ಮಾಡಬೇಕಾಗುತ್ತದೆ. ಶುಲ್ಕ ಪಾವತಿ ಮಾಡಿದ ಮೇಲೆ ಹೊಸದಾಗಿ ಇ-ಖಾತಾ ಸೇರಿದಂತೆ ಕಟ್ಟಡ ನಕ್ಷೆ ಸೇರಿದಂತೆ ಎಲ್ಲಾ ಸೌಲಭ್ಯವೂ ಸಿಗಲಿದೆ. ಇದರ ಮೂಲಕ ಆಸ್ತಿದಾರರು ಕಟ್ಟಡ ನಿರ್ಮಾಣವನ್ನೂ ಮಾಡಿಕೊಳ್ಳಬಹುದಾಗಿದೆ.
ಬಿ – ಖಾತಾ ಆಸ್ತಿದಾರರಿಗೆ ಯಾವಗ ಸಿಗಲಿದೆ ಎ – ಖಾತಾ: ಇನ್ನು ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿರುವ ಬಿ ಖಾತಾ ಆಸ್ತಿದಾರರಿಗೆ ಯಾವಾಗ ಎ – ಖಾತಾ ನೀಡಲಿದೆ ಎನ್ನುವ ಬಗ್ಗೆಯೂ ಮಾಹಿತಿ ನೀಡಿದೆ. ಬಿ ಖಾತಾ ಇರುವ ಆಸ್ತಿದಾರರಿಗೆ ಆನ್‌ಲೈನ್‌ನಲ್ಲೇ ಎ – ಖಾತಾ ಮತ್ತು ಇ ಖಾತಾ ನೀಡುವುದಕ್ಕೆ ಆನ್‌ಲೈನ್ ಸಮಗ್ರ ತಂತ್ರಾಂಶವನ್ನು ಅಳವಡಿಸಿಕೊಳ್ಳಲು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ.
ಕಾವೇರಿ ತಂತ್ರಾಂಶದೊಂದಿಗೆ ಮಾಹಿತಿ ಕಲೆಹಾಕಲಾಗುತ್ತದೆ. ಇದರೊಂದಿಗೆ ಕಂದಾಯ ಇಲಾಖೆ, ಬಿಬಿಎಂಪಿಯ ಕಂದಾಯ ವಿಭಾಗ ಹಾಗೂ ನಗರ ಯೋಜನೆಯ ಅಧಿಕಾರಿಗಳು ಸೇರಿ ಸಮಗ್ರ ತಂತ್ರಾಂಶದ ಮೂಲಕವೇ ಎಲ್ಲಾ ಮಾದರಿಯ ಅನುಮೋದನೆಯನ್ನೂ ಕೊಡಲಿದ್ದಾರೆ. ಇದರಿಂದ ಬಿ ಖಾತಾ ಹೊಂದಿರುವ ಆಸ್ತಿದಾರರಿಗೆ ಅತ್ಯಂತ ಸರಳವಾಗಿ ಎ – ಖಾತಾ ಸಿಗಲಿದೆ. ಅಲ್ಲದೇ ಬಿ ಖಾತಾವನ್ನು ಎ ಖಾತಾ ಆಸ್ತಿಯನ್ನಾಗಿ ಕಾನೂನು ಬದ್ಧವನ್ನಾಗಿಸಿಕೊಳ್ಳುವುದಕ್ಕೆ ಬೇಕಾಗುವ ಶುಲ್ಕದ ಮೊತ್ತವನ್ನೂ ಆನ್‌ಲೈನ್‌ನಲ್ಲೇ ಸಿಗಲಿದೆ ಎಂದು ಹೇಳಲಾಗಿದೆ. ಈ ಎಲ್ಲಾ ಪ್ರಕ್ರಿಯೆಯು ಇದೇ ಆಗಸ್ಟ್ 15ರ ಒಳಗಾಗಿ ಆಗಲಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೇಗೂರು ಪಿಎಸ್ಐ ದರ್ಪಕ್ಕೆ ಕಿವುಡನಾದ ಯುವಕ! ನ್ಯಾಯಕ್ಕಾಗಿ ಕೋರ್ಟ್ ಮೇಲಿದ ಉದಯ್


