Greater Bengaluru News9 : ರಾಜಧಾನಿ ಬೆಂಗಳೂರಿನ ಬಸವೇಶ್ವರ ನಗರದ ಹೋಟೆಲ್ ಬಳಿ ಹೆಂಡತಿ ಜೊತೆ ಜಗಳ ತೆಗೆದ ವ್ಯಕ್ತಿ ಗನ್‌ನಿಂದ ಗುಂಡಿನ ದಾಳಿ ನಡೆಸಿರುವ ಘಟನೆ ಜರುಗಿದೆ.
ದುರದೃಷ್ಟವಶಾತ್ ಗಂಭೀರ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಬಾಲಮುರುಗನ್ ತನ್ನ ಪತ್ನಿ ಮೇಲೆ ಗುಂಡು ಹಾರಿಸಿದ ವ್ಯಕ್ತಿ. ಇವರು ತಮಿಳುನಾಡಿನ ಮೂಲದವರು. ಭುವನೇಶ್ವರಿ ಗುಂಡೇಟಿಗೆ ಗಂಭೀರ ಗಾಯಗೊಂಡು ಮೃತಪಟ್ಟ ಮಹಿಳೆ. ವಿಚಾರ ತಿಳಿದ ತಕ್ಷಣ ಮಾಗಡಿ ರೋಡ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಬಾಲಮುರುಗನ್ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು ಮತ್ತು ಇದೀಗ ಕೆಲಸದಿಂದ ರಾಜೀನಾಮೆ ನೀಡಿದ್ದಾನೆ, ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿಯಾಗಿದ್ದರು. ಇಬ್ಬರೂ ಕೋರ್ಟ್‌ನಲ್ಲಿ ಡಿವೋರ್ಸ್ ಪ್ರಕರಣದಲ್ಲಿ ಹಾಜರಾಗಿದ್ದರು. ನ್ಯಾಯಾಲಯದಿಂದ ಹೊರಬಂದ ನಂತರ ಜಗಳ ಉಂಟಾಗಿದ್ದು, ಈ ವೇಳೆ ಗುಂಡೇಟು ಸಂಭವಿಸಿದೆ. ಆರೋಪಿ ನಂತರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಪೊಲೀಸರು ಪಿಸ್ತೂಲನ್ನು ಅಕ್ರಮವಾಗಿ ತರಿಸಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.


